೧೫೦ ವೈಜ್ಞಾನಿಕ ಸಮಾಜವಾದ ರಾಷ್ಟ್ರೀಕರಣಮಾಡುವ ಸಂದರ್ಭದಲ್ಲಿ ಖಾಸಗೀ ಸ್ವಾಮ್ಯಕ್ಕೆ ಸೂಕ್ತ ಪರಿ ಹಾರ ದ್ರವ್ಯವೂ ಅಗತ್ಯವೆಂದರು, ಒಪ್ಪಿಗೆಯಂತೂ ಬರುವಹಾಗೆಯೇ ಇಲ್ಲ, ಪರಿಹಾರವನ್ನು ಕೊಡಲು ಬೊಕ್ಕಸದಲ್ಲಿ ಹಣವಿಲ್ಲ ಸಮಾಜವಾದ ಹಿಂದಿನ ಬಾಗಿಲಿನಿಂದ ಪರಾರಿಯಾಯಿತು. ಸುಧಾರಕ ಸಮಾಜವಾದಿ ಗಳಿಂದಲೇ ಸ್ವಾಮ್ಯಕ್ಕೆ ರಕ್ಷಣೆ ಸಿಕ್ಕಿತು. ಮಿಕ್ಕಿತರ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಅಮೆರಿಕಾ ನೇರವಾಗಿ ದೇಶದ ಒಳಾಡಳಿತಗಳಲ್ಲಿ ಪ್ರವೇಶಿಸಿ ಕಾರ್ಮಿಕವರ್ಗ ಅಧಿಕಾರಕ್ಕೆ ಬರುವುದನ್ನು ತಡೆಯಿತು. ಚುನಾವಣೆಗಳು ಅಣುಕು ಚುನಾವಣೆಗಳಾದವು. ಕಮ್ಯ ನಿಸ್ಟ್ ಪಕ್ಷ ಚುನಾವಣೆಗಳಲ್ಲಿ ಬಹುಮತಗಳಿಸುವುದನ್ನು ಮುರಿದರು. ಕಮ್ಯೂನಿಸ್ಟ್ ಪಕ್ಷದ ಸದಸ್ಯರನ್ನೊಳಗೊಂಡ ಮಿಶ್ರ ರಾಷ್ಟ್ರೀಯ ಸರ್ಕಾರ ವಿದ್ದ ಫ್ರಾನ್ಸ್ ಮತ್ತು ಇಟಲಿ ದೇಶಗಳಲ್ಲಿ ಕಮ್ಯೂನಿಸ್ಟ್ ರನ್ನು ಅಧಿಕಾರ ದಿಂದ ಉಚ್ಚಾಟನೆಮಾಡಲಾಯಿತು, ಸುಧಾರಕ ಸಮಾಜವಾದಿಗಳು ಕಮ್ಯೂನಿಸ್ಟ್ ಸದಸ್ಯರ ಉಚ್ಚಾಟನೆಯನ್ನು ಪ್ರಜಾಸತ್ತೆಗೆ ಗೆಲುವೆಂದು ಘೋಷಿಸಿದರು. ಆದರೆ ಸುಧಾರಕ ಸಮಾಜವಾದಿಗಳ ಉಚ್ಚಾಟನೆಯೂ ಬಹು ದೂರವಿರಲಿಲ್ಲ. ಕ್ರಮೇಣ ಸುಧಾರಕರೂ ಸಹ ಉಚ್ಛಾಟನೆ ಹೊಂದಿ ದರು. ಅಪ್ಪಟ ಪ್ರತಿಗಾಮಿ ಸರ್ಕಾರಗಳು ಬಂದವು.1 (1) ಎರಡನೇ ಮಹಾಯುದ್ಧದ ಕಾಲದಲ್ಲಿ ಹಿಟ್ಲರ್ ಸೇನೆಗಳಿಂದ ಆಕ್ರ ಮಿತವಾದ ಪ್ರದೇಶಗಳಲ್ಲಿ ಪ್ರತಿಭಟನೆಯನ್ನು ಸಜ್ಜುಗೊಳಿಸಿದ್ದರಲ್ಲಿ ಕಮ್ಯೂನಿಸ್ಟ್ ಪಕ್ಷದ ಪಾತ್ರ ಬಹಳ ಹಿರಿದಾದುದು, ದೇಶದ ಬಂಡವಾಳವರ್ಗದ ಮುಖಂಡರು ಹಿಟ್ಲರ್ ಜೊತೆಯಲ್ಲಿ ರಾಜಿಸಂಧಾನಗಳನ್ನು ಮಾಡಿಕೊಂಡು ಕೈಗೊಂಬೆ ಸರ್ಕಾರ ಗಳನ್ನು (Quisling Governments) ರಚಿಸಲು ನಿರತರಾಗಿರುವಾಗ ಕಮ್ಯೂ ನಿಸ್ಟ್ ಪಕ್ಷ ಜನತಾ ಪ್ರತಿಭಟನಾ ಚಳವಳಿಗೆ ಕರೆಕೊಟ್ಟಿತು. (People's Resistance Movement), ಕಮ್ಯೂನಿಸ್ಟ್ ಪಕ್ಷ ಜನರ ಅಚ್ಚು ಮೆಚ್ಚನ್ನೂ ವಿಶ್ವಾಸವನ್ನೂ ಗಳಿಸಿತು. ರಾಷ್ಟ್ರದ ಮುಂದಿನ ನಿರ್ಮಾಣದ ಬಗ್ಗೆ ಸಮಾಜ ವಾದೀ ಕಾರ್ಯಕ್ರಮವನ್ನು ಮುಂದಿಟ್ಟಿತು. ಯುದ್ಧಾನಂತರದ ಬೆಳವಣಿಗೆಗಳನ್ನು ವೀಕ್ಷಿಸುತ್ತಿದ್ದ ಅಮೆರಿಕಾ ಮತ್ತು ಬ್ರಿಟಿಷ್ ಸರ್ಕಾರಗಳಿಗೆ ಪೂರ್ವಯೂರೋಪಿನ ಹಲವು ದೇಶಗಳಲ್ಲಿ ಕಮ್ಯೂನಿಸ್ಟ್ ಪಕ್ಷದ ದಿಗ್ವಿಜಯ ಎದೆ ಒಡೆಯುವಂತೆ ಮಾಡಿತು, ಅದೇ ರೀತಿಯಲ್ಲಿ ಪಶ್ಚಿಮ ಯೂರೋಪಿನ ರಾಷ್ಟ್ರಗಳಲ್ಲಿ ಕಮ ನಿಸ್ಟ್ ವಿಜಯದ ಸಂಭವವಿತ್ತು. ಅಮೆರಿಕಾ ಮತ್ತು ಬ್ರಿಟಿಷ್ ಸರ್ಕಾರಗಳು ಸ್ವಲ್ಪವೂ ನಿಧಾನಿಸದೆ ಕಮ್ಯೂನಿಸ್ಟ್ ಪಕ್ಷದ ಜನಾನುರಾಗವನ್ನು ಕಡಿಮೆಮಾಡ
ಪುಟ:ಕಮ್ಯೂನಿಸಂ.djvu/೧೬೪
ಗೋಚರ