ಪುಟ:ಕಮ್ಯೂನಿಸಂ.djvu/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ವೈಜ್ಞಾನಿಕ ಸಮಾಜವಾದದ ಆಧಾರ

೪೫

ಇತಿಹಾಸದಲ್ಲಿ ಕಾಣುತ್ತಿರುವ ಚಲನೆಗೆ ಭಾವವೇ (Idea) ಕಾರಣವೆಂದು ಬಗೆದು, ಭಾವದಿಂದ ಚಲನೆ ಪ್ರೇರಿತವಾಗಿ ಚಲನೆ ಉಂಟಾಗುವುದೆಂದನು. ಕಡೆಗೆ ಭಾವ ಬ್ರಹ್ಮದಲ್ಲಿ (Absolute) ತನ್ನ ಪರಿಪೂರ್ಣತೆಯನ್ನು ಕಂಡು ಇತಿಹಾಸದ ಚಲನೆ ಮುಕ್ತಾಯಗೊಳ್ಳುತ್ತದೆಂದನು. ಈ ಭಾವ ಅಂದಿನ ಜರ್ಮನ್ ಸಮಾಜದಲ್ಲಿ ತನ್ನ ಪರಿಪೂರ್ಣತೆಯನ್ನು ಕಂಡಿರುವುದಾಗಿ ಭಾವಿಸಿದನು. ಅದರಂತೆ ತನ್ನ ಕಾಲದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳಲ್ಲಿ ಇನ್ನು ಬದಲಾವಣೆಗಳೇ ಇಲ್ಲ, ಅವುಗಳೇ ಪೂರ್ಣವಾದ, ಪರಿಪಕ್ವವಾದ, ದೈವನಿಯಾಮಕ ವ್ಯವಸ್ಥೆಗಳೆಂದು ಸಾರಿ ದನು. ಆದರೆ ಹೆಗೆಲ್ ತನ್ನ ತಾರ್ಕಿಕ ಕ್ರಮದಂತೆ ಪ್ರತಿಪಾದಿಸಿದ ಇತಿ ಹಾಸದ ಅನಂತ ಚಲನೆಗೂ ತಾನು ತೀರ್ಮಾನಕ್ಕೆ ಬಂದ ಅಚಲ ಸ್ಥಿತಿಗೂ ಪರಸ್ಪರ ವಿರೋಧವನ್ನು ಕಾಣದಾದನು. ಮಾರ್ಕ್ಸ್-ಏಂಗೆಲ್ಸರು ಈ ವಿರೋಧವನ್ನು ಸ್ಪಷ್ಟಪಡಿಸಿದರು; ಹೆಗೆಲ್ಲನ ಮಹತ್ಕಾಣಿಕೆಯಾದ ಇತಿ ಹಾಸ ದೃಷ್ಟಿಯನ್ನು ಭಾವಾತ್ಮಕ ಬಂಧನದಿಂದ ಬಿಡುಗಡೆಮಾಡಿದರು; ಭೌತಾತ್ಮಕ ಇತಿಹಾಸ ದೃಷ್ಟಿಯನ್ನು ಪ್ರತಿಪಾದಿಸಿದರು. (Materialist Conception of History:) ಈ ಕಾರಣದಿಂದ ವಾಸ್ತವಿಕ ಪ್ರಪಂಚ ನಶ್ವರವೂ, ಮಿಥ್ಯವೂ ಆಗುತ್ತದೆ. ಭಾವವೇ ನಿಜವಾದದ್ದು, ಸತ್ಯವಾದದ್ದು, ಸತ್ಯ ಸಂಶೋಧನೆ ಭಾವಚಿಂತನೆಯಾಗು ಇದೆ. ವಿಜ್ಞಾನದ ಬೆಳವಣಿಗೆ ಕುಂಠಿತವಾಗುತ್ತದೆ. ವಾಸ್ತವಿಕ ಪ್ರಪಂಚದಿಂದ ದೂರ ಸರಿದ ಪ್ರಾಜ್ಞ ಜೀವನ ಭಾವವಾದಕ್ಕೆ ಎಡೆಕೊಡುತ್ತದೆ. ಭಾವವಾದ ಪ್ರಧಾನವಾಗಿ ಎರಡು ರೂಪದಲ್ಲಿರುತ್ತದೆ. ಆಂತರಿಕ ಮತ್ತು ಬಾಹ್ಯ ಭಾವವಾದ. ಎರಡರಲ್ಲೂ ಭಾವವೇ ಚೈತನ್ಯವಾಗಿ ಬ್ರಹ್ಮ, ಪರಬ್ರಹ್ಮ, ದೇವರು ಇತ್ಯಾದಿ ಆಗುತ್ತದೆ, ಮತೀಯ ಭಾವನೆಗಳಿಗೆ ಸವಿಾಪಬಂಧು ಆಗುತ್ತದೆ. ಅಂತರಾತ್ಮನ ಅಥವಾ ಪರಬ್ರಹ್ಮನ ಚಿಂತನೆಯೇ ಮುಖ್ಯವಾಗಿರುವಾಗ ಸಮಾಜದ ಆಗುಹೋಗುಗಳು ಭಾವವಾದದಲ್ಲಿ ತೃಣೀಕರಿಸಲ್ಪಡುತ್ತವೆ, ವಸ್ತುವೇ ಮಿಥ್ಯವಾಗಿರುವಾಗ ಸಮಾಜದ ಆಗುಹೋಗುಗಳೂ ಮಿಥ್ಯವಾಗುತ್ತವೆ, ಭಾವ ವಾದಿಗಳು ಪ್ರಗತಿವಿರೋಧಿಗಳಾಗುತ್ತಾರೆ, (See : Materialism and Empiriocriticism : Lenin ; S. W. V. II. L. & W.)