ಆಧುನಿಕ ಸಮಾಜವಾದದ ಮುಂದೋಟ 085 ರುವಲ್ಲಿ ವಾಸ್ತವಿಕ ಪ್ರಪಂಚದ ಬಿಸಿ ತಾಕಿದೊಡನೆಯೇ ಸುಧಾರಣಾ ಸಮಾಜವಾದ (Reformist Socialism) ಕರಗಿಹೋದದ್ದರಲ್ಲಿ ವಿಶೇಷವೇನೂ ಇಲ್ಲ, ಲೇಬರ್ ಪಕ್ಷದ ಸಮಾಜವಾದೀ ನೀತಿ ಯಾವ ಒಂದು ವರ್ಗದ ನೀತಿ ಯಾಗಿರಲಿಲ್ಲ, ವರ್ಗಗಳೂ ಮತ್ತು ವರ್ಗವಿರಸವೂ ಇಲ್ಲವೆಂದು ಭಾವಿಸಿ ಬಂಡವಾಳವರ್ಗ ಮತ್ತು ಕಾರ್ಮಿಕವರ್ಗ ಈ ಎರಡರ ಹಿತವನ್ನೂ ಬಯಸು ವುದಕ್ಕೆ ಹೊರಟಿತು ಯಾವ ಒಂದು ವರ್ಗವನ್ನೂ ಸಂತುಷ್ಟಿಗೊಳಿಸಲಾರದೆ ಜನಸಮುದಾಯವನ್ನು ಎದುರುಹಾಕಿಕೊಂಡಿತ್ತು. 1952 ರಲ್ಲಿ ನಡೆದ ಚುನಾವಣೆಗಳಲ್ಲಿ ಲೇಬರ್ ಪಕ್ಷ ಸೋತಿತು, ಪುನಃ ಅಧಿಕಾರಕ್ಕೆ ಬಂದ ಕನ್ಸರ್‌ವೆಟಿವ್ ಪಕ್ಷ ಲೇಬರ್ ಸರ್ಕಾರದ ರೀತಿನೀತಿಗಳನ್ನು ರದ್ದುಗೊಳಿ ಸಿತು, ಇಂಗ್ಲೆಂಡಿನಲ್ಲಿ ಸುಧಾರಣಾ ಸಮಾಜವಾದದ ಪ್ರಯೋಗ ಅಲ್ಲಿ ಇಲ್ಲಿ ಬಂಡವಾಳಶಾಹಿ ವ್ಯವಸ್ಥೆಗೆ ತರಚಿದ ಘಾಯಗಳೆಂದು ಬಂಡವಾಳವರ್ಗ ಬಗೆದು ಬಂಡವಾಳಶಾಹಿ ವ್ಯವಸ್ಥೆಯನ್ನು ನಿರ್ಭಯವಾಗಿ ಮುಂದುವರಿಸು ಎರಡನೇ ಯುದ್ಧಾನಂತರ ವಿವಿಧ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಸಮಾಜ ವಾದಿಗಳೆಂದು ಹೇಳಲ್ಪಡುವ ಸುಧಾರಕ ಸಮಾಜವಾದೀ ಪಕ್ಷಗಳು ಅಧಿ ಕಾರಕ್ಕೆ ಬಂದುದನ್ನು ಕೆಲವು ಕಾಲ ಸಹಿಸಿದ್ದು ಬಂಡವಾಳವರ್ಗದ ಚಾಣಕ್ಯ ನೀತಿಯೂ ಸಹ ಆಗಿದೆ. ಯುದ್ಧಾನಂತರ ಕಾರ್ಮಿಕವರ್ಗದಲ್ಲಿ ಸಂಘಟನೆ ಇತ್ತು; ಬಂಡವಾಳಶಾಹಿ ವ್ಯವಸ್ಥೆಯ ನಾಶವೇ ಕಾರ್ಮಿಕರಿಗೆ ಮುಕ್ತಿ ಎಂಬ ಜ್ಞಾನೋದಯ ಮೂಡಿತ್ತು. ಬಂಡವಾಳವರ್ಗದಿಂದ ಬರುವ ಪ್ರತಿಭಟನೆ ಯನ್ನು ಎದುರಿಸಲು ಕಾರ್ಮಿಕವರ್ಗ ಸಿದ್ಧವಾಗಿತ್ತು. ಇಂತಹ ಪರಿಸ್ಥಿತಿ ಯಲ್ಲಿ ರೊಚ್ಚೆದ್ದಿರುವ ಕಾರ್ಮಿಕವರ್ಗವನ್ನು ಎದುರುಹಾಕಿಕೊಳ್ಳುವುದು ಅಪಾಯಕರವೆಂದು ಬಂಡವಾಳವರ್ಗ ತೀರ್ಮಾನಿಸಿತು. ಕಾರ್ಮಿಕವರ್ಗದ ಚಳವಳಿಯ ಉಬ್ಬರವನ್ನು ತಡೆಯಲು ಸುಧಾರಕ ಸಮಾಜವಾದೀ ಪಕ್ಷ ಗಳನ್ನು ಪ್ರಜಾಸತ್ತೆಯ ಸಂರಕ್ಷಕಗಳೆಂದು ಬಂಡವಾಳವರ್ಗ ಹೊಗಳಿತು. ಸ್ವಾಮ್ಯದ ರಕ್ಷಣೆಗಾಗಿ ಪ್ರಜಾಸತ್ತೆ ಮತ್ತು ಒಪ್ಪಿಗೆಯ ತತ್ತ್ವ (Consent) ಇವುಗಳ ಹಿಂದೆ ಬಂಡವಾಳವರ್ಗ ಮರೆಹೊಕ್ಕಿತು. ಸ್ವಾಮ್ಯಕ್ಕೆ ಚ್ಯುತಿ ತರುವಂತಹ ಶಾಸನಗಳಿಗೆ ಬಂಡವಾಳವರ್ಗದ ಒಪ್ಪಿಗೆಯೂ ಮತ್ತು ವ
ಪುಟ:ಕಮ್ಯೂನಿಸಂ.djvu/೧೬೩
ಗೋಚರ