ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ವೈಜ್ಞಾನಿಕ ಸಮಾಜ ವಾದ

ಸೂಚಿಸಿದನು. ಆಳುವ ಕೆಲಸವನ್ನು ಅವರ ಮುಖ್ಯಕರ್ತವ್ಯವನ್ನಾಗಿ
ಮಾಡುವುದರಿಂದ ರಾಜ್ಯಕ್ಕೆ ಕ್ಷೇಮ ಲಭಿಸುತ್ತದೆಂದು ಭಾವಿಸಿದನು.
ಸ್ವಾಮ್ಯ ಅಥವ ಒಡೆತನ ಕಾರ್ಯತತ್ಪರತೆಗೆ ಭಂಗವನ್ನೂ ಸ್ವಾರ್ಥವನ್ನೂ
ತರುವುದರಿಂದ ಆಳುವ ವರ್ಗವನ್ನು ಅವುಗಳಿಂದ ಪಾರುಮಾಡಲು ಯತ್ನಿಸಿ
ದನು. " ಕಮ್ಯೂನಿಸಂ " ಎಂಬ ಶಿರೋನಾಮೆಯಲ್ಲಿ ಆಳುವ ವರ್ಗಕ್ಕೆ
ತನ್ನದೆಂದು ಹೇಳಿಕೊಳ್ಳುವ ಯಾವ ಸ್ವಾಮ್ಯವೂ ಇರಕೂಡದೆಂದನು.
ಆದರೆ ತನ್ನ " ಕಮ್ಯೂನಿಸಂ " ಅನ್ನು ರಾಜ್ಯದ ಇನ್ನಾವ ವರ್ಗಕ್ಕೂ ಅನ್ವ
ಯಿಸಲು ಇಷ್ಟಪಡಲಿಲ್ಲ. ಸಮಾಜದಲಿ ಕರ್ತವ್ಯಶೂನ್ಯತೆಯಿಂದ
ಆಯಾ ಮನುಷ್ಯನು ತನ್ನ ಸ್ವಭಾವಕ್ಕೆ ಅನುಗುಣವಾದ ಕಾರ್ಯವನ್ನು
ಮಾಡದೇ ಇರುವುದರಿಂದ ಮತ್ತು ಈ ಬಗೆಯ ತಿಳಿವಳಿಕೆಯನ್ನು ವಿದ್ಯಾ
ಬ್ಯಾಸದಮೂಲಕ ಕೊಡದೆ ಇರುವುದರಿಂದ ಸಮಾಜದಲ್ಲಿ ಅಶಾಂತಿ, ಜಗಳ,
ಸ್ವಾರ್ಥತೆ ಉಂಟಾಗಿವೆ ಎಂದು ತಿಳಿಸಿದನು.
ಪ್ಲೇಟೋ ತನ್ನ ಜೀವಿತಕಾಲದಲ್ಲಿಯೇ ತನ್ನ ಆದರ್ಶರಾಜ್ಯದ
ನಿಷ್ಪ್ರಯೋಜಕತೆಯನ್ನು ಕಂಡನು. ಆದರ್ಶಸಮಾಜವನ್ನು ಪ್ರಯೋಗ
ರೂಪದಲ್ಲಿ ತರಲು ಯತ್ನಿಸಿ ವಿಫಲನಾದನು. ಆಥೆನ್ಸ್ ನಗರದ ವೈಪರೀತ್ಯ
ಗಳು ಪ್ಲೇಟೋ ಭಾವಿಸಿದಂತೆ " ತನ್ನದು " " ನನ್ನದು " ಎಂಬ ಸ್ವಾರ್ಥ
ದಿಂದಾಗಲೀ ಅಥವಾ ಪ್ರತಿಯೊಬ್ಬನೂ ತನ್ನ ಸ್ವಭಾವಕ್ಕೆ ಅನುಗುಣವಾದ
ಕಾರ್ಯವನ್ನು ಮಾಡದೇ ಇರುವುದರಿಂದಾಗಲೀ ಉಂಟಾಗಿರಲಿಲ್ಲ. ಆಥೆನ್ಸ್
ನಗರದ ಸಮಾಜವ್ಯವಸ್ಥೆ ಗುಲಾಮರ ದುಡಿಮೆಯನ್ನವಲಂಬಿಸಿದ್ದಿತು.
ಶೋಷಣೆಯ ಮೂಲಕ ಜೀವನ ನಡೆಸುತ್ತಿದ್ದ ಆಥೆನ್ಸ್ ನಗರದ ಪೌರರು
ಆರ್ಥಿಕಾಭಿವೃದ್ಧಿಯನ್ನು ಕೈಗೊಳ್ಳಲಿಲ್ಲ. ಸಮಾಜದ ಆರ್ಥಿಕವ್ಯವಸ್ಥೆ
ಕ್ಷೀಣಿಸತೊಡಗಿತು. ಮುಳುಗುತ್ತಿರುವ ಹಡಗಿನಿಂದ ಇಲಿಗಳು ಚದರು
ವಂತೆ ಪೌರರು ಅಳಿದುಳಿದ ಸಂಪತ್ತಿನ ಲೂಟಿಯಲ್ಲಿ ನಿರತರಾದರು. ಸ್ಥಿತಿ
ಗತಿಗಳು ಹೀಗಿರುವಲ್ಲಿ ಆದರ್ಶಸಮಾಜದ ರಚನೆಯನ್ನು ಆಥೆನ್ಸ್ ನಗರದ
ಯಾವ ಪೌರನೂ ಒಪ್ಪುವಂತಿರಲಿಲ್ಲ. ಪ್ಲೇಟೋವಿನ ಆದರ್ಶಸಮಾಜ
ಆಥೆನ್ಸ್ ನಗರ ಶ್ರೀಮಂತರ ನೇತೃತ್ವದಲ್ಲಿ ಗಳಿಸಿದ್ದ ಉಚ್ಛ್ರಾಯಸ್ಥಿತಿಯ
ಚರಮಗೀತೆಯಾಯಿತು. ಆದರೂ, ಪ್ಲೇಟೋ ಪ್ರತಿಪಾದಿಸಿದ ರಾಜ್ಯನೀತಿ
ಇಲ್ಲಿಯವರೆಗೂ ಕಲ್ಪನಾ ಸಾಹಿತ್ಯವಾಗಿ ಉಳಿದಿದೆ. ಆತನ "ಕಮ್ಯೂ