ಆಧುನಿಕ ಸಮಾಜವಾದದ ಮುಂದೋಟ ဂံင် ವಿಷಮಿಸಿತು; ಉತ್ಪಾದನೆ ಕಡಿಮೆಯಾಗತೊಡಗಿತು. ರಫಿನಿಂದಲೇ ಜೀವಿಸಬೇಕಾಗಿರುವ ದೇಶ ಅಮೆರಿಕದೊಡನೆ ಪೈಪೋಟಿ ನಡೆಸುವುದು ಅಸಾಧ್ಯವಾಯಿತು. ಸರ್ಕಾರದ ಆದಾಯ-ಖರ್ಚು ಸರಿತೂಗದಾದವು. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಲೇಬರ್ ಪಕ್ಷ ಅಮೆರಿಕದ ಬಳಿ ಸಾಲಕ್ಕೆ ನಿಂತಿತು ; ತೆರಲಾದ ಬಡ್ಡಿಯ ದರವನ್ನೂ ಸಾಲವನ್ನೂ ರಾಷ್ಟ್ರದ ಮೇಲೆ ಗುಡ್ಡೆ ಹಾಕಿತು. ಇಷ್ಟಾದರೂ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವ ಸೂಚನೆಗಳೇ ಕಂಡುಬರಲಿಲ್ಲ, ಸಾಲಕ್ಕೆ ಪ್ರತಿಯಾಗಿ ರಾಷ್ಟ್ರದ ಒಳಾಡಳಿತ ಮತ್ತು ಹೊರಾಡಳಿತಗಳಲ್ಲಿ ಪ್ರವೇಶಿಸುವ ಹಕ್ಕನ್ನು ಅಮೆರಿಕ ಪಡೆಯಿತು. ಸ್ವಾಮ್ಯದಮೇಲೆ ಧಾಳಿಯನ್ನು ನಿಲ್ಲಿಸುವುದಾದರೆ, ಸಮಾಜವಾದೀ ರಂಗದ ವಿರುದ್ಧ ಲೇಬರ್ ಸರ್ಕಾರ ನಿಲ್ಲುವುದಾದರೆ, ಸಹಾಯದೊರಕುವುದೆಂದು ಅಮೆರಿಕ ಸರ್ಕಾರ ಖಚಿತಪಡಿಸಿತು. ಮಿಗಿಲಾಗಿ ಲೇಬರ್ ಸರ್ಕಾರ ಅನುಸರಿಸಿದ ವಸಾಹತಿನ ನೀತಿಗೆ ಅಮೆರಿಕದ ಸ್ನೇಹ ಅತ್ಯಾವಶ್ಯಕವಾಗಿತ್ತು. ವಸಾಹತುಗಳು ಇಂಗ್ಲೆಂಡಿನ ಆದುದರಿಂದ ಶ್ರೀಮಂತವರ್ಗದ ಮೇಲೆ ಹೆಚ್ಚು ವರಮಾನ ತೆರಿಗೆ ಸಾಯುವ ತೆರಿಗೆ, ವರಮಾನದ ಮತ್ತು ಸ್ವಾಮ್ಯದ ಪರಿಮಿತಿ, ಬಡವರಿಗೆ ಕನಿಷ್ಟ ಕೂಲಿ, ಕೆಲಸದ ಭರವಸೆ, ವಿಮೆ, ಇತ್ಯಾದಿಗಳ ಮೂಲಕ ವಿನಿಯೋಗವನ್ನು ಸರಿಪಡಿಸುವುದಾದರೆ ಎರಡೊಂದು ಕೆಲಸ ಸಾಧಿಸಿದ ಹಾಗೆ ಆಗುತ್ತದೆ, ವರ್ಗ ದಂತರ ಸರಿತೂಗಿ ಮಧ್ಯಮವರ್ಗ ಹೆಚ್ಚುತ್ತದೆ ; ವರ್ಗವೈಷಮ್ಯವೂ ಕಾರ್ಮಿಕ ಚಳವಳಿಯ ಶಮನಹೊಂದುತ್ತವೆ. ಇನ್ನು ಮಾರ್ಕ್ಸ್ ವಾದಕ್ಕೆ ಸ್ಥಳವೆಲ್ಲಿ ? ಸಕಲ ವರ್ಗಗಳ ಹಿತಸಂರಕ್ಷಣೆಯೂ, ಕ್ಷೇಮಾಭ್ಯುದಯ ಚಿಂತನೆಯ ನಡೆಯುತ್ತಿರು ವಾಗ ಉತ್ಪಾದನಾ ಸಾಧನಗಳ ಸಮಾಜೀಕರಣದ ಪ್ರಮೇಯವೆಲ್ಲಿ ? ಒಂದೇ ಕಲ್ಲಿ ನಿಂದ ಎರಡು ಹಕ್ಕಿಗಳ ! ಖಾಸಗೀ ಸ್ವಾಮ್ಯದ ರಕ್ಷಣೆಯೂ ಆಯಿತು, ಕಾರ್ಮಿಕ ವರ್ಗವನ್ನು ಸಂತೈಸಿದ ಹಾಗೂ ಆಯಿತು, ಉತ್ಪದನಾ ಸಾಧನ ಗಳನ್ನು ಸಮಾಜೀಕರಣಮಾಡದೆ ಆರ್ಥಿಕ ಸಮಾನತೆ ಎಷ್ಟು ಸುಲಭವಾಗಿ ಬರಲಿದೆ. ಇದೇ ಸಮಾಜವಾದವಲ್ಲವೆ ? ಭಾರತೀಯ ಸಂಸ್ಕೃತಿ ವರ್ಗದಂತರವನ್ನು ಸರಿತೂಗುವುದಕ್ಕೆ ದಾನ ಧರ್ಮ ಗಳನ್ನು ನಿರ್ಮಿಸಿತ್ತೆಂದು ಕೆಲವರು ಹೇಳುತ್ತಾರೆ. ಭಾರತದಲ್ಲಿ ಈಗ ಪ್ರಚಾರ ದಲ್ಲಿರುವ ಸರೋದಯ ಸಿದ್ದಾಂತ ದಾನ ಧರ್ಮಗಳ ಮಹತ್ವವನ್ನು ತಿಳಿಸುತ್ತಲಿದೆ. ಉತ್ಪಾದನಾಕ್ರಮವನ್ನು ನಿರ್ಲಕ್ಷಿಸಿ ವಿನಿಯೋಗಕ್ಕೆ ಗಮನ ಕೊಡುವ ಸಮಾಜವಾದವನ್ನು ಮಾರ್ಕ್-ಏಂಗೆಲ್ಲರು ಅಸಹ್ಯದ ಸಮಾಜವಾದವೆಂದು (Vulgar Socialism) ಕರೆದರು, (ಮಾರ್ಕ್ಸ್- ಏಂಗೆಲ್ಲರ ಆರಿಸಲ್ಪಟ್ಟ ಬರಹ ಗಳು, ಭಾಗ 2, ಪುಟ 23, ಸಂಪುಟ 1951.)
ಪುಟ:ಕಮ್ಯೂನಿಸಂ.djvu/೧೬೧
ಗೋಚರ