ಪುಟ:ಕಮ್ಯೂನಿಸಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ಕವಿತಾ ವೈಜ್ಞಾನಿಕ ಸಮಾಜ ವಾದ - ದಲ್ಲಿರುವ ಸಾಮಂತರ ಉಪಟಳವಿಲ್ಲದೆ, ವ್ಯಾಪಾರ ಮಾಡುವುದಕ್ಕೂ, ಹಣ ಕೂಡಿಡುವುದಕ್ಕೂ, ಉದ್ಯಮಗಳಲ್ಲಿ ನಿರತರಾಗುವುದಕ್ಕೂ ಅಡ್ಡಿ ಬಂದಿದ್ದವು. ರಾಜನ ನಿರಂಕುಶ ಪ್ರಭುತ್ವವನ್ನು, ವ್ಯಾಪಾರ ಮತ್ತು ಉದ್ಯಮಕ್ಕೆ ಅಡ್ಡಿ ಬರುವ ಕಟ್ಟಳೆ ಕಾನೂನುಗಳನ್ನು ಬದಿಗೊತ್ತಿದ ಹೊರತು ವ್ಯಾಪಾರೀ ವರ್ಗದ ಏಳಿಗೆಗೆ ಅವಕಾಶವಿರಲಿಲ್ಲ. ಬದಲಾವಣೆಯಿಂದ ರಾಜನ ಮತ್ತು ಆತನ ಹಿಂಬಾಲಕ ವರ್ಗದವರ ಹಕ್ಕು ಬಾಧ್ಯತೆಗಳಿಗೆ ಧಕ್ಕೆ ಬರುತ್ತಿತ್ತು. ಅವರು ಬದಲಾವಣೆಯನ್ನು ವಿರೋಧಿಸಿದರು. ಸಂಧಾನದ ಮೂಲಕ ಬಗೆ ಹರಿಯದ ವಿರಸ ಒಳ ಯುದ್ದದಲ್ಲಿ ಪಠ್ಯವಸಾನ ಹೊಂದಿತು. ಜನರು ಚಾರಲ್ಸ್ ಎಂಬ ದೊರೆಯ ಶಿರಚ್ಛೇದನಮಾಡಿದರು. ಮತ್ತೊಬ್ಬ ದೊರೆಯನ್ನು ಬೇರೆಕಡೆಯೆಂದ ಕರೆತಂದು ಪಟ್ಟ ಕಟ್ಟಿದರು. ಒಳ ಯುದ್ಧ ದಲ್ಲಿ ವಿಜಯಶಾಲಿಗಳಾದ ವ್ಯಾಪಾರೀ ಮತ್ತು ಜರ್ಮಾದಾರವರ್ಗ ತಮ್ಮ ಹಕ್ಕುಗಳನ್ನು ಘೋಷಿಸಿದರು. ವ್ಯಾಪಾರ ಮತ್ತು ಉದ್ಯಮಗಳಲ್ಲಿ ಸರ್ಕಾರ ಕಾನೂನುಗಳ ಮೂಲಕ ಅಡ್ಡಿ ಆತಂಕಗಳನ್ನು ಒಡ್ಡದ ಹಾಗೆ ನಿಯಾಮಕ ಮಾಡಿದರು. ಸ್ವಾಮ್ಯ ಮತ್ತು ವ್ಯಾಪಾರ ವರ್ಗದವರಿಂದ ಚುನಾಯಿತ ರಾದ ಪ್ರತಿನಿಧಿಗಳ ಸಮ್ಮತವಿಲ್ಲದೆ ಶಾಸನ ಮಾಡಕೂಡದೆಂಬ ಸಂಪ್ರದಾ ಯಕ್ಕೆ ರಾಜನು ಒಪ್ಪುವಂತೆ ಮಾಡಿದರು. ಸಾಂಕುಶಪ್ರಭುತ್ವ ಸ್ಥಾಪನೆ ಯಾಯಿತು. ಕ್ರಾಂತಿಯ ಕಾಲದಲ್ಲಿ ವ್ಯಾಪಾರೀ ಮತ್ತು ಜರ್ಮಾದಾರವರ್ಗ ಕೇಳಿದುದು ಮತನೀಡುವ ಹಕ್ಕು, ಪ್ರತಿನಿಧಿಗಳ ಒಪ್ಪಿಗೆ ಪಡೆದು ಶಾಸನ ವಾಗುವ ಭರವಸೆ, ವ್ಯಕ್ತಿ ಸ್ವಾತಂತ್ರ ಪೌರರ ಹಕ್ಕುಗಳು, ಶಾಸನ ಸಮ್ಮುಖದಲ್ಲಿ ಸಮಾನತೆ, ಆರ್ಥಿಕವಾಗಿ ಖಾಸಗೀ ಸ್ವಾಮ್ಯಕ್ಕೆ ರಕ್ಷಣೆ ಮತ್ತು ಉದ್ಯಮ ಸ್ವಾತಂತ್ರ. ಆದರೆ ಈ ಮಧ್ಯೆ ಒಡಕು ಶಬ್ದವೆಂಬಂತೆ ಒಂದು ವಾದ ಆಂದೋಳನದ ರಂಗದಲ್ಲಿ ಕಾಲಿಟ್ಟ ತು. ಅದು ವ್ಯಾಪಾರಿ ಮತ್ತು ಸ್ವಾಮ್ಯ ವರ್ಗದವರನ್ನು ಸ್ತಬ್ಧರನ್ನಾಗಿ ಮಾಡಿತು. ಹೊಸವಾದದ ಪ್ರತಿಪಾದಕರೆಂದರೆ ಜರಾಲ್ಡ್ ವಿನ್ ಸ್ಟಾನ್ಲೇ ಮತ್ತು ಲಿಲ್ಬರೇ. ಇವರ ನಾದಸರಣಿ ಅತಿಸುಲಭವಾಗಿದ್ದು ಮನಸ್ಸಿಗೆ ನಾಟುವಂತಿತ್ತು. ಅವರ ಪ್ರಕಾರ ಜನಸಮುದಾಯವೆಲ್ಲಾ ದೇವರ ಮಕ್ಕಳು, ಎಲ್ಲರೂ ಅಣ್ಣತಮ್ಮಂದಿರು, ಅಕ್ಕತಂಗಿಯರು ಎಲ್ಲರೂ ಒಂದೇ ಸಮಾಜಕ್ಕೆ ಸೇರಿದವರು