ಪುಟ:ಕಮ್ಯೂನಿಸಂ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

hy

  • ವೈಜ್ಞಾನಿಕ ಸಮಾಜ ವಾದವನ್ನು

ಆರ್ಥಿಕ ಸಮಾನತೆಗಾಗಿ ನಡೆದ ಹೋರಾಟ ಇಂಗ್ಲಿಷ್ ಕ್ರಾಂತಿಗೇ ಕೊನೆಗೊಳ್ಳಲಿಲ್ಲ. ಹಾಗಾಗುವುದೆಂದು ನಿರೀಕ್ಷಿಸಿದ್ದವರು ಹತಾಶರಾದರು. ಹೊರ ದೇಶಗಳಿಗೆ ಇಂಗ್ಲಿಷ್ ಆರ್ಥಿಕ ಸಮಾನತೆಯನಾದ ಹರಡಿತೊ ಇಲ್ಲವೋ ತಿಳಿಯದು. ಆದರೆ, 18 ನೇ ಶತಮಾನದ ಕೊನೆಯ ಭಾಗದಲ್ಲಿ ಫ್ರಾನ್ಸ್ ದೇಶದಲ್ಲಿ ನಡೆದ ಮಹಾಕ್ರಾಂತಿ (1789) ಕಾಲದಲ್ಲಿ ಆರ್ಥಿಕ ಸಮಾನತೆಯ ಪ್ರಶ್ನೆ ಪುನಃ ಜನ್ಮ ತಾಳಿತು. ಫ್ರಾನ್ಸಿನ ಮಹಾಕ್ರಾಂತಿ ಇಂಗ್ಲಿಷ್ ಕ್ರಾಂತಿಯಂತೆ ವ್ಯಾಪಾರೀ ಮತ್ತು ಜರ್ಮಿಾದಾರ ವರ್ಗಗಳ ಮುಂದಾಳತ್ವದಲ್ಲಿ ನಿರಂಕುಶ ಪ್ರಭುತ್ವದ ನಾಶಕ್ಕೂ ಖಾಸಗೀ ಸ್ವಾಮ್ಯದ ಆಧಾರದಮೇಲೆ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳ ಸ್ಥಾಪನೆಗೂ ನಡೆಯಿತು. ಕ್ರಾಂತಿಯ ಕಾಲದಲ್ಲಿ ಆರ್ಥಿಕ ಪ್ರಶ್ನೆ ಪ್ರಾಮುಖ್ಯತೆಗೆ ಬರುತ್ತ ದೆಂದು ಯಾರೂ ಯೋಚಿಸಿರಲಿಲ್ಲ. ಆದರೆ ಕ್ರಾಂತಿಯ ಹುರುಪಿನಲ್ಲಿ ಘೋಷಣೆಯಾದ “ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ) (Liberty, Equality and Fraternity) ಧೈಯಗಳು ಆರ್ಥಿಕ ಸಮಾನತೆಯ ಪ್ರಶ್ನೆ ಪುನಃ ಕಾಣಿಸಿಕೊಳ್ಳುವಂತೆ ಪ್ರಚೋದಿಸಿದುವು. ಕ್ರಾಂತಿಯ ಸಮಯದಲ್ಲಿ ಬೆಳ್ಳೂಫ್ ಎಂಬುವನ ಮುಖಂಡತ್ವದಲ್ಲಿ “ ಸಮಾನತೆಗಾರರ ಪಿತೂರಿ ” ಎಂಬ ರಂಗವೊಂದು ರಚಿತವಾದದ್ದಲ್ಲದೆ ಆರ್ಥಿಕ ಸಮಾನತೆಯ ವಾದ “ ನ್ಯಾಯ ” ದ ಹೆಸರಿನಲ್ಲಿ ಪ್ರತಿಪಾದಿತ ವಾಯಿತು, ಅಧಿಕ ಪ್ರಮಾಣದಲ್ಲಿ ಮತ್ತು ಅತ್ಯಂತ ಶ್ರೀಘ್ರಕಾಲದಲ್ಲಿ ಆರ್ಥಿಕ ಸಮಾನತೆಯ ವಾದ ಜನಸಮುದಾಯವನ್ನು ಆಕರ್ಶಿಸಿತು. ಸ್ವಾಮ್ಯವರ್ಗ ನಿಧಾನಿಸದೆ ಬೆಳ್ಳೂಫ್ ಮತ್ತು ಆತನ ಸಹಪಾಠಿಗಳನ್ನು ಸದೆಬಡಿಯಿತು. ದಿನ ಬೆಳ್ಳೂಫ್ ಮತ್ತು ಆತನ ಸಹವರ್ತಿಗಳು ಮಂಡಿಸಿದ ವಾದಕ್ಕೂ ಇಂಗ್ಲಿಷ್ ಕ್ರಾಂತಿಯ ಸಮಯದಲ್ಲಿ ಮಂಡಿತವಾದ ಸಮಾನತೆಯವಾದರೂ ಕೆಲವು ವ್ಯತ್ಯಾಸಗಳಿವೆ. ಇಂಗ್ಲಿಷ್ ಕ್ರಾಂತಿಕಾರರು ಆರ್ಥಿಕ ಸಮಾನತೆ ಯನ್ನು ದೇವರ ಹೆಸರಿನಲ್ಲಿ ಕೇಳಿದರು ; ಫ್ರೆಂಚ್ ಕ್ರಾಂತಿಕಾರರು ನ್ಯಾಯ ಮತ್ತು ವಿವೇಚನಗಳ (Justice and Reason) ಹೆಸರಿನಲ್ಲಿ ಮಂಡಿಸಿ ದರು. ನಿರಂಕುಶಪ್ರಭುತ್ವ ಸಮಾಜಿಕ ಮತ್ತು ರಾಜಕೀಯ ರಂಗಗಳಲ್ಲಿ ಅಸಮಾನತೆ, ಹತ್ತು ರಹಿತ ಕರ್ತವ್ಯಗಳು ಹೇಗೆ ಅನ್ಯಾಯವೋ ವಿವೇಚನಾ ರಹಿತವೋ ಹಾಗೆಯೇ ವಾಸ್ತವಿಕವಾಗಿರುವ ಆರ್ಥಿಕ ಅಸಮಾನತೆ ಸಹ