ಪುಟ:ಕಮ್ಯೂನಿಸಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ ೨೩ ಕೆಲವು ಸಮಾಜವಾದಿಗಳು ಶೋಷಣೆಗೆ ಒಳಪಟ್ಟವರ ಆಶೋತ್ತರ ಗಳಿಗೆ ಪರಿಹಾರ ತರುವ ರೀತಿಯಲ್ಲಿ ಸುಧಾರಿತ ಸಮಾಜವನ್ನು ' ನ್ಯಾಯ ? “ ಧರ್ಮ' ಗಳ ಹೆಸರಿನಲ್ಲಿ ಪ್ರಚಾರ ಮಾಡಿದ್ದರು. ಸಮಾಜ ವ್ಯವಸ್ಥೆ ಯನ್ನು ' ನ್ಯಾಯ ' : ಧರ್ಮ' ಗಳ ಅಡಿಗಲ್ಲಿನಮೇಲೆ ಸ್ಥಾಪಿಸುವುದಾದರೆ ಚ್ಯುತಿಗೊಂಡಿರುವ “ ನ್ಯಾಯ ' ' ಧರ್ಮ ' ಗಳನ್ನು ಪುನರುದ್ಧಾರಮಾಡು ವುದಾದರೆ ಎಲ್ಲವೂ ಸರಿಹೋಗುವುದೆಂದಿದ್ದರು, ಇನ್ನು ಕೆಲವರು ಸಮಾಜ ದಲ್ಲಿ ಕಂಡುಬರುತ್ತಿರುವ ನ್ಯೂನತೆಗಳಿಗೆ ಸ್ವಾರ್ಥ, ಪೈಪೋಟಿ ಮತ್ತು ಲಾಭ ದಾಸೆ ಕಾರಣಗಳೆಂದೂ, ಸ್ವಾಮ್ಯದಲ್ಲಿ ಅತಿ ಆಸಕ್ತಿಯನ್ನು ಕಡಿಮೆ ಮಾಡಿ ಕೊಳ್ಳುವುದರಿಂದಲೂ, ಸ್ವಾಮ್ಯವರ್ಗ ತನ್ನ ವರ್ತನೆಯನ್ನು ಮಾರ್ಪಾಡು ಮಾಡಿಕೊಳ್ಳುವುದರ ಮೂಲಕವೂ, ಹೊಂದಿರುವುದೆಲ್ಲವೂ ಬಡವರ ಪರ ವಾಗಿ ಎಂಬ ಧೋರಣೆಯನ್ನು ಸ್ವಾಮ್ಯವರ್ಗ ತಾಳುವುದರಿಂದಲೂ ಪರಿಹಾರ ಸಿಗುವುದೆಂದಿದ್ದರು, ಸ್ವಾಮ್ಯ ಉಳ್ಳವರು ತಮಗೆ ಸಲ್ಲತಕ್ಕದ್ದನ್ನು ಮಾತ್ರ ಇಟ್ಟು ಕೊಂಡು ಮಿಕ್ಕದ್ದೆಲ್ಲವನ್ನೂ ದುಡಿಮೆ ಮಾಡಿದವರ ಸ್ವತ್ತೆಂದು ಭಾವಿಸಿ ನಡೆಯಬೇಕೆಂದೂ ನ್ಯೂನತೆಗಳಿಗೆ ಮುಖ್ಯವಾಗಿ ಸ್ವಾಮ್ಯ ಕಾರಣವಾಗಿ ರದೆ ಅದನ್ನು ಉಪಯೋಗಿಸುವ ರೀತಿ ಕಾರಣವಾಗಿದೆ ಎಂದೂ, ಆದುದ ರಿಂದ ಸ್ವಾಮ್ಯ ಉಳ್ಳವರು ಸಮಾಜದ ಹಿತಚಿಂತಕರಾಗಿ ನಡೆದುಕೊಳ್ಳು ವಂತೆ ಪರಿವರ್ತನೆ ಮಾಡುವುದಕ್ಕಾಗಿ ಪ್ರಚಾರವನ್ನು ಕೈಗೊಳ್ಳಬೇಕೆಂದರು. ಇನ್ನು ಕೆಲವರು ಸಮಾಜದಲ್ಲಿರುವ ನ್ಯೂನತೆಗಳಿಗೆ ಸನಾತನ ಮತಧರ್ಮ ವನ್ನೂ ಮತ್ತು ಅದರ ಆಚರಣೆಯನ್ನೂ ಮರೆತಿರುವುದೇ ಮುಖ್ಯ ಕಾರಣ ವಾಗಿದೆ ಎಂದಿದ್ದರು. ಕ್ರಿಸ್ತ ಮತಾವಲಂಬಿಗಳು ಕ್ರಿಸ್ತನು ಉದಾ ಹರಿಸಿದ ನೀತಿವಾಣಿಗಳಲ್ಲಿ ಸಮಾಜ ಕಲ್ಯಾಣ ಅಡಗಿರುವುದಾಗಿಯೂ, ಬಡವನಾದವನು ಶ್ರೀಮಂತನಿಗಿಂತ ಸುಲಭವಾಗಿ ದೇವರ ದಯೆಯನ್ನು ಗಳಿಸುತ್ತಾನೆಂದೂ, ಶ್ರೀಮಂತ ಜೀವನ ಪಾಪದ ಜೀವನವೆಂದೂ ಆದುದರಿಂದ ಸರ್ವರೂ ಕ್ರೈಸ್ತ ಬೋಧನೆಯನ್ನೇ ಅನುಸರಿಸ ಬೇಕೆಂದೂ ಸಮಾಜವಾದ ತ… ಕ್ರೈಸ್ತ ಬೋಧನೆಯನ್ನು ಅನು ಸ್ಥಾನಕ್ಕೆ ತರುವುದರಲ್ಲಿ ಅಡಗಿದೆ ಎಂದೂ ಪ್ರಚಾರ ಕೈಗೊಂಡಿದ್ದರು. ಇನ್ನು ಕೆಲವರು ಇಂಗ್ಲಿಷ್ ಮತ್ತು ಫ್ರೆಂಚ್ ಕ್ರಾಂತಿಗಳಿಂದ ಸ್ಫೂರ್ತಿ ಪಡೆದು ಸಮಾಜದಲ್ಲಿರುವ ನ್ಯೂನತೆಗಳಿಗೆ ಸ್ವಾಮ್ಯವೇ ಮುಖ್ಯ ಕಾರಣವಾಗಿದೆ