ಪುಟ:ಕಮ್ಯೂನಿಸಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ನದಡಿ ಸಮಾಜ ವಾದದ ಜನನ ೧೩ ದೇವರು ತನ್ನ ಮಕ್ಕಳಲ್ಲಿ ಹೇಗೆ ಭೇದ ಭಾವವನ್ನು ಮಾಡುವುದಿಲ್ಲವೋ ಹಾಗೆಯೇ ಭೇದ ಭಾವ, ತಾರತಮ್ಯ, ಅಸಮಾನತೆ ಇರುವ ಸಮಾಜ ದೇವರ ದೃಷ್ಟಿಯಲ್ಲಿ ಸರಿಯಲ್ಲ ; ಎಲ್ಲರೂ ಸಮಾನರು. ಆದುದರಿಂದ ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ಹೇಗೆ ಸಮಾನತೆ ಆವಶ್ಯಕ ವೆಂದು (ವ್ಯಾಪಾರೀ ಮತ್ತು ಜರ್ಮಾದಾರವರ್ಗ) ಹೇಳುವುದುಂಟೋ ಹಾಗೆಯೇ ಆರ್ಥಿಕ ರಂಗದಲ್ಲೂ ಸಹ ಸಮಾನತೆ ಆವಶ್ಯಕವಾಗಿದೆ, ಆರ್ಥಿಕ ಸಮಾನತೆ ಜನಸಮುದಾಯಕ್ಕೆ ಲಭಿಸಿದ ಹೊರತೂ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಲಭಿಸಿರುವ ಸಮಾನತೆ ಮಿಥ್ಯ, ಹುರುಡಿಲ್ಲದ್ದು ಎಂದರು, ಆರ್ಥಿಕ ಸಮಾನತೆ ಲಭಿಸುವವರೆಗೂ ಹೋರಾಟ ಮುಂದು ವರಿಯುವ ಅಗತ್ಯವನ್ನು ಸಾರಿದರು. ಹೊಸವಾದಕ್ಕೆ ವ್ಯಾಪಾರೀ ಮತ್ತು ಸ್ವಾಮ್ಯವರ್ಗದ ಪ್ರತಿಕ್ರಿಯೆ ಬೇರೆಯಾಗಿತ್ತು. ವ್ಯಾಪಾರೀ ಮತ್ತು ಸಾಮ್ಯವರ್ಗ ಈ ಹೊಸವಾದದಲ್ಲಿ ಹಕ್ಕು ಬಾಧ್ಯತೆಗಳಿಗೆ ಅಪಾಯವನ್ನೂ ಖಾಸಗೀ ಸ್ವಾಮ್ಯಕ್ಕೆ ಧಕ್ಕೆಯನ್ನೂ ಕಂಡಿತು. ಜನಸಮುದಾಯದಲ್ಲಿ ಹೊಸವಾದದ ಹರಡುವಿಕೆಯನ್ನು ತಡೆ ಗಟ್ಟಲು ಕಂಕಣಬದ್ಧರಾದರು. ಆರ್ಥಿಕ ಸಮಾನತೆಯ ಸ್ಥಾಪನೆ ಎಂದೂ ಕ್ರಾಂತಿಯ ಧೈಯವಲ್ಲವೆಂದೂ, ದೇವರು ಎಂದೂ ಎಲ್ಲರನ್ನೂ ಒಂದೇ ಸಮನಾಗಿ ಸೃಷ್ಟಿಸಿಲ್ಲವೆಂದೂ, ಸ್ವಾಮ್ಯ ಅವರವರ ದುಡಿಮೆಯ ಫಲವೆಂದೂ, ಆರ್ಥಿಕ ಅಸಮಾನತೆ ಸ್ವಾಭಾವಿಕವೆಂದೂ, ಆರ್ಥಿಕ ಸಮಾನತೆಗಾಗಿ ಆಶಿಸು ವುದು ಹಗಲುಗನಸಾಗಿ ಸಮಾಜ ಭದ್ರತೆಗೆ ಕಂಟಕವಾಗುತ್ತದೆಂದೂ ತಿಳಿಸಿ ದರು. ಹೊಸವಾದ ಮೂದಲಿಕೆಗೆ ಗುರಿಯಾಯಿತು. ಇಷ್ಟಾದರೂ, ಹೊಸ ವಾದದಲ್ಲಿ ಅಡಗಿದ್ದ ತರ್ಕವನ್ನು ಭೇದಿಸುವುದಕ್ಕೆ ಸ್ವಾಮ್ಯ ವರ್ಗಕ್ಕೆ ಶಕ್ತಿ ಸಾಲದೇ ಹೋಯಿತು. ಪ್ರತಿವಾದದಿಂದ ಭೇದಿಸಲಾರದ್ದನ್ನು ಶಕ್ತಿ ಪ್ರಯೋ ಗದ ಮೂಲಕ ಅಡಗಿಸಲು ಸ್ವಾಮ್ಯವರ್ಗ ನಿರ್ಧರಿಸಿತ್ತು. ಆದರೂ ಮೊಟ್ಟ ಮೊದಲನೆಯ ಬಾರಿಗೆ, ಆರ್ಥಿಕ ಸಮಾನತೆ ಇದ್ದ ಹೊರತು ಜನಸಮುದಾ ಯಕ್ಕೆ ಕ್ಷೇಮವಿಲ್ಲವೆಂದು ಹೇಳಿ ಜನಸಮುದಾಯದ ಗಮನವನ್ನು ಆರ್ಥಿಕ ರಂಗದಲ್ಲಿರುವ ಅಸಮಾನತೆಗೆ ಸೆಳದದ್ದು 1640 ರ ಕ್ರಾಂತಿಯ ಮಹತ್ಕಾರ್ಯ.