ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಜ್ಞಾನಿಕ ಸಮಾಜವಾದ ಒಂದು ವ್ಯಾಪಾರದ ಬಗ್ಗೆ ಉಭಯತ್ರರ ಹಿತಗಳು ಒಂದೇ ಎಂದರು. ಪಕ್ಷ, ಫ್ಯಾಸಿಸ್ಟ್ ಸರ್ಕಾರಗಳಿಗೆ ಸಾಕಷ್ಟು ವಸಾಹತು ಮತ್ತು ಮಾರುಕಟ್ಟೆ ಇಲ್ಲದಿದ್ದರೆ ಆಕ್ರಮಣಕ್ಕೆ ಅಖಂಡ ಭೂಭಾಗವಿದೆ ಎಂದು ಸೋವಿಯಟ್ ರಷ್ಯಾದಕಡೆ ಕೈತೋರಿಸಿದರು, టి ಬಗೆದದ್ದು ಒಂದು ಆದದ್ದು ಇನ್ನೊಂದು ಬಂಡವಾಳಶಾಹಿ ಪ್ರಜಾಸತ್ತೆ ಗಳ ಜೀವಾಳ ಫ್ಯಾಸಿಸ್ಟ್ ಸರ್ಕಾರಗಳಿಗೆ ವೇದ್ಯವಾಯಿತು. ದಾಹ ಪೀಡಿತ ನಂತೆ ಹಿಟ್ಲರ್ ಪೋಲೆಂಡ್ ರಾಷ್ಟ್ರದ ಮೇಲೆ ತನ್ನ ಕಣ್ಣು ತಿರುಗಿಸಿದನು. ಬಂಡವಾಳಶಾಹಿ ವ್ಯವಸ್ಥೆಯ ಸಂರಕ್ಷಕನಾದ ಹಿಟ್ಲರ್, ಸಮಸ್ತ ಬಂಡವಾಳ ಶಾಹಿ ರಾಷ್ಟ್ರಗಳನ್ನು ತನ್ನ ದಾಸಾನುದಾಸರಾಗುವಂತೆ ಮಾಡಲು ರಚಿಸಿ ಕೊಂಡಿದ್ದ ವ್ಯೂಹ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕಾಗಳಿಗೆ ಅರಿವಾಯ್ತು. ತಮ್ಮ ರಕ್ಷಕನ ಮೇಲೇ ಯುದ್ಧಕ್ಕೆ ನಿಂತು ದಾಸ್ಯದಿಂದ ಪಾರಾಗುವ ಪ್ರಸಂಗ ಇಂಗೇಂಡ್ ಮತ್ತು ಫ್ರಾನ್ಸ್ಗಳಿಗೆ ಬಂದಿತ್ತು, ಬಂಡವಾಳಶಾಹಿ ವ್ಯವಸ್ಥೆಯ ವಿರಸಗಳು ಪುನಃ ಬಂಡವಾಳಶಾಹಿ ರಾಷ್ಟ್ರ ಗಳನ್ನು ಯುದ್ಧಕ್ಕೆ ಈಡುಮಾಡುತ್ತವೆ ಎಂದು ಕಮ್ಯೂನಿಸ್ಟ್ ಪಕ್ಷಗಳು ಮುನ್ಸೂಚಕವಾಗಿ ಹೇಳುತ್ತಿದ್ದುದು ನಿಜವಾಯಿತು. ಸುಧಾರಕ ಸಮಾಜ ನಾದಿ ಮುಖಂಡರು ಕಾರ್ಮಿಕವರ್ಗಕ್ಕೆ ಪ್ರಸಾರ ಮಾಡುತ್ತಿದ್ದ ವಾದ ಸುಳ್ಳಾಯಿತು. ಪ್ರಜಾಸತ್ತೆಗೆ ಧಕ್ಕೆ ಬಂದಿದೆ ಎಂದು ಸುಧಾರಕರು ಗೊಣಗಿ ದರೇ ವಿನಾ ಯುದ್ಧಕ್ಕೆ ಕಾರಣವನ್ನೂ ಮತ್ತು ಅದರಲ್ಲಿ ತಮ್ಮ ದೇಶ ಗಳ ಪಾತ್ರವನ್ನೂ ಕಾರ್ಮಿಕವರ್ಗಕ್ಕೆ ತಿಳಿಸಲು ಸುಧಾರಕರು ಮರೆಮಾಚಿ ದರು. ಸಾಮೂಹಿಕ ಭದ್ರತೆಗಾಗಿ ಶ್ರಮಿಸಬೇಕೆಂದೂ, ಫ್ಯಾಸಿಸ್ಟ್ ಗಳು ಮಾನವ ನಾಗರಿಕತೆಯ ಶತ್ರುಗಳೆಂದೂ ಪ್ರತಿಭಟನೆಯಿಂದಲೇ ಅವುಗಳ ಸೊಕ್ಕನ್ನು ಮುರಿಯಲು ಸಾಧ್ಯವೆಂದೂ ಪದೇ ಪದೇ ಹೇಳು ತಿದ್ದ ಕಮ್ಯೂನಿಸ್ಟ್ ಪಕ್ಷಗಳನ್ನು ರಷ್ಯಾದ ಕೈಗೊಂಬೆಗಳೆಂದು ಮೂದ ಲಿಸುವುದರಲ್ಲೇ ಸುಧಾರಕರು ಕಾಲನೂಕಿದರು. ಸೋವಿಯಟ್ ರಷ್ಯಾದ ಇರುವಿಕೆ ಮತ್ತು ಮೊದಲಿಂದಲೂ ಅದು ಫ್ಯಾಸಿಸ್ಟ್ ಸರ್ಕಾರಗಳ ಬಗ್ಗೆ ಕೊಡುತ್ತಿದ್ದ ಎಚ್ಚರಿಕೆ ಸುಧಾರಕರಿಗೆ ವಿಷವಾಗಿತ್ತು. ಸರ್ಕಾರ 1938 ರಲ್ಲಿ ಎರಡನೇ ಮಹಾಯುದ್ಧ ಆರಂಭವಾಯಿತು. ಸೋವಿಯಟ್ ರಷ್ಯಾರಾಜತಾಂತ್ರಿಕ ಬುದ್ಧಿವಂತಿಕೆಯಿಂದ ಬಂಡವಾಳಶಾಹಿ ರಾಷ್ಟ್ರಗಳಲ್ಲೇ