ಪುಟ:ಕಮ್ಯೂನಿಸಂ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದ ಮತ್ತು ಭಾರತ ೧೯೧ ಬಡತನ, ಶೋಷಣೆ ಇವುಗಳನ್ನು ಖಂಡಿಸಲಿಕ್ಕಾಗಿ ಉಪಯೋಗಿ ಸುವ ಕನಿಕರದ ಮಾತುಗಳು ಸಮಾಜವಾದವಾಗುವುದಿಲ್ಲ, ಭ್ರಾತೃ ಪ್ರೇಮ, ಮಾನವ ಪ್ರೇಮ, ಸಮಾಜ ಪ್ರೇಮ ಮತ್ತು ಅನುಕಂಪ ಇವುಗಳೇ ಸಮಾಜ ವಾದೀ ವ್ಯವಸ್ಥೆಗೆ ಮಾರ್ಗ ತೋರಿಸಲಾರವು. ಸಮಾಜವಾದವಾಗುವುದಕ್ಕೆ ಮತ್ತು ಸಮಾಜವಾದೀ ವ್ಯವಸ್ಥೆ ಯ ಆವಶ್ಯಕತೆಯನ್ನು ತೋರಿಸಲಿಕ್ಕೆ ಆರ್ಥಿಕ ವ್ಯವಸ್ಥೆಯಲ್ಲಿ ಅಡಗಿರುವ ವಿರಸಗಳು ಸಮಾಜವಾದೀ ವ್ಯವಸ್ಥೆಯ ಆಗಮನ ವನ್ನು ಅನಿವಾರ್ಯವನ್ನಾಗಿಮಾಡಿವೆ ಎಂದು ತೋರಿಸಬೇಕು ; ಮತ್ತು ಈ ಅನಿವಾರ್ಯತೆಯನ್ನು ಸ್ಪಷ್ಟಪಡಿಸಲಿಕ್ಕಾಗಿ ಆಧುನಿಕ ಬಂಡವಾಳಶಾಹಿ ಸುಧಾರಣಾ ಕಾರ್ಯಕ್ರಮ ಸಮಾಜವಾದೀ ಕಾರ್ಯಕ್ರಮವಲ್ಲ ಮತ್ತು ಈ ಕಾರ್ಯಕ್ರಮ ಸಮಾಜವಾದೀ ವ್ಯವಸ್ಥೆಯನ್ನು ತರುವುದೂ ಇಲ್ಲ. ಸಮಾಜ ವಾದೀ ತತ್ರ ವನ್ನು ಮತ್ತು ಸಮಾಜವಾದೀ ವ್ಯವಸ್ಥೆಯ ಆಗಮನವನ್ನು ಸುಧಾ ರಣಾ ಕಾರ್ಯಕ್ರಮಕ್ಕೆ ಇಳಿಸುವುದಾದರೆ, ಸ್ಪಾ ಮ ವರ್ಗ ಕೈಗೊಳ್ಳಬಹುದಾದ ಸುಧಾರಣಾ ಕಾರ್ಯಕ್ರಮವೂ ಸಹ ಸಮಾಜವಾದೀ ವ್ಯವಸ್ಥೆಯ ಆಗಮನವನ್ನು ಸಿದ್ಧಗೊಳಿಸುತ್ತದೆ. ಸುಧಾರಣಾ ಕಾರ್ಯಕ್ರಮ ಖಾಸಗೀ ಸ್ವಾಮ್ಯಕ್ಕೆ ರಕ್ಷಣೆ ಕೊಟ್ಟು, ಅದರ ರಕ್ಷಣಾರ್ಥವಾಗಿ ಮಧ್ಯಮವರ್ಗವನ್ನು ಬಲಪಡಿಸುವ ಕಾರ್ಯಕ್ರಮವಾಗಿದೆ, ಸರ್ವೋದಯದ ನೀತಿಯೂ ಸಹ ಸ್ವಾಮ್ಯಾಧಾರವಾದಮೇಲೆ ಆರ್ಥಿಕ ಅಸಮಾನತೆ ಯನ್ನು ಸರಿಪಡಿಸುವ ಕಾರ್ಯಕ್ರಮವಾಗಿದೆ. ಭೂಮಾಲೀಕರಿಂದ ಭಣಮಿ ಯನ್ನು ದಾನದ ರೂಪದಲ್ಲಿ ಕೊಡುವಂತೆ ಅವರ ಧರ್ಮ ಬುದ್ದಿಗೆ ವಿಜ್ಞಾ ಪಿಸಿಕೊಳ್ಳುವುದು. ಅವರು ಎಷ್ಟು ಬೇಕಾದರೂ ಕೊಡಬಹುದು. ಹೀಗೆ ಸಂಗ್ರಹಣವಾದ ಭೂಮಿಯನ್ನು ಭೂಮಿ ಇಲ್ಲದವರಿಗೆ ಕೊಡುವುದು, ಆದ ರಿಂದಾಗಿ, ಭೂಮಿ ಇಲ್ಲದವರು ಎಂಬ ವರ್ಗ ಹೋಗುತ್ತದೆ ; ಸಮಾಜದಲ್ಲಿ ಆರ್ಥಿಕ ಅಸಮಾನತೆ ಕಡಿಮೆಯಾಗುತ್ತದೆ ; ಅತಿ ಹೆಚ್ಚು ಪ್ರಮಾಣದಲ್ಲಿ ಭೂಮಿ ಯನ್ನು ಯಾರೂ ಹೊಂದಿಲ್ಲದವರಾಗುತ್ತಾರೆ; ಎಲ್ಲರೂ ಸಣ್ಣ ಪುಟ್ಟ ಪ್ರಮಾಣ ದಲ್ಲಿ ಭೂಮಿಯನ್ನು ಹೊಂದಿರುವವರಾಗುತ್ತಾರೆ. ದಾನದ ಪಾತ್ರ ಈ ಅಸಮಾ ತೆಯನ್ನು ತೊಡೆಯುವುದಾಗಿದೆ. ಆದರೆ ಈ ಆರ್ಥಿಕ ನೀತಿ ಹಳೆಯದಲ್ಲಿ ಹಳೆ ಯದು. ವಿಪ್ತ ವರಹಿತ ಸಮಾಜ ವ್ಯವಸ್ಥೆಯನ್ನು ಆಶಿಸಿದ ಅರಿಸ್ಟಾಟಲನವಾದ ಇದೇ ಆಗಿತ್ತು. ಸುಧಾರಣಾ ಕಾರ್ಯಕ್ರಮ ಮತ್ತು ಧರ್ಮ ಬುದ್ದಿಯ ಪ್ರಚೋದನೆ ಇವುಗಳ ಮೂಲಕ ಸಮಾಜವಾದ ಆಗಮಿಸುವುದಾಗಿದ್ದಿದ್ದರೆ, ಸಮಾಜವಾಡ ಎಂದೋ ಆಗಮಿಸುತ್ತಿತ್ತು. (ಪುಟ ೧೪೬ ಮತ್ತು ೧೪೭ ನೋಡಿ)