ಪುಟ:ಕಮ್ಯೂನಿಸಂ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ವೈಜ್ಞಾನಿಕ ಸಮಾಜವಾದ F ಕಾರ್ಮಿವರ್ಗದ ಎರಡನೆಯದಾಗಿ, ಮಾರ್ಕ್ಸ್‌ವಾದ ಪ್ರಜಾಸತ್ತೆ ವಿರೋಧಿಯೇ ಎಂಬ ಪ್ರಶ್ನೆ, ಮಾರ್ಕ್ಸ್‌ವಾದದ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿ, ಮಾರ್ಕ್ಸ್ ವಾದದಲ್ಲಿ ಪ್ರತಿಪಾದಿತವಾಗಿರುವ ವರ್ಗ ಹೋರಾಟ ಕ್ರಾಂತಿ, ಕಾರ್ಮಿಕವರ್ಗದ ಏಕೈಕ ಪ್ರಭುತ್ವ ಎಲ್ಲವೂ ಪ್ರಜಾಸತ್ತೆ ತತ್ತ್ವವ ಗಳಿಗೆ ವಿರೋಧಿಯಾಗಿವೆಯೆಂದೂ, ಬಂಡವಾಳವರ್ಗದ ಒಪ್ಪಿಗೆಯನ್ನು ಪಡೆಯದೆ ಅವರ ಇಷ್ಟಕ್ಕೆ ವಿರುದ್ಧವಾಗಿ ಸ್ವಾವ್ಯವನ್ನು ಕಸಿದುಕೊಳ್ಳು ವುದು ಪ್ರಜಾಸತ್ತೆಯ ಅಡಿಗಲ್ಲಾದ ಒಪ್ಪಿಗೆಯ (consent) ತತ್ತ್ವಕ್ಕೆ ಧಕ್ಕೆ ಬರುತ್ತದೆಂದೂ ವಾದಿಸಲಾಗಿದೆ ಉತ್ಪಾದನಾ ಸಾಧನಗಳ ಸಮಾಜೀ ಕರಣವನ್ನೂ ಶೋಷಣೆಯ ವಿನಾಶವನ್ನೂ ಕಾರ್ಮಿಕವರ್ಗ ಬಯಸುವುದಾ ದರೆ, ಅದು ಬಹು ಸಂಖ್ಯೆಯಲ್ಲಿರುವುದರಿಂದ ಪ್ರಜಾಸತ್ತೆ ತತ್ತ್ವಗಳಿಗೆ ಅನು ಸಾರವಾಗಿ ಬಹುಮತಗಳಿಸುವುದರ ಮೂಲಕ ಶಾಸನಮಾಡಬಹುದೆಂದೂ ಹಾಗಿಲ್ಲದಿದ್ದರೆ ವೈಜ್ಞಾನಿಕ ಸಮಾಜವಾದ ಪ್ರಜಾಸತ್ತೆ ವಿರೋಧಿಯೂ, ಸರ್ವಾಧಿಕಾರಿ ತತ್ತ್ವದ ಪ್ರೇಮಿಯೂ ಆಗುವುದು ಖಂಡಿತದ ವಿಷಯ ವೆಂದೂ ವಾದಿಸಲಾಗಿದೆ. ಮಾರ್ಕ್ಸ್‌ವಾದ ಪ್ರಜಾಸತ್ತೆಗೆ ವಿರೋಧಿ ಎಂಬುದು ಬುಡವಿಲ್ಲದ್ದು. ಪ್ರಜಾಸತ್ತೆ ತತ್ತ್ವವನ್ನು ವಿಕಾರಗೊಳಿಸಿರುವ ಮತ್ತು ಗೊಳಿಸುತ್ತಲಿರುವ ವಾಸ್ತವ ಪರಿಸ್ಥಿತಿಗಳನ್ನು ಮರೆಮಾಚಲು ಈ ತೆರನಾದ ಸಂಶಯವನ್ನು ಬಂಡವಾಳವರ್ಗ ಜನಸಮುದಾಯದಲ್ಲಿ ಬಿತ್ತಿದೆ; ಮಾರ್ಕ್ಸ್ ವಾದದಿಂದ ಪ್ರಜಾಸತ್ತೆಗೆ ಧಕ್ಕೆ ಬಂದಿದೆ ಎಂಬ ಕೂಗು ಪ್ರಜಾಸತ್ತೆಯ ಹೆಸರಿನಲ್ಲಿ ಖಾಸಗೀ ಸ್ವಾಮ್ಯದ ರಕ್ಷಣೆಯನ್ನು ಅಪೇಕ್ಷಿಸಿರುವ ಬಂಡವಾಳವರ್ಗದ ಮಹಾ ಕುಯುಕ್ತಿಯಾಗಿದೆ. ಮಾರ್ಕ್ಸ್‌ವಾದ ಈ ಮುಸುಕನ್ನು ಒಡೆದು ನಿಜಪರಿಸ್ಥಿತಿಯನ್ನು ತಿಳಿಸಿದೆ. ಮೊದಲನೆಯದಾಗಿ ಸ್ವಾಮ್ಯಕ್ಕೆ ಎಡೆ ಇರುವ ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿ (Capitalist Democracy) ಪ್ರಜಾಸತ್ತೆ ನಗೆಪಾಟಲಿನ ಪ್ರಜಾಸತ್ತೆಯಾಗಿದೆ. ಪೌರರು ಹೊಂದಿರುವರೆಂದು ಹೇಳಲಾದ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳು ಸತ್ವರಹಿತದ ಹಕ್ಕುಗಳಾಗಿವೆ. ಶಾಸನದ ರೀತ್ಯಾ ಬಡವರು, ನಿರುದ್ಯೋಗಿಗಳು ಚುನಾ ವಣೆಗೆ ನಿಲ್ಲಲು ಹಕ್ಕಿದ್ದರೂ ಉಮೇದುವಾರರಾಗಿ ನಿಲ್ಲುವ ಕನಸನ್ನು ದೂರವಿಡಬೇಕು. ಇತರ ಕ್ಷೇತ್ರಗಳಲ್ಲೂ ಇದೇ ಪರಿಸ್ಥಿತಿ ಇದೆ. ಹೊಟ್ಟೆ