ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದದ ಸಮಸ್ಯೆಗಳು JOSE ಹೊರೆಯುವುದೇ, ಆರ್ಥಿಕ ಭದ್ರತೆಯನ್ನು ತಮ್ಮ ಜೀವನದಲ್ಲಿ ಕಲ್ಪಿಸಿ ಕೊಳ್ಳುವುದೇ ಶೋಷಿತವರ್ಗದ ಸಮಸ್ಯೆಯಾಗಿರುವಾಗ ರಾಜಕೀಯ ಅವರಿಗೆ ಬೇಡವಾಗಿದೆ ; ವಿದ್ಯಾಭ್ಯಾಸ ಹೊಂದಲು ಅಥವಾ ಸಾರ್ವಜನಿಕ ಜೀವನದಲ್ಲಿ ಪ್ರವೇಶಿಸಲು ಹಣದ ಮುಗ್ಗಟ್ಟು ಇದೆ, ಈ ಪರಿಣಾಮವಾಗಿ ಜೀವನದಲ್ಲಿ ನಿರಾಶೆ, ಜಿಗುಪ್ಪೆ, ನಿರುತ್ಸಾಹ, ಅಸಡ್ಡೆ, ನಿಸ್ಸಹಾಯಕತೆ, ಆಶ್ರಯಮನೋಭಾವ, ಯಾಚನೆಯ ಮನೋಭಾವ, ಇತ್ಯಾದಿಗಳನ್ನು ತಾಳಿರುವ ಜನರು ಬಹು ಸಂಖ್ಯೆಯಲ್ಲಿದ್ದಾರೆ. ಶೋಷಿತವರ್ಗದ ಪರದಾಟ ಸ್ವಾಮ್ಯವುಳ್ಳವರಿಗೆ ಸುಸಮಯ ವಾಗಿದೆ. ಹಣ ಬಲವಿರುವುದರಿಂದ ಪೌರಜೀವನ ಅವರಿಗೆ ಮೀಸಲಾ ಗಿದೆ, ಮತ್ತು ರಾಜಕೀಯ ಅವರ ಕಸಬಾಗಿದೆ. ಶಾಸನಸಭೆಗಳಿಗೆ ಪ್ರತಿನಿಧಿಗಳಾಗಿ ಹೋಗಲು ಇವರಿಗೆ ಸಾಧ್ಯ. ಜನಾಭಿಪ್ರಾಯವನ್ನು ಪ್ರಚಾರದ ಮೂಲಕ ತಿರುಗುಮುರಗು ಮಾಡಲು ಹಣ ಬಲವಿದೆ. ಸುದ್ದಿ ಕೇಂದ್ರಗಳು, ವರ್ತಮಾನ ಪತ್ರಿಕೆಗಳು ಸ್ವಾಮ್ಯವರ್ಗದ ವಶದಲ್ಲಿವೆ. ಬಂಡವಾಳವರ್ಗ ಕೊಡುವ ವೇತನದ ಹಂಗಿಗೆ ಸಿಕ್ಕಿ ಅವರು ಹೇಳಿದಹಾಗೆ ನಡೆಯುವ ಜನರಿದ್ದಾರೆ. ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸಬಲ್ಲ ವಕೀಲರನ್ನು ಮತ್ತು ಪಂಡಿತರನ್ನು ನೇಮಿಸಿಕೊಳ್ಳುವುದಕ್ಕೆ ಹಣವಿದೆ. ಉದರ ನಿಮಿತ್ತವಾಗಿ ದುಡಿಯುವ ಕಾರ್ಮಿಕರ ಮೇಲೆ ಪೂರ್ಣ ಹತೋಟ ಹೊಂದಿರಲು ಅವಕಾಶವಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ, ರಾಜ್ಯಶಕ್ತಿ, ಬಂಡವಾಳವರ್ಗದ ಹಿತಸಂರಕ್ಷಣಾರ್ಥವಾಗಿ ಉಪಯೋಗವಾಗುವುದರಲ್ಲಿ ಸ್ವಲ್ಪವೂ ಸಂಶಯವಿಲ್ಲ. ಅನೇಕವೇಳೆ, ಶೋಷಿತವರ್ಗ ಅಜಾಗೃತಿಯಿಂದಿದ್ದು ಪ್ರತಿಭಟನೆ ಯನ್ನು ಸೂಚಿಸುವುದಕ್ಕಾಗಲೀ ಅಥವಾ ತಮ್ಮದೇ ಆದ ರಾಜಕೀಯ ಪಕ್ಷ ವನ್ನು ರಚಿಸಿಕೊಳ್ಳುವುದಕ್ಕಾಗಲೀ ಯತ್ನಿಸುವುದಿಲ್ಲ. ನಿತ್ಯ ಕೂಳಿನ ಸಂಪಾದನೆ ಕಾರ್ಮಿಕವರ್ಗಕ್ಕೆ ಸಮಸ್ಯೆಯಾಗಿರುವಾಗ ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿ ಹೊಂದಿರಬಹುದಾದ ಸತ್ವರಹಿತದ ಹಕ್ಕುಗಳ ಬಗ್ಗೆ ಪರಿಜ್ಞಾನ ಬರುವುದಿಲ್ಲ. ಸ್ವಾಮ್ಯವೇ ಮುಖ್ಯವಾಗಿರುವ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಶೋಷಿತವರ್ಗವೂ ಸಹ ಸ್ವಾಮ್ಯವನ್ನು ಗಳಿಸಲು, ಹಣ ಶೇಖರಣೆಮಾಡಿ ಸಮಾಜದಲ್ಲಿ ದೊಡ್ಡಸ್ಥಿಕೆ ಪಡೆಯಲು ಪೈಪೋಟಿಗೆ ನಿಲ್ಲು