________________
೧೦ ಮತ್ತು ವೈಜ್ಞಾನಿಕ ಸಮಾಜ ವಾದವನ ತುಳಸೀದಾಸ್, ಚೈತನ್ಯ, ಪುರಂದರದಾಸ್, ಮುಂತಾದವರು ಬರುತ್ತಾರೆ. ಪಾಶ್ಚಿಮಾತ್ಯ ದೇಶಗಳನ್ನು ತೆಗೆದುಕೊಂಡರೆ ಪ್ಲೇಟೋವಿನ ನಂತರ ಸ್ಟೋಯಿಕ್ (Stoics) ಗಳೆಂಬ ವಿರಕ್ತರೂ, ತರುವಾಯ ಏಸುಕ್ರಿಸ್ತ, ಮಹಮದ್ ಪೈಗಂಬರರು ಬರುತ್ತಾರೆ. ಇವರನಂತರ ಅಸಂಖ್ಯಾತ ಸಾಧು ಸಂತರು ಮೇಲೆ ಹೇಳಿದ ಗುರುಗಳ ಉಪದೇಶವನ್ನು ಪುನಃ ಪುನಃ ಹೇಳಿ ದ್ದಾರೆ, - ಸಾಧುಸಂತರು ಸಮಾಜದ ಆಗುಹೋಗುಗಳನ್ನು ಕಣ್ಣಾರನೋಡಿ ಮನದಲ್ಲಿ ಮರುಗಿದವರು, ಒಂದು ಕಡೆ ಕಂಡದ್ದು ಅಟ್ಟಹಾಸ, ವೈಭವ, ವಿಲಾಸ, ಇನ್ನೊಂದು ಕಡೆ ಯಾತನೆ, ದಾರಿದ್ರ, ಕುಬ್ದ ಜೀವನ. ಜೀವನ ನಡೆಸುವುದಕ್ಕೋಸ್ಕರ ಮಾನವರು ಮಾನವರ ಮೇಲೆ ಯುದ್ಧ, ಮೋಸ, ಕಪಟ, ಕುಹಕಗಳಲ್ಲಿ ನಿರತರಾಗಿರುವುದನ್ನು ಕಂಡರು. ಸ್ವಾಮ್ಯ ವರ್ಗ ತನ್ನ ಸ್ವಾರ್ಥದ ಕೂಪದಲ್ಲಿ ಮುಳುಗಿ ದಯೆ, ಕರುಣೆ, ಅನ್ಯಪ್ರಾಣಿ ಚಿಂತನೆ ಸಹಾಯ, ಸಹಕಾರ ಇವುಗಳನ್ನು ತೊರೆದಿರುವುದನ್ನು ಕಂಡರು. ಮಾನವ ವ್ಯಕ್ತಿಗಳು ಇದೇ ರೂಪದಲ್ಲಿ ಬಹುಕಾಲವಿರುವುದಾದರೆ ಮಾನವತ್ವವೇ ಹೋಗುವುದಾಗಿ ಬಗೆದು ಇವುಗಳೆಲ್ಲಕ್ಕೂ ಸ್ವಾರ್ಥ ಮತ್ತು ದುರಾಸೆಯೇ ಕಾರಣವೆಂದು ತಿಳಿಸಿದರು. ವೈರಾಗ್ಯ, ವಿರಕ್ತ ಜೀವನ, ಇಂದ್ರಿಯ ನಿಗ್ರಹ ಇ ವು ಗ ಳಿ ೦ ದ ಮುಕ್ತಿ ಸಿಕ್ಕುವುದೆಂದು ಬೋಧಿಸಿದರು. ವಸ್ತು ಗಳ ಬಂಧನವೇ ಅವನತಿಗೆ ಕಾರಣವೆಂದು ಹೇಳಿ, ವಸ್ತು ನಿಗ್ರಹ ಮಾಡ ಬೇಕೆಂದರು. ಇಹದ ಬಂಧನ ದೇವರ ಕೃಪೆಯನ್ನು ದೂರಮಾಡುವುದಾಗಿ ತಿಳಿಸಿದರು. ದೇವರಲ್ಲಿ ಮರೆಹೋಗುವುದಾದರೆ ಬಂದ ಕಷ್ಟನಷ್ಟಗಳಿಗೆ ಪರಿಹಾರಸಿಗುವುದೆಂದು ತಿಳಿಸಿದರು. ಪ್ರಾರಂಭದಲ್ಲಿ ಸಾಧು ಸಂತರ ಹಿತವಚನಗಳು ಅನೇಕರನ್ನು ಆಕರ್ಷಿ ಸಿದವು. ಶಿಷ್ಯ ಮಂಡಳಿಗಳು ಹುಟ್ಟಿದವು ಮತ್ತು ಸಾಧು ಸಂತರ ಹೆಸರಿನಲ್ಲಿ ಪಂಥಗಳು ಹುಟ್ಟಿದವು. ಭಾರತದಲ್ಲಿ ಇವು ದಾಸಪಂಥಗಳೆಂದೂ, ಶಿವ ಶರಣರ ಪಂಥಗಳೆಂದೂ ಹೆಸರು ಪಡೆದಿವೆ. ಎಷ್ಟೇ ಉಪದೇಶನಡೆದರೂ ಸಮಾಜದ ಸ್ಥಿತಿಗ'ಗಳು ಪೂರ್ವದಲ್ಲಿದ್ದಂತೆಯೇ ಮುಂದುವರಿದವು. ನೊಂದ ಬೇಸತ್ತ ಜನರು ದಿಕ್ಕು ಕಾಣದೆ ಮತ್ತಷ್ಟು ವಿಧಿವಿಲಾಸದಕಡೆ ಕೈ ತೋರಿಸು ವಂತಾಯಿತು, ಹಿತವಚನಗಳಿಂದ ಸಮಾಜ ಅಲುಗಲಿಲ್ಲ; ವಚನಗಳು ಶುಷ್ಕ