ವೈಜ್ಞಾನಿಕ ಸಮಾಜವಾದಯ ಬಂಡವಾಳಶಾಹಿ ವ್ಯವಸ್ಥೆಗೆ ಮಾರುಕಟ್ಟೆಗಳಾಗಿದ್ದುವಲ್ಲದೆ, ಅವುಗಳ ಶೋಷ ಣೆಯೇ ಇಂಗ್ಲೆಂಡಿನ ಸಂಪತ್ತು ಮತ್ತು ಅಭಿವೃದ್ಧಿಗೂ, ಬಂಡವಾಳವರ್ಗದ ಧಾರಾಳ ಮನೋಭಾವಕ್ಕೂ (Liberalism)ಮತ್ತು ಕಾರ್ಮಿಕವರ್ಗವನ್ನು ಅಲ್ಪ ಸ್ವಲ್ಪ ಪರಿಹಾರಗಳ ಮೂಲಕ ಸಮಾಜವಾದೀ ಚಳವಳಿಯಿಂದ ದೂರ ವಿಡುವುದಕ್ಕೂ ಕಾರಣವಾಗಿದ್ದವು. ಲೇಬರ್ ಪಕ್ಷ ಅಧಿಕಾರಕ್ಕೆ ಬಂದನಂತ ರವೂ ಸಹ ಬಂಡವಾಳಶಾಹಿ ವ್ಯವಸ್ಥೆಯೇ ದೇಶದ ಆರ್ಥಿಕಅಡಿಗಲ್ಲಾಗಿ ಉಳಿ ದುದರಿಂದ ಮಾರುಕಟ್ಟೆಗಳ ರಕ್ಷಣೆ ಲೇಬರ್ ಸರ್ಕಾರದ ಜವಾಬ್ದಾರಿಯಾ ಯಿತ್ತು ಈ ಜವಾಬ್ದಾರಿಯ ನಿರ್ವಹಣೆಯಿಂದ ಲಾಭದ ಆಧಾರದಮೆಲೆ ಖಾಸಗೀ ಕ್ಷೇತ್ರದಲ್ಲಿ ನಡೆಯುತ್ತಿದ್ದ ಉತ್ಪಾದನೆ, ಉದ್ಯೋಗ, ಇತ್ಯಾದಿಗಳು ಸಂಪೂರ್ಣವಾಗಿ ಕುಸಿದುಬೀಳುವುದನ್ನು ತಡೆಗಟ್ಟಬೇಕಾಗಿತ್ತು. ಆದುದ ರಿಂದ ಕನ್‌ಸರ್ ವೆಟಿವ್ ಪಕ್ಷದಂತೆಯೇ ಲೇಬರ್ ಪಕ್ಷ Q ವಸಾಹತುಗಳ ಸ್ವಾತಂತ್ರ್ಯ ಚಳವಳಿಗಳನ್ನು ಮರ್ದನಮಾಡಲು ನಿರ್ಧರಿಸಿತು. ಆದರೆ ಯುದ್ಧದಿಂದ ಉಂಟಾದ ದೌರ್ಬಲ್ಯದಿಂದ ಶಕ್ತಿಸಾಲದಾಗಿತ್ತು. ಅಮೆರಿಕ ದೇಶದ ಶಕ್ತಿ ಸಹಾಯದ ಆಶ್ರಯಕ್ಕೆ ಲೇಬರ್ ಸರ್ಕಾರ ನಿಂತಿತು. ಲೇಬರ್ ಸರ್ಕಾರದ ಡೋಲಾಯಮಾನ ಸಮಾಜವಾದೀ ಕಾರ್ಯ ಕ್ರಮಕ್ಕೂ, “ ಮಧ್ಯಮಮಾರ್ಗ” ದ ಆರ್ಥಿಕ ನೀತಿಗೂ ಲೇಬರ್ ಪಕ್ಷವನ್ನು ರೂಪಗೊಳಿಸಿದ ಸಂದರ್ಭಗಳೇ ಮುಖ್ಯ ಕಾರಣವಾಗಿವೆ. ಅಪಾರ ವಸಾಹತು ಗಳನ್ನು ಹೊಂದಿ ಶೋಷಣೆಯನ್ನು ನಡೆಸುತ್ತಲಿದ್ದ ಬಂಡವಾಳಶಾಹಿ ವ್ಯವಸ್ಥೆ, ದೇಶದ ಆರ್ಥಿಕ ಮತ್ತು ರಾಜಕೀಯ ವಲಯಗಳಲ್ಲಿ ಧಾರಾಳ ಮನೋಭಾವವನ್ನು ಬಂಡವಾಳವರ್ಗ ಹೊಂದಲು ಸಾಧ್ಯ ಮಾಡಿಕೊಟ್ಟಿತು. ಸುಧಾರಣೆಗಳ ಮೂಲಕ ಬಂಡವಾಳವರ್ಗ ಆಗಾಗ್ಗೆ ಕಾರ್ಮಿಕವರ್ಗವನ್ನು ಸಂತುಷ್ಟಿಗೊಳಿಸಿತು. ಹೀಗೆ ಸಂತೈಸಲ್ಪಟ್ಟ ಕಾರ್ಮಿಕವರ್ಗದಲ್ಲಿ ಕ್ರಾಂತಿ ಕಾರಕ ಮನೋಭಾವವು ನಶಿಸಿ ಮಾರ್ಕ್ಸವಾದ ಬೇರೂರಲು ಕಷ್ಟ ವಾಯಿತು, ಇದರಿಂದಾಗಿ, ಸುಧಾರಣೆ ಮತ್ತು ತಾತ್ಕಾಲಿಕ ಸಂತುಷ್ಟಿಗಳ ಆಶ್ರಯದಲ್ಲಿ ಬೆಳದ ಕಾರ್ಮಿಕವರ್ಗವು ಮತ್ತು ಅದರ ಮುಖಂಡರು ಸ್ವಾಮ್ಯ ಮನೋಭಾವ (Bourgeoisie Mentality) ಮತ್ತು ಸುಧಾ ರಣಾ ನೀತಿಯನ್ನು ಪ್ರದರ್ಶಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಬಂಡವಾಳ ಶಾಹಿ ವ್ಯವಸ್ಥೆಯ ನೈಜಸ್ವರೂಪ ಲೇಬರ್ ಪಕ್ಷಕ್ಕೆ ತಿಳಿಯದಾಯಿತು. ಹೀಗಿ له
ಪುಟ:ಕಮ್ಯೂನಿಸಂ.djvu/೧೬೨
ಗೋಚರ