ಪುಟ:ಕಮ್ಯೂನಿಸಂ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ ವೈಜ್ಞಾನಿಕ ಸಮಾಜವಾದ ಪ್ರಾಯವನ್ನು ವ್ಯಕ್ತಪಡಿಸದೆ, ಕೇವಲ ವರ್ಗರಹಿತ ಮತ್ತು ಶೋಷಣಾ ರಹಿತ ಸಮಾಜ ವ್ಯವಸ್ಥೆಯ ರಚನೆ ನಮ್ಮ ಗುರಿಯೂ ಸಹ ಆಗಿದೆ ಎಂದು ಉದ್ಯೋಷಿಸಿದರೆ ಸಾಲದು. 1 ಬಯಕೆ ಸಮಾಜವಾದೀ ವ್ಯವಸ್ಥೆ ಯನ್ನು ತರುವುದಿಲ್ಲ. ಕಾರ್ಯಕ್ಷೇತ್ರದಲ್ಲಿ ಮತ್ತು ಕಾರ್ಯ ರಂಗದಲ್ಲಿ ಕೈಗೊಳ್ಳುವ ಆರ್ಥಿಕನೀತಿ ಉತ್ಪಾದನಾ ಸಾಧನಗಳ ಸಮಾಜೀಕರಣವನೂ, ಬಂಡವಾಳವರ್ಗದ ನಿರ್ಮಲವನ್ನೂ ತರುತ್ತದೆಯೇ ಅಥವಾ ಇಲ್ಲವೇ ಎಂಬುದೇ ತಿರುಳು, ಮತ್ತು ಇದನ್ನು ತರಬಲ್ಲ ಕ್ರಾಂತಿಕಾರ ಕಾರ್ಮಿಕವರ್ಗ ಅಧಿಕಾರದಲ್ಲಿ ದೆಯೆ ಎಂಬುದು ಮುಖ್ಯವಾದದ್ದು. ಹಾಗಲ್ಲದೆ ಧರ್ಮದ ಚ್ಯುತಿ “ಯಿಂದ, ದಾನ ಧರ್ಮಗಳು ಇಲ್ಲದಿರುವುದರಿಂದ, ಬಂಡವಾಳವರ್ಗ ಇತರರ ಪರವಾಗಿ ಸ್ವಾಮ್ಯವನ್ನು ಹೊಂದಿದೆ ಎಂಬುದನ್ನು ಅದು ಮರೆತಿರುವುದರಿಂದ, ಅಜ್ಞಾನದಿಂದ, ಅತಿಯಾಸೆಯಿಂದ ಲೋಹಗಳು ಬಂದಿವೆ ಎಂದು ಹೇಳುವು ದಾದರೆ ಬಂಡವಾಳಶಾಹಿ ವ್ಯವಸ್ಥೆ ಸ್ವಲ್ಪವೂ ಕದಲದೆ ಮುಂದುವರಿಯು ವುದರಲ್ಲಿ ಸಂದೇಹವೇ ಇಲ್ಲ. ಮೇಲಾಗಿ ಸಮಾಜವಾದವನ್ನು ಧರ್ಮ ಚ್ಯುತಿಗೆ, ದಾನ ಧರ್ಮಗಳ ಚ್ಯುತಿಗೆ ಇಳಿಸುವುದಾದರೆ ಅದು 'ಕಲ್ಪನಾ' ಸಮಾಜವಾಗುತ್ತದೆ. ಭಾರತಕ್ಕೆ ಆ ವಾದ ಮಾಸಲಾದದ್ದೇ ಆಗಿರದೆ ಅದರ ಛಾಯಾ ವಿನ್ಯಾಸಗಳು ಪಾಶ್ಚಾತ್ಯ ದೇಶಗಳಲ್ಲೂ ಕಂಡುಬಂದಿದೆ. ಕಲ್ಪನಾ ಸಮಾಜವಾದದ ನಿಷ್ಪ ಯೋಜಕತೆ ಮತ್ತು ಅಸಹಾಯಕತೆ ಈಗಾಗಲೇ ಬಯಲಾಗಿವೆ. ಶೋಷಣೆಗೆ ಮತ್ತು ವರ್ಗವಿರಸಕ್ಕೆ ಆವಾಸಸ್ಥಾನವಾದ ಬಂಡ ವಾಳಶಾಹಿ ವ್ಯವಸ್ಥೆಯನ್ನು ನಿರ್ಮೂಲಗೊಳಿಸಲು ಕಾರ್ಮಿಕವರ್ಗ ಕೈಗೊ ಳ್ಳುವ ಕ್ರಾಂತಿಕಾರಕ ಚಳವಳಿಯಿಂದ ಮಾತ್ರ ಸಾಧ್ಯವೆಂದು ತಿಳಿಸಲು ವೈಜ್ಞಾನಿಕ ಸಮಾಜವಾದ ಜನಿಸಿದೆ. (1) ಭಾರತದಲ್ಲಿ ಸಮಾಜವಾದೀ ಮಾದರಿಯ ಸಮಾಜವ್ಯವಸ್ಥೆಯ ಸ್ಥಾಪನೆ ತನ್ನ ಗುರಿ ಎಂದು ಕಾಂಗ್ರೆಸ್ ಪಕ್ಷ ಘೋಷಿಸಿದೆ, ವ ತ್ತು ಸಮಾಜವಾದೀ ತತ್ರ ದ ಬಗ್ಗೆ ವಿವರಣೆಯನ್ನೂ ಕೊಡಲಾಗಿದೆ, ಈ ವಿವರಣೆ ಈ ರೀತಿ ಇದೆ : ಸಮಾಜದ ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯ ಇಲ್ಲದಿರುವ ಆರ್ಥಿಕ ವ್ಯವಸ್ಥೆಯೇ ಸಮಾಜವಾದೀ ವ್ಯವಸ್ಥೆ ಎಂದು ನಾವು ಭಾವಿಸುವುದು ತಪ್ಪು, ಆರ್ಥಿಕ ಅಸಮಾ ನತೆ (Economic inequality), ಬಡತನ, ನಿರುದ್ಯೋಗ, ಶೋಷಣೆ, ಇವು. ಗಳನ್ನು ನಾಶಪಡಿಸುವುದು ಮಾರ್ಕ್ಸ್‌ವಾದಿಗಳ ಧೈಯ ಎನ್ನುವುದಾದರೆ, ಅದು