ಪುಟ:ಕಮ್ಯೂನಿಸಂ.djvu/೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ವೈಜ್ಞಾನಿಕ ಸಮಾಜವಾದದ ಆಧಾರ ಮಾರ್ಕ್ಸ್ ತತ್ರ್ಯ ಕೇವಲ ವಿಜ್ಞಾನವಲ್ಲ, ಅರ್ಥಶಾಸ್ತ್ರವಲ್ಲ, ರಾಜ ಕೀಯ ಶಾಸ್ತ್ರವಲ್ಲ, ಮನಶ್ಯಾಸ್ತ್ರವಲ್ಲ, ಸಮಾಜ ಶಾಸ್ತ್ರವಲ್ಲ-ಅದು ಎಲ್ಲವೂ ಆಗಿದೆ. ಹೀಗಿರುವುದರಿಂದಲೇ ಮಾರ್ಕ್ಸ್ ತತ್ತ್ವವನ್ನು ತಿಳಿದುಕೊಳ್ಳು ವುದರಲ್ಲಿ ಸ್ವಲ್ಪ ಕ್ಲಿಷ್ಟತೆ ಕಂಡು ಬರುವುದು, ಎಲ್ಲ ಶಾಸ್ತ್ರಗಳನ್ನೂ ದೀರ್ಘ ವಾಗಿ ವ್ಯಾಸಂಗ ಮಾಡಿದರೆ ಸಾಲದು, ಪ್ರತಿಯೊಂದಕ್ಕೂ ಇರುವ ಪರಸ್ಪರ ನಿಕಟ ಸಂಬಂಧವನ್ನು ಬಾಳಿನ ಹಿನ್ನೆಲೆಯಲ್ಲಿ ತಿಳಿದುಕೊಳ್ಳಲು ಶಕ್ತಿ ಸಂಪಾದಿಸಿರಬೇಕು. ಇಲ್ಲದಿದ್ದರೆ ಶುಷ್ಕ ಪಾಂಡಿತ್ಯವಾಗುತ್ತದೆ. ಬಾಳಿನ, ಸಮಾಜದ, ಪ್ರಕೃತಿಯ ಒಟ್ಟಿನ ಸೊಗಸನ್ನು ಚಿತ್ರಿಸುವ ಉದ್ಯಮದಲ್ಲಿ ಮಾರ್ಕ್ಸ್- ಏಂಗೆಲ್ಸರು ನಿಸ್ಸಿಮರು, ಅವರ ತತ್ವ ಸಿದ್ದಾಂತ ತನ್ನ ಪ್ರತಿಯೊಂದು ಭಾಗದಲ್ಲೂ ಈ ಮೇಲ್ಕೆಯನ್ನು ಹೊರಸೂಸುತ್ತದೆ. ಮಾರ್ಕ್ಸ್ ಸಿದ್ಧಾಂತ ಇನ್ನೊಂದು ಲಕ್ಷಣವನ್ನು ವ್ಯಕ್ತಪಡಿಸುತ್ತದೆ, ಕೇವಲ ತಾತ್ವಿಕ ನಿರೂಪಣೆಯಾಗಿರದೆ ಕಾರ್ಯಾಚರಣೆಯ ಅಗತ್ಯವನ್ನು ಒತ್ತಿ ಹೇಳಿರುವ ತತ್ಯವಾಗಿದೆ. ಲೋಕವ್ಯವಹಾರವನ್ನು ತ್ಯಜಿಸಿ ಸತ್ಯಸಂಶೋ ಧನೆಯೇ ಗುರಿಯೆಂದು ತಿಳಿಸುವ ತತ್ರವಲ್ಲ, ಈ ಕಾರಣದಿಂದ ಮಾರ್ಕ್ಸ್ ವಾದ ಪ್ರಥಮವಾಗಿ ಶೋಷಣೆಗೆ ಒಳಗಾಗಿರುವವರ ಆಶೋತ್ತರಗಳನ್ನು ಪ್ರತಿಬಿಂಬಿಸುವ ತತ್ತ್ವ, ಶೋಷಣೆಯಿಂದ ಪಾರಾಗಲು ಯಾವ ಬಗೆಯ ಕಾರ್ಯಾಚರಣೆಯಿಂದ ಸಾಧ್ಯ ಎಂದು ಹೇಳುವ ತತ್ಯ, ಶೋಷಣೆ ಎಂದರೇನು, ಅದು ಯಾವ ರೀತಿಯಲ್ಲಿ ಆಗುತ್ತಿದೆ, ಶೋಷಣೆ ಆಗುವುದಕ್ಕೆ ಯಾರು ಯಾರು, ಯಾವ ಯಾವ ಶಕ್ತಿಗಳು ಸಹಾಯಕವಾಗಿ ನಿಂತಿವೆ, ಮಾಡುತ್ತಿರುವವರು ಯಾರು, ಇತ್ಯಾದಿಗಳನ್ನು ತಾತ್ವಿಕ ರೂಪದಲ್ಲಿ ವಿವರಿ ಸಿದೆ, ಪ್ರತಿಭಟನೆ, ಕಾರ್ಯಾಚರಣೆ ಇವುಗಳ ಮೂಲಕವೇ ಶೋಷಣೆಯಿಂದ ಪಾರಾಗಲು ಸಾಧ್ಯವೆಂದು ತಿಳಿಸುತ್ತದೆ. ಶೋಷಣೆಯಿಂದ ಜೀವನ ಮಾಡು ತಿರುವ ವರ್ಗದಮೇಲೆ ಶೋಷಿತವರ್ಗ ಸಂಘಟಿತರಾಗಿ ಚಳವಳಿ ಹೂಡ ಬೇಕೆಂದು ತಿಳಿಸುತ್ತದೆ. ಹೊಸ ಬಗೆಯ ಸಾಮಾಜಿಕ ಮತ್ತು ಆರ್ಥಿಕ ವ್ಯವ ಸೈಗೆ ಹೋರಾಟ ನಡೆಸಬೇಕೆಂದು ನಿರೂಪಿಸುತ್ತದೆ. ಆದುದರಿಂದ ಮಾರ್ಕ್ಸ್ ತತ್ರ್ಯ ಹೋರಾಟಕ್ಕೆ ಮುನ್ನುಡಿಯಾಗಿ ಮಾರ್ಗದರ್ಶಕವಾಗಿದೆ. ಸ್ಥಿತಿ ಗತಿಗಳು ಬದಲಾವಣೆಗೊಂಡಂತೆ, ಹೊಸ ಸನ್ನಿವೇಶಗಳು ಮೂಡಿದಂತೆ ಹೊಸಸಂದರ್ಭ ಸನ್ನಿವೇಶಗಳ ವಿವರಣೆಯೂ ವಿಮರ್ಶೆಯೂ ಅವಶ್ಯಕವೆಂದು