ಪುಟ:ಕಮ್ಯೂನಿಸಂ.djvu/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ವೈಜ್ಞಾನಿಕ ಸಮಾಜವಾದದ ಆಧಾರ ಅಧ್ಯಾಯ-3, ಮಾರ್ಕ್ಸ್ ವಾದ ವಿಶ್ವದೃಷ್ಟಿಯನ್ನು (World Outlook) ನಿರೂಪಿಸುವ ಒಂದು ತತ್ವ ಸಿದ್ಧಾಂತವಾಗಿದೆ. ವೈಜ್ಞಾನಿಕ ಸಮಾಜ ವಾದ ಈ ತತ್ಸಮುಚ್ಚಯದಲ್ಲಿ ಹೆಣೆದುಕೊಂಡು ತಾರ್ಕಿಕ ರೂಪದಲ್ಲಿ ಹೊರಬಿದ್ದಿರುವ ಭಾಗವಾಗಿದೆ. ಈ ಕಾರಣದಿಂದ ಮಾರ್ಕ್ಸ್ ಸಿದ್ಧಾಂತ ದಲ್ಲಿ ಪ್ರಕೃತಿಯ ಜನನ, ಪ್ರಕೃತಿಯ ಕಾರ್ಯವಿಧಾನ, ಪ್ರಕೃತಿಗೂ ಮಾನವ ನಿಗೂ ಇರುವ ಸಂಬಂಧ ಸಮಾಜದ ಜನನ, ಸಮಾಜದ ಬೆಳವಣಿಗೆ, ಸಮಾಜದಲ್ಲಿ ಕಾಣುವ ಆರ್ಥಿಕ ವ್ಯವಸ್ಥೆ, ಕಟ್ಟಳೆ, ಕಾನೂನು, ಜಾತಿ, ಮತ, ದೇವರಲ್ಲಿ ನಂಬಿಕೆ, ನೀತಿ, ಶಾಸ್ತ್ರಗಳು ಇತ್ಯಾದಿ ಎಲ್ಲದರ ಸ್ವರೂಪ, ವಿನ್ಯಾಸ, ಅವುಗಳನ್ನು ಅರ್ಥಮಾಡಿಕೊಳ್ಳುವ ರೀತಿ, ಅವುಗಳಿಗಿರುವ ಪರಸ್ಪರ ಸಂಬಂಧ, ಅವುಗಳ ಸ್ಥಾನಮಾನಗಳು, ಇತ್ಯಾದಿಗಳನ್ನು ಚರ್ಚಿಸ ಲಾಗಿದೆ. ಮಾನವನ ಬಾಳು ಮುಖ್ಯವಾದದ್ದು. ಬಾಳಿನಲ್ಲಿ ರೂಪರೇಖೆ ಗಳು ಇರುತ್ತವೆ. ಈ ರೂಪರೇಖೆಗಳ ಒಂದು ಭಾಗದಲ್ಲಿ ತಲ್ಲೀನರಾಗಿ ಒಟ್ಟು ಬಾಳನ್ನು ಮರೆತರೆ ಕುರುಡರು ಆನೆಯನ್ನು ಗುರುತಿಸಿದ ಕಥೆ ಯಾಗುತ್ತದೆ. ಒಟ್ಟು ಬಾಳನ್ನು ಅರಿಯಲು ಯತ್ನಿಸಬೇಕು. ಆಗಲೇ ಇತಿಹಾಸದ ಉದ್ದಕ್ಕೂ ವಿವಿಧ ಕಾಲಗಳಲ್ಲಿ ವಿವಿಧ ಸಮಾಜಗಳಲ್ಲಿ, ಬಾಳಿನ ಸ್ವರೂಪ, ಚಿತ್ರ ವಿಚಿತ್ರ ಮತ್ತು ರೂಪರೇಖೆಗಳು ವ್ಯಕ್ತವಾಗುವುವು. ಬಾಳು ಸಮಾಜದಲ್ಲಿ ನಡೆಯುತ್ತದೆ ; ಇತರ ವ್ಯಕ್ತಿಗಳ ಜೊತೆಯಲ್ಲಿ ಸಂಬಂಧವನ್ನು ಬೆಳಸಿ ಸಾಗುತ್ತದೆ, ಸಾಗಾಣಿಕೆಯಲ್ಲಿ ವಿಧವಿಧವಾದ ಸಮಸ್ಯೆಗಳು ತಲೆದೋರುತ್ತವೆ. ಸಮಸ್ಯೆಗಳನ್ನು ಬೇರೆ ಬೇರೆ ಹೆಸರಿನಲ್ಲಿ ಕರೆದರೂ ಅವುಗಳೆಲ್ಲವೂ ಒಂದೇ ಜೀವನದ ಸಮಸ್ಯೆಗಳು, ಈ ಮರ್ಮ ವನ್ನು ಮಾರ್ಕ್ಸ್ ತಮ್ಮ ಮರೆಯದೆ ಬಾಳನ್ನು ಆಮೂಲಾಗ್ರವಾಗಿ ಪರೀಕ್ಷೆ ಸಿದೆ. ಅದರ ಪದರಗಳನ್ನೆಲ್ಲ ಬಿಡಿಸಲು ಯತ್ನಿಸಿದರೂ ಆ ಪದರಗಳೆ ಲ್ಲವೂ ಬಾಳನ್ನು ನಡೆಸಲು ಹೊರಟಿರುವ ಮಾನವ ಜೀವಿಗಳಲ್ಲಿ ಕೇಂದ್ರೀ ಕೃತವಾಗಿವೆ ಎಂಬುದನ್ನು ಶ್ರುತಪಡಿಸುತ್ತದೆ. ಈ ಕಾರಣಗಳಿಂದ