ಪುಟ:ಕಮ್ಯೂನಿಸಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಹಾಜಿ ವಾದದ ಜನನ ಗ ಅನ್ಯಾಯವೆಂದೂ ಏವೇಚನಾರಹಿತವೆಂದೂ ಸಾರಿದರು. ಎರಡನೆಯದಾಗಿ, ಫ್ರೆಂಚ್ ಕ್ರಾಂತಿಕಾರರು ನ್ಯಾಯಾನ್ಯಾಯಗಳ ಹೆಸರಿನಲ್ಲಿ ಸಾರಿದ ಸಂದೇಶ ಬಹು ಮಹತ್ತರವಾದ ಪ್ರಭಾವವನ್ನು ಬೀರುವಂತಹುದಾಗಿತ್ತು. ನ್ಯಾಯಾ ನ್ಯಾಯಗಳ ಪ್ರಶ್ನೆ ವಿವೇಕ ಬುದ್ದಿಯ ತೀರ್ಮಾನಕ್ಕೆ ಒಳಪಟ್ಟಿದ್ದರಿಂದ ಸಮಸ್ಯೆಗಳ ಬಗ್ಗೆ ತೀರ್ಮಾನ ದೈವ ಪ್ರಭಾವದಿಂದ ಪ್ರತ್ಯೇಕಿಸಲ್ಪಟ್ಟವು. ದೈವ ಪ್ರಭಾವದಿಂದ ಬಿಡುಗಡೆ ಹೊಂದಿದ ಮಾನುಷ ಬುದ್ಧಿಗೆ ಪ್ರಾಶಸ್ತ್ರ ದೊರಕಿತು. ಎಲ್ಲದಕ್ಕೂ ಮನುಷ್ಯ ಬುದ್ದಿ ಅಂತಿಮವಾದ ಒರೆಗಲ್ಲಾ ಯಿತು. ದೈವ ಪ್ರಭಾವದಿಂದ ಬೇರ್ಪಟ್ಟ ಸ್ವತಂತ್ರ ಸಮಾಜಶಾಸ್ತ್ರ ಬೆಳೆ ಯಲು ಅಂಕುರಾರ್ಪಣೆಯಾಯಿತು. ಒಟ್ಟಿನಲ್ಲಿ ಶೋಷಣೆ ಮತ್ತು ಆರ್ಥಿಕ ಅಸಮಾನತೆ ಕೇವಲ ದೈವ ನಿಯಾಮಕವಾಗಿರದೆ ಸಮಾಜದ ರಚನೆ ಮತ್ತು ಕಟ್ಟುಪಾಡುಗಳನ್ನು ಅವಲಂಬಿಸಿವೆ ಎಂದು ಎರಡು ಕ್ರಾಂತಿಗಳೂ ತಿಳಿಸಿದವು. ಆರ್ಥಿಕ ಅಸಮಾನತೆ ತಾರ್ಕಿಕ ಬುದ್ದಿ ವಿಶೇಷಕ್ಕೆ ಸಮಂಜಸ ವಾಗಿ ತೋರುವುದಿಲ್ಲವೆಂದು ತಿಳಿಸಿದ್ದಲ್ಲದೆ ಸಮಾಜದ ಕಟ್ಟು ಪಾಡುಗಳು ಸಮಾಜ ಜೀವಿಗಳ ಯೋಗಕ್ಷೇಮವನ್ನು ಗಳಿಸುವುದಾದರೆ ಸರಿ, ಇಲ್ಲವಾದರೆ ತಪ್ಪು ಎಂಬ ವೈಯುಕ್ತಿಕ ತೀರ್ಮಾನಕ್ಕೆ ಎಡೆ ಕೊಟ್ಟವು. ಫ್ರಾನ್ಸ್‌ನ ಮಹಾಕ್ರಾಂತಿಯ ಕಾಲದಲ್ಲಿ ಅವತರಿಸಿದ ಸಮಾನತೆಯ ತತ್ ನೊಂದ ಜನರ ತಾತ್ಕಾಲಿಕ ಆರ್ಭಟವಾಗದೆ ಚಿರಸ್ಥಾಯಿಯಾ ಯಿತು. ಫ್ರಾನ್ಸ್ ದೇಶದಲ್ಲಿ ಅನೇಕ ವಿಚಾರತಜ್ಞರು ಸಮಾನತೆಯ ಸಮಸ್ಯೆ ಯನ್ನು ಜಿಜ್ಞಾಸೆಗೆ ಒಳಪಡಿಸಿದರು, ಅದರ ವಿಷಯವಾಗಿ ಸಾಹಿತ್ಯ ಬೆಳೆಯಲಾರಂಭಿಸಿತು, ಸಮಾನತೆ ಇರುವ ಸಮಾಜವನ್ನು ಬುದ್ಧಿಯ ಬಲದಿಂದ ರಚಿಸಲು ಸಾಧ್ಯವೆಂದು ತಿಳಿಸಿದರು, ಇಂತಹವುಗಳಲ್ಲಿ 'ಸಮಾಜ ವಾದ ” ಎಂಬ ಹೆಸರಿನಲ್ಲಿ ಪ್ರಕಟವಾದ ರ್ಫ್ಯಾಸಿನ ಘೋರಿಯರ್, ಪ್ರೌಢನ್ ಮತ್ತು ಮುಖ್ಯವಾಗಿ ಸೈಂಟ್ ಸೈಮನ್ರ ಬರೆಹಗಳು ಬಹಳ ಮುಖ್ಯ ವಾದವು. ' ಸಮಾನ ಸಮಾಜದ ” ಮಾದರಿಯಂತೆ ಅಲ್ಲಲ್ಲಿ ಪ್ರಾಯೋಗಿಕ ಕೇಂದ್ರಗಳೂ ಆರಂಭವಾದವು. ಫ್ರಾನ್ಸ್ ದೇಶ ಸಮಾಜವಾದ ತತ್ವಕ್ಕೆ ತೌರುಮನೆಯಾಯಿತ್ತು, ಇ ಈ ಮಧ್ಯೆ ಇಂಗ್ಲೆಂಡ್ ದೇಶದಲ್ಲಿ ಕೈಗಾರಿಕಾ ಕ್ರಾಂತಿ (Industrial Revolution) ಉಂಟಾಗಿ, ಕ್ರಮೇಣ ಕ್ರಾಂತಿ ಯೂರೋಪಿನ