ಪುಟ:ಕಮ್ಯೂನಿಸಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೦ ವೈಜ್ಞಾನಿಕ ಸಮಾಜವಾದ ತಲೆಹಾಕುತ್ತದೆ, ಈ ವಿರಸದಿಂದ ಪಾರಾಗಲಿಕ್ಕೆ ಮಾರ್ಗವೇ ಇಲ್ಲ. ಈ ವಿರಸ ಬಂಡವಾಳಶಾಹಿ ವ್ಯವಸ್ಥೆಗೆ ಗಂಟುಬಿದ್ದದ್ದು, ಸರಕುಗಳು ಹೇರಳವಾಗಿ ಬಿದ್ದಿರುವಾಗ ಕೊಳ್ಳುವ ಶಕ್ತಿಯನ್ನು ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವ ಲಾಭದಾಹವೇ ಹಿಂಗುವಂತೆ ಮಾಡುತ್ತದೆ. ನಿರುದ್ಯೋಗವೂ ಸಹ ಬಂಡವಾಳಶಾಹಿ ವ್ಯವಸ್ಥೆಗೆ ಗಂಟುಬಿದ್ದದ್ದು, ನಿರುದ್ಯೋಗಿಗಳ ತಂಡವಿಲ್ಲದೆ ಬಂಡವಾಳಶಾಹಿ ವ್ಯವಸ್ಥೆ ಒಂದು ನಿಮಿಷವೂ ಬದುಕಲಾರದು. ನಿರುದ್ಯೋಗಿಗಳ ತಂಡವೇ ಬಂಡವಾಳಶಾಹಿ ವ್ಯವಸ್ಥೆಗೆ ಜೀವದಾನ ಮಾಡುವುದು. ಲಾಭದ ಪ್ರಮಾಣ ಕಡಿಮೆಯಾಗದಂತೆಯೂ ಉತ್ಪಾದನೆ ನಿಲ್ಲದಂತೆಯೂ ಬಂಡವಾಳಶಾಹಿ ವ್ಯವಸ್ಥೆ ಮುಂದುವರಿಯಬೇಕು. ಶೋಷಣೆಯಾಗಬಲ್ಲ ದುಡಿಮೆಗಾರರನ್ನು ತಂಡೋಪತಂಡವಾಗಿ ಬಂಡ ವಾಳಗಾರನ ಉದ್ಯಮಕ್ಕೆ ಒದಗಿಸಿಕೊಡುವುದರ ಮೂಲಕ ನಿರುದ್ಯೋಗ ಬಂಡವಾಳಗಾರನ ಲಾಭದ ಪ್ರಮಾಣವನ್ನೂ ಉತ್ಪಾದನೆಯನ್ನೂ ಸಂರಕ್ಷಿ ಸುತ್ತದೆ. ಎರಡನೆಯದಾಗಿ, ನಿರುದ್ಯೋಗ ಕೊನೆಗೊಳ್ಳಲು ಸಾಧ್ಯವೂ ಇಲ್ಲ. ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದ ಆಗಾಗ್ಗೆ ವಿಸರ್ಜಿತ ವಾಗುವ ಹೆಚ್ಚಿಗೇ ದುಡಿಮೆಗಾರರು ನಿರುದ್ಯೋಗಿಗಳಾಗುತ್ತಲೇ ಇರುತ್ತಾರೆ. ಹೀಗಾಗಿ, ಬಂಡವಾಳಶಾಹಿ ಉದ್ಯಮದ ಜೊತೆ ಜೊತೆಯಲ್ಲಿ ನಿರುದ್ಯೋಗ ಬೆಳೆಯುತ್ತಿರುತ್ತದೆ. ಸುಖಶಾಂತಿಗಳನ್ನು ಕಲ್ಪಿಸಲು ಆಗಮಿಸಿದ ಬಂಡವಾಳ ಶಾಹಿ ವ್ಯವಸ್ಥೆಯ ಮಹಾ ವರಪ್ರಸಾದಗಳೆಂದರೆ-ನಿರುದ್ಯೋಗ, ಆರ್ಥಿಕ ದುಃಸ್ಥಿತಿ ಮತ್ತು ಶೋಷಣೆ ! “ಇಷ್ಟೇ ಅಲ್ಲ. ಲಾಭದಾಹ ಉತ್ಪಾದನೆಯಲ್ಲಿ ಪೈಪೋಟಿಯನ್ನು ತರು ಇದೆ. ಪ್ರತಿಯೊಬ್ಬನೂ ಸ್ವತಂತ್ರನು; ಹಾಕಿದ ಬಂಡವಾಳಕ್ಕೆ ಬರುವ ಲಾಭ ಆತನದು, ಎಲ್ಲ ಉದ್ಯಮಗಾರರೂ ಮಾರುಕಟ್ಟೆಯ ಬೆಲೆಯನ್ನು ಅನುಸರಿಸಿ ಉತ್ಪಾದನೆಯಲ್ಲಿ ನಿರತರಾಗುವರು. ಆದುದರಿಂದ ಯಾವನು ಎಲ್ಲಿ ಎಷ್ಟು ಪ್ರಮಾಣದಲ್ಲಿ ಯಾವ ಸರಕನ್ನು ತಯಾರಿಸಿದ್ದಾನೆಂಬುದು ಯಾರಿಗೂ ತಿಳಿಯದ ವಿಷಯ. ಕಣ್ಣು ಮುಚ್ಚಾಲೆ ಆಟದಂತಿರುತ್ತದೆ ಉತ್ಪಾದನೆ. ಯಾರು ಶೀಘ್ರವಾಗಿ, ಸುಲಭದರದಲ್ಲಿ, ಸರಕುಗಳನ್ನು ತಯಾರಿಸಿ ಮಾರು ಕಟ್ಟೆಗೆ ಕಳುಹಿಸಬಲ್ಲರೋ ಅವರೇ ಗೆಲ್ಲುವವರು, ಉಳಿದವರೆಲ್ಲರೂ ವಳು ಗಿದ ಹಾಗೆಯೇ. ಹೀಗಾಗಿ ಅನೇಕವೇಳೆ ಕೊಳ್ಳುವವರು ಇಲ್ಲದಿದ್ದರೂ ಹೆಚ್ಚು