ಪುಟ:ಕಮ್ಯೂನಿಸಂ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೨ ವೈಜ್ಞಾನಿಕ ಸಮಾಜವಾದ ವ್ಯವಸ್ಥೆ ಯ ಚಲನೆಯ ಬಗ್ಗೆ, ಅದು ಎಡೆಕೊಡುವ ವಿರಸಗಳ ಬಗ್ಗೆ ಮತ್ತು ಉತ್ಪಾದನಾಸಾಧನಗಳ ಸಮಾಜೀಕರಣವನ್ನು ಈ ವಿರಸಗಳು ಅಗತ್ಯ ಗೊಳಿಸಿರುವುದರ ಬಗ್ಗೆ ಖಚಿತವಾದ ವಿವರಣೆ ಬೇಕು. ಗಾಂಧೀವಾದ, ದಾನವಾದ, ಸದ್ರೋದಯ, ಗ್ರಾಮ್ಯ ವಾದ ಇವುಗಳೆಲ್ಲದರಲ್ಲಿ ಈ ವಿವರಣೆ ಇಲ್ಲ ಆಧುನಿಕ ಸಮಾಜವಾದದ ಮುಂದೋಟದಲ್ಲಿ ಇವುಗಳು ಕ್ಷಣಿಕ ಮತ್ತು ಅಸಹಾಯಕತೆಯ ವಾದಗಳಾಗಿವೆ. ವೈಜ್ಞಾನಿಕ ಸಮಾಜವಾದ ಮಾರ್ಗ ತೋರಿಸಿದೆ. ಬಂಡವಾಳಶಾಹಿ ವ್ಯವಸ್ಥೆಯ ವಿರಸಗಳು ಜನಸಮು ದಾಯವನ್ನು ವೈಜ್ಞಾನಿಕ ಸಮಾಜವಾದದ ಕಡೆಗೆ ಕರೆದೊಯ್ಯುತ್ತಿವೆ. ದಿನೇ ದಿನೇ ರೂಪಗೊಳ್ಳುತ್ತಿರುವ ಕಾರ್ಮಿಕವರ್ಗದ ಸಂಘಟನೆ ಮತ್ತು ಕ್ರಾಂತಿಕಾರಿ ಚಳವಳಿ ಮಾರ್ಕ್ಸ್‌ವಾದದ (ಆಧುನಿಕ ಅಥವಾ ವೈಜ್ಞಾನಿಕ ಸಮಾಜವಾದ) ವೀರ್ಯ ಮತ್ತು ಸತ್ವವನ್ನು ವ್ಯಕ್ತಪಡಿಸುತ್ತಲಿವೆ. ಅಧ್ಯಯನ : Imperialism: Lenin : (with New Data), P.P.H.B., 1945. On the Problems of Leninism : Stalin : Pages 13-92. _F.R.P.H. 1945. Marx and Engels on India: Ed. M. R. Anand : Socialist Book Club : Allahabad. The Transition from Feudalism to Capitalism : Symposium - Fore Publications, London: The Social Background of Indian Nationalism : Desai : Bombay School Publications, India Today : R. P. Dutt : P, P, H, Bombay Stages of Indian History : D. D. Kosambi : Iscu8, Vol. I, No. 1, 1954,