ಸಮಾಜವಾದವೇ ಅಥವಾ ಬಂಡವಾಳವಾದವೇ ? ೧೨೯ ಉಂಟಾದ ಯುದ್ಧದಿಂದ ದೂರ ಸರಿದು ನಿಂತಿತು. ಯುದ್ಧದ ಆರಂಭದಲ್ಲಿ ಹಿಟ್ಲರ್ ಮತ್ತು ಮುಸಲೋನಿಯರು ಬಂಡವಾಳಶಾಹಿ ಪ್ರಜಾಸತ್ತೆ ರಾಷ್ಟ್ರ ಗಳನ್ನು ಸಂಪೂರ್ಣವಾಗಿ ಸದೆಬಡಿದರು. ಪೌರ್ವಾತ್ಯದಲ್ಲಿ ಜಪಾನ್ ಅಮೆರಿಕಾವನ್ನು ಸದೆಬಡಿಯಿತು. ಆದರೆ ರಷ್ಯಾ ಮಾತ್ರ ಜರ್ಮನಿ, ಇಟಲಿ ಮತ್ತು ಜಪಾನುಗಳ ಸನ್ನಾಹಕ್ಕೆ ಅಡ್ಡಿ ಬರುವ ಹಾಗೆ ಉಳಿದಿತ್ತು. ಅದನ್ನು ದಮನಮಾಡಿದ ಹೊರತು ಫ್ಯಾಸಿಸ್ಟ್ ಸರ್ಕಾರಗಳ ವಿಜಯ ಸಂಪೂರ್ಣ ವಾದಂತಿರಲಿಲ್ಲ, ಈ ನಿರ್ಧಾರದಿಂದ ಹಿಟ್ಲರ್ 1942 ರಲ್ಲಿ ರಷ್ಯಾದಮೇಲೆ ಯುದ್ಧ ಘೋಷಿಸಿದನು ಅದೇ ಫ್ಯಾಸಿಸ್ಟ್ ದೌರ್ಜನ್ಯದ ಅಂತ್ಯವಾಯಿತು, ಬಂಡವಾಳಶಾಹಿ ಪ್ರಜಾಸತ್ತೆ ರಾಷ್ಟ್ರಗಳ ಸೈನ್ಯಗಳನ್ನು ಹಿಟ್ಲರ್ ನುಚ್ಚು ನೂರು ಮಾಡಿದ್ದನು, ಆದರೆ ಸೋವಿಯಟ್ ರಷ್ಯಾದ ಜನತಾ ಸೈನ್ಯಕ್ಕೆ ಅದುವರೆಗೆ ಅಜೇಯವೆನಿ ಸಿದ್ದ ಫ್ಯಾಸಿಸ್ಟ್ ಸೈನ್ಯಗಳು ಶರಣಾಗತವಾದುವು. ಯುದ್ಧ ಕೊನೆಗೊಂಡಿತು. ರಷ್ಯಾ ಯುದ್ಧದಲ್ಲಿ ಪ್ರವೇಶಿಸಿದನಂತರ ಅಮೆರಿಕಾ, ಇಂಗ್ಲೆಂಡ್ ಮತ್ತು ಫ್ರಾನ್ಸ್ ರಾಷ್ಟ್ರಗಳು ರಷ್ಯಾದೊಡನೆ ಸಖ್ಯ ಬೆಳಸಿದವು. ಈ ನಾಲ್ಕು ರಾಷ್ಟ್ರಗಳೂ ಒಟ್ಟುಗೂಡಿ ಎರಡನೇ ಮಹಾಯುದ್ಧದಲ್ಲಿ ವಿಜಯ ಗಳಿಸಿದವು. ಯಾವ ರಾಷ್ಟ್ರದ ಅಳಿವಿಗಾಗಿ ಬಂಡವಾಳಶಾಹಿ ಪ್ರಜಾಸತ್ತೆ ಸರ್ಕಾರ ಗಳು 1917 ರನಂತರ ಶ್ರಮಿಸಿದವೋ ಅದೇ ಸೋವಿಯಟ್ ರಷ್ಯಾ ಬಂಡ ವಾಳಶಾಹಿ ಪ್ರಜಾಸತ್ತೆ ರಾಷ್ಟ್ರಗಳನ್ನು ತನ್ನ ತ್ಯಾಗದಿಂದ ರಕ್ಷಿಸಿತು. ಸುಧಾರಕ ಸಮಾಜವಾದಿಗಳು ಮುಖಭಂಗಹೊಂದಿದರು. ಬಂಡವಾಳಶಾಹಿ ವ್ಯವಸ್ಥೆಯ ಹೊಲಸು ಜನಸಮುದಾಯಕ್ಕೆ ವೇದ್ಯವಾಯಿತು. ಬಂಡವಾಳ ಶಾಹಿ ಪ್ರಜಾಸತ್ತೆ ರಾಷ್ಟ್ರಗಳಲ್ಲಿ ಮಾರ್ಕ್ಸ್-ಏಂಗೆಲ್ಪರ ಸಮಾಜವಾದೀ ತಮ್ಮ ಜನಪ್ರಿಯವಾಯಿತು. ಅಧ್ಯಯನ :
Marxism and Revisionism: Lenin Marx-Engels-Marxism, Pages 219-228, F. L. P. H., Moscow. Fabian Essays, with a New Introduction by G. B. Shaw. Fascism and Social Revolution. R. P. Dutt: Martin Lawrence, London, 1934.