ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದ ಮತ್ತು ಭಾರತ d ೧೮೬ ಅಂದಿನಿಂದ ಇಲ್ಲಿಯವರೆಗೆ ಉತ್ಪಾದನಾ ವಸ್ತುಗಳಲ್ಲಿ ಖಾಸಗೀ ಸ್ವಾಮ್ಯ ಭಾರತದ ಆರ್ಥಿಕ ವ್ಯವಸ್ಥೆಯ ಲಕ್ಷಣವಾಗಿದೆ. ಭಾರತದ ಪ್ರಾಚೀನ ಮತ್ತು ಮಧ್ಯಮ ಕಾಲಗಳಲ್ಲಿ ಸ್ವಯಂಪೂರ್ಣತೆಯ ಕೃಷಿ, ಸ್ವಯಂಪೂರ್ಣ ತೆಯ ದುಡಿಮೆ, ಅದಲು ಬದಲಿನ ವ್ಯಾಪಾರ, ಗೃಹಕೈಗಾರಿಕೆ ಇವೇ ಭಾರ ತದ ಆರ್ಥಿಕ ವ್ಯವಸ್ಥೆಯ ಆಧಾರಗಳಾಗಿದ್ದವು. ಆದರೆ 20 ನೇ ಶತಮಾ ನಾನಂತರ ಈ ವ್ಯವಸ್ಥೆ ನಾಗಾಲೋಟದಿಂದ ಮುಂದುವರೆದು ಬಂಡವಾಳ ಶಾಹಿ ವ್ಯವಸ್ಥೆಯ ಸ್ವರೂಪವನ್ನು ತಾಳಿಕೆ. ಸಂಚಾರ ಸೌಕರ್ಯ ಮತ್ತು ವ್ಯಾಪಾರ, ಆಮದು ರಫ್ತು, ದೇಶಕ್ಕೆಲ್ಲ ಅನ್ವಯವಾಗುವ ರೀತಿಯ ಪದಾರ್ಥದ ಬೆಲೆ, ಮಾರುಕಟ್ಟೆ, ಮಾರುಕಟ್ಟೆಯ ಪರಿಸ್ಥಿತಿಗನುಗುಣ ವಾಗಿ ಉತ್ಪಾದನೆ, ಬಂಡವಾಳ ಶೇಖರಣೆ, ಖಾಸಗೀ ಕೈಗಾರಿಕೋದ್ಯಮ ಗಳು, ಕೂಲಿಗಾರವರ್ಗ, ಕೇವಲ ಮಾರಾಟಕ್ಕಾಗಿ ಮತ್ತು ಲಾಭದ ದೃಷ್ಟಿ ಯಿಂದ ಬೆಳೆಯಲ್ಪಡುವ ಫಸಲುಗಳು, ಪೈಪೋಟಿ, ಬ್ಯಾಂಕುಗಳು ಎಲ್ಲವೂ ಆಗಮಿಸಿವೆ. ನಮ್ಮ ಆರ್ಥಿಕ ವ್ಯವಸ್ಥೆಯನ್ನು ಪಾಶ್ಚಾತ್ಯ ದೇಶಗಳ ಆರ್ಥಿಕ ವ್ಯವಸ್ಥೆಯೊಡನೆ ಹೋಲಿಸಿದರೆ ಕೈಗಾರಿಕಾ ರಂಗದಲ್ಲಿ ಪಾಶ್ಚಾತ್ಯ ದೇಶಗಳು ಗಳಿಸಿರುವ ಮುಂದೋಟ ಹೊರತು ಮಿಕ್ಕೆಲ್ಲ ಲಕ್ಷಣಗಳೂ ಒಂದೇ ಆಗಿವೆ. ಪಾಶ್ಚಾತ್ಯ ದೇಶಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆ ಕ್ರಮೇಣ ವಿರಸಗಳನ್ನು ಪ್ರದರ್ಶಿಸಿದ್ದರೆ, ಭಾರತದಲ್ಲೂ ಸಹ ಬಂಡವಾಳಶಾಹಿ ವ್ಯವಸ್ಥೆ ಕ್ರಮೇಣ ವಿರಸಗಳನ್ನು ಪ್ರದರ್ಶಿಸುತ್ತಲಿದೆ. ಉತ್ಪಾದನಾ ವಸ್ತುಗಳಲ್ಲಿ ಖಾಸಗೀ ಸ್ವಾಮ್ಯ ಭಾರತದಲ್ಲಿ ಬಹುಪೂರ್ವ ಕಾಲದಿಂದಲೂ ಕಂಡುಬಂದಿರುವುದರಿಂದ ಆಧುನಿಕ ಸಮಾಜವಾದಿ ತತ್ತ್ವ ಅಥವಾ ಸಮಾಜವಾದೀ ವ್ಯವಸ್ಥೆ ಭಾರತದಲ್ಲಿ ಇತ್ತೆಂದು ಪ್ರತಿವಾದಿಸುವುದು ಪ್ರಮಾದವಾಗುತ್ತದೆ. ಹಿಂದೆ ಸಮಾಜವಾದದ ಇತಿಹಾಸವನ್ನು ಈಕ್ಷಿ ಸುವಾಗ ಹೇಳಿದಂತೆ ಭಾರತದಲ್ಲಿ ಇದ್ದದ್ದು ಕಲ್ಪನಾಸಮಾಜವಾದ ಮಾತ್ರ. ఉ (1) ಭಾರತೀಯ ಇತಿಹಾಸದ ಬಗ್ಗೆ ಹೆಚ್ಚು ಪರಿಶೋಧನೆಯ ಅಗತ್ಯ ಬಹಳವಿದೆ, ಅಲ್ಪಸ್ವಲ್ಪ ನಡೆದಿರುವ ಪರಿಶೋಧನೆಯೂ, ಇತಿಹಾಸದ ಪುಸ್ತಕ ಗಳೂ ಮತ್ತು ಇತ್ತೀಚಿಗೆ ಭಾರತೀಯ ದೃಷ್ಟಿಯಿಂದ ಬರೆಯಲಾಗಿದೆ ಎಂದು ಹೇಳಲಾದ ಇತಿಹಾಸ ಪುಸ್ತಕಗಳೂ " ಪ್ರಾಚೀನ' ಮತ್ತು ' ಮಧ್ಯಮ' ಕಾಲಗಳ ಆರ್ಥಿಕ ವ್ಯವಸ್ಥೆ, ಉತ್ಪಾದನಾ ಕ್ರಮ ಮತ್ತು ಉತ್ಪಾದನಾ ಸಂಬಂಧಗಳ ಬಗ್ಗೆ