ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪. ವಿ. - ವೈಜ್ಞಾನಿಕ ಸಮಾಜ ವಾದ ಎಂದರು, ಪ್ರೌಢನ್ ಎಂಬ ಸಮಾಜವಾದಿ ( ಸ್ವಾಮ್ಯ ಕಳವು ' ಎಂದು ಉದ್ಯೋಷಿಸಿದನು (Property is theft). ಹಲವು ಉಗ್ರಗಾಮಿಗಳು ಸ್ವಾಮ್ಯವನ್ನು ವಿನಾಶಗೊಳಿಸಿ ಆರ್ಥಿಕ ಸಮಾನತೆಯನ್ನು ತರುವುದೇ ಸಮಾಜವಾದವೆಂದಿದ್ದರು. ಇನ್ನು ಕೆಲವರು ಸಮಾನತೆ ಎಂದರೆ ಎಲ್ಲ ಪೌರರ ಆವಶ್ಯಕತೆ, ಅಭಿರುಚಿ ಒಂದೇ ಎಂದೂ, ಒಬ್ಬ ವ್ಯಕ್ತಿಗೂ ಇನ್ನೊಬ್ಬ ವ್ಯಕ್ತಿಗೂ ಯಾವ ವ್ಯತ್ಯಾಸವೂ ಇಲ್ಲವೆಂದೂ, ಸಮಾನತೆ ಎಂದರೆ ಎಲ್ಲ ವಿಧದಲ್ಲೂ ಸಮಾನತೆ ಎಂದೂ ಘೋಷಿಸಿದರು. (Equili- tarian Socialists.) ಇನ್ನು ಕೆಲವರು ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ಪ್ರಾಧಾನ್ಯತೆ ಪಡೆದ ಬುದ್ಧಿಶಕ್ತಿಯ (Reason) ಆರಾಧಕರಾದರು. ಬುದ್ಧಿಶಕ್ತಿಯ ಬಲದಿಂದ ಸಮಾಜದಲ್ಲಿರುವ ನ್ಯೂನತೆಗಳನ್ನೆಲ್ಲಾ ತೊಡೆಯಲು ಸಾಧ್ಯ ವೆಂದರು, ಬುದ್ಧಿಶಕ್ತಿಯನ್ನು ಪ್ರಯೋಗಿಸಿ ಸ್ವಲ್ಪವೂ ಕಲ್ಮಷವಿಲ್ಲದ ಸಮಾಜವ್ಯವಸ್ಥೆಯ ನಿರ್ಮಾಣದಲ್ಲಿ ತೊಡಗಿದರು, ಸುಧಾರಣೆಯನ್ನು ಹೊಂದಿ ರುವ ಸಮಾಜ ವ್ಯವಸ್ಥೆಗಳ 'ಮಾದರಿ' (Models) ಯನ್ನು ರಚಿಸಿದರು. ಮುಖ್ಯವಾಗಿ, ಬುದ್ಧಿಶಕ್ತಿಗೆ ಈಗ ತಾನೆ ಪರಿಹಾರ ಮಾರ್ಗ ಗೋಚರ ವಾಗಿದೆ ; ಇಷ್ಟು ದಿವಸಗಳು ಈ ದಿವ್ಯವಾದ ಬೆಳಕು ಬುದ್ಧಿಶಕ್ತಿಗೆ ಅಗೋ ಚರವಾಗಿದ್ದು ಮಾನವಕೋಟಿ ನರಳಬೇಕಾಯಿತು ; ಈಗ ದಿವ್ಯ ಬೆಳಕು ಗೋಚರವಾಗಿರುವುದು ಮಾನವ ಕೋಟಿಯ ಭಾಗ್ಯವೆನ್ನಬಹುದು; ಮಾನವ ಕೋಟ ಇಷ್ಟು ದಿವಸಗಳವರೆಗೂ ವೃಥಾ ಕಷ್ಟ ಪರಂಪರೆಗಳಿಗೆ ಒಳಗಾಗ ಬೇಕಾಯಿತು ; ಆದುದರಿಂದ, ಈಗ ಗೋಚರವಾಗಿರುವ, ಬುದ್ಧಿಶಕ್ತಿಯ ಬಲದಿಂದ ನಿರ್ಮಾಣವಾಗಿರುವ ' ಮಾದರಿ' ಗಳಲ್ಲಿ ಒಂದನ್ನಾದರೂ ಅಂಗೀಕರಿಸಿ ಕೃತಾರ್ಥರಾಗುವುದು ಸರ್ವರ ಕರ್ತವ್ಯವಾಗಿದೆ ಎಂದರು, ಹೀಗೆ ಬಗೆಬಗೆಯ, ಸಮಾಜವಾದಗಳು ಹಾರಾಡುತ್ತಿದ್ದವು. ಆದರೆ ದಿಟವಾಗಿ ನೋವನ್ನು ಅನುಭವಿಸುತ್ತಿರುವ ಶೋಷಿತವರ್ಗ ಮಾತ್ರ ಮುಷ್ಕರ, ದಂಗೆ, ಒಳಯುದ್ದಗಳ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸು ತಿರುವುದನ್ನೂ, ಅಡ್ಡಿ ಬಂದ ಶಕ್ತಿಗಳನ್ನೂ ಸೈನ್ಯಗಳನ್ನೂ ಎದುರಿಸಿ ಮಡಿ ಯುತ್ತಿರುವುದನ್ನೂ ಮಾರ್ಕ್ಸ್-ಎಂಗೆಲ್ಸ್ ಕಂಡರು, ಶೋಷಿತವರ್ಗದ ಕಾರ್ಯಾಚರಣೆಯಲ್ಲಿ ಯಾವ ತತ್ವಪ್ರೇರಣೆ ಇಲ್ಲದಿದ್ದರೂ ಬದುಕಲು