ಪುಟ:ಕಮ್ಯೂನಿಸಂ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದ ಮತ್ತು ಭಾರತ ೧ರ್೮ ಎಲ್ಲರ ಧೈಯವೂ ಆಗಿದೆ. ಇವುಗಳ ವಿನಾಶ ಅಗತ್ಯವೆಂದು ಸ್ಪಷ್ಟಗೊಳಿಸುವ ಮಾರ್ಕ್ಸ್ ತತ್ರ ದಲ್ಲಿ ಯಾವ ವಿಶೇಷತೆಯೂ ಇಲ್ಲ. ಆರ್ಥಿಕ ಅಸಮಾನತೆಯನ್ನು ಶ್ರೀಮಂತ ಮತ್ತು ನಿರ್ಗತಿಕ ಎಂಬ ವ್ಯತ್ಯಾಸವನ್ನು ಕಡಿಮೆಮಾಡುವುದರ ಮೂಲಕ, ಬಡತನವನ್ನು ಅಧಿಕ ಉತ್ಪಾದನೆಯನ್ನು ಕೈಗೊಂಡು ಸಂಪತ್ತನ್ನು ಹೆಚ್ಚಿಸುವುದರ ಮೂಲಕ, ನಿರುದ್ಯೋಗವನ್ನು ಉದ್ಯೋಗವನ್ನು ಕಲ್ಪಿಸುವುದರ ಮೂಲಕ, ಶೋಷಣೆಯನ್ನು ಕೆಲಸದ ಅವಧಿ, ಕ ಲಿಯ ನಿಗಧಿ ಇತ್ಯಾದಿಗಳನ್ನು ಕಟ ನಿಟ್ಟಾಗಿ ಗೊತ್ತು ಪಡಿಸುವುದರ ಮೂಲಕ, ಸರಿಪಡಿಸುವುದಕ್ಕೆ ಸಿದ್ಧವಿದೆ ಸರಿ ಪ್ರಮಾಣದಲ್ಲಿ ವಿನಿಯೋಗ (Distribution) ಇಲ್ಲದಿರುವುದು, ಸ್ವಾರ್ಥ, ಮತ್ತು ಸ್ವಾಮ್ಯವುಳ್ಳವರು ತಾವು ಹೊಂದಿರುವ ಸ್ವಾಮ್ಯ ಇತರರ ಪರವಾಗಿ ಎಂಬ (in trust) ಮನೋಭಾವ ಕ್ಷೀಣಿಸಿರುವುದು ಸಮಾಜದ ಆರ್ಥಿಕ ವ್ಯವಸ್ಥೆಗೆ ಮುಖ್ಯ ಕಾರಣಗಾಗಿವೆ. ಆದುದರಿಂದ ಸೂಕ್ತ ಆರ್ಥಿಕ ಮತ್ತು ಮನಬದಲಾ ವಣೆಯ ಕಾರ್ಯಕ್ರಮದ ಮೂಲಕ ಮಾರ್ಕ್ಸ್‌ವಾದಿಗಳು ಎಂತಹ ಕ್ಷೇಮಕರ ವ್ಯವಸ್ಥೆಯ ಆಗಮನಕ್ಕಾಗಿ ಹಂಬಲಿಸುತ್ತಿರುವ ಅಂತಹ ವ್ಯವಸ್ಥೆಯನ್ನೇ ತರಬಹುದಾಗಿದೆ. ಇಂತಹ ಮಾರ್ಗದಲ್ಲಿ ಉತ್ಪಾದನಾ ಸಾಧನಗಳಲ್ಲಿರುವ ಖಾಸಗೀ ಸ್ನಾನದ ನಾಶ ಒಂದು ವಿಧದ ಸLಧನೆಪಾಯವೇ ಹೊರತು ಅದೇ ಮುಖ್ಯವಲ್ಲ. ಎರಡನೆಯದಾಗಿ, ಸಮಾಜದಲ್ಲಿ ವರ್ಗಗಳಾಗಲೀ ಅಥವ ವರ್ಗವೈಷಮ್ಮ ವಾಗಲೀ ಇಲ್ಲ. ಮಾರ್ಕ್ಸ್‌ವಾದಿಗಳು ಇಲ್ಲದಿದ್ದನ್ನು ಬೆಟ್ಟ ದಾಕಾರ ಮಾಡಿ ದ್ದಾರೆ. ಎಲ್ಲರಲ್ಲೂ ಸಾಕಷ್ಟ ಪ್ರಮಾಣದಲ್ಲಿ ಧರ್ಮಬುದ್ದಿ, ತ್ಯಾಗ ಬುದ್ದಿ ಮತ ವಿವೇಕ ಬುದ್ಧಿ ಇವೆ; ಇವುಗಳನ್ನು ಪ್ರಕಾಶಮಾನಕ್ಕೆ ತರುವ ಕೆಲಸ ಮಾತ್ರ ಹಿಂದೆ ಬಿದ್ದಿದೆ. ಹಿಂಸೆ, ಕ್ರಾಂತಿ ಬಲಾತ್ಕಾರ ಮತ್ತು ಹೋರಾಟ ಇವುಗಳ ಆರಾಧನೆ ಜನರಲ್ಲಿ ದೈತ್ಯಗುಣಗಳನ್ನು ಪ್ರಚೋದನೆಗೊಳಿಸುತ್ತವೆ. ಆದುದರಿಂದ ಭಾರತದ ಸಾಂಸ್ಕೃತಿಕ ಹಿನ್ನೆಲೆಗೆ ಅನುಗುಣವಾಗಿರುವ ಧಾರ್ಮಿಕ ಮತ್ತು ಅಹಿಂಸಾತ್ಮಾಕ ಮಾರ್ಗ ಭಾರತೀಯ ಮಾರ್ಗವಾಗಿದೆ. ಮೂರನೆಯದಾಗಿ, ಕಲ್ಯಾಣಸವರಾಜ ಅಥವ ಸರದಯ ಸಮಾಜ ಕ ಸಮಾಜವಾದೀ ಸಮಾಜಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಹೆಸರು ಬೇರೆಯಾಗಿ ವೆಯೇ ಹೊರತು ವಾಕೈವವಾಗಿ ಎರಡೂ ಒಂದೇ ಆಗಿವೆ, ಸಮಾಜವಾದಿ ಸಮಾಜದ ಧೈಯ ಸಕಲರಿಗೂ ಕೇವವನ್ನು ಉಂಟು ಮಾಡುವುದಾದರೆ, ಕಲ್ಯಾಣ ಸಮಾಜದ ಹೆಗ್ಗುರಿಯೂ ಇದೇ ಆಗಿದೆ. ಕಲ್ಯಾಣ ಸಮಾಜ ಅಥವ ಸರೊಡಯ ಸಮಾಜವನ್ನು ಸಮಾಜವಾದೀ ಸಮಾಜವೆಂದಾದರೂ ಕರೆಯಬಹುದು ಅಥವಾ ಆದನ್ನು ಹೋಲುವ ಸಮಾಜವಂದಾದರೂ ಕರೆಯಬಹುದು. (See : NarX and Gandhi, by K. G. Mashruwala).