ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ ೭೧ ಉತ್ಪಾದನೆ ನಡೆದು ಉತ್ಪನ್ನವಾದ ಸರಕುಗಳು ಮಾರಾಟವಾಗದೇ ನಿಂತುಹೋಗುತ್ತವೆ. ಈ ಉತ್ಪಾದನೆಯ ವೈಪರೀತ್ಯ ಬಂಡವಾಳ ಆರ್ಥಿಕವ್ಯವಸ್ಥೆಯಲ್ಲಿ ಆರ್ಥಿಕ ಉಬ್ಬರವಿಳಿತಗಳ (Booms and Depressions) ರೂಪವನ್ನು ತಾಳುತ್ತದೆ. ಆರ್ಥಿಕ ಉಬ್ಬರದ ಕಾಲದಲ್ಲಿ ಹೆಚ್ಚು ಉತ್ಪಾದನೆ, ಹೆಚ್ಚಿಗೆ ಬೆಲೆ, ಹೆಚ್ಚಿಗೆ ಕೂಲಿ, ಹೆಚ್ಚಿನ ಉದ್ಯೋಗ, ಮಾರುಕಟ್ಟೆ ಮತ್ತು ವ್ಯಾಪಾರ ನಡೆಯುತ್ತದೆ. ಕ್ರಮೇಣ ಒಂದೊಂದಾಗಿ ನಶಿಸಿ, ಕೊನೆಗೆ ಆರ್ಥಿಕ ವ್ಯವಹಾರವೇ ನಿಂತುಹೋಗುತ್ತದೆ. ಹಾಹಾಕಾರ, ನಿರುದ್ಯೋಗ, ಪಾಪರ್ ಆಗುವುದು, ಉದ್ಯಮಗಳು ನಷ್ಟ ಹೊಂದಿ ಮುಚ್ಚು ವುದು ನಿತ್ಯದೃಶ್ಯವಾಗುತ್ತದೆ. ಬಂಡವಾಳಶಾಹಿ ವ್ಯವಸ್ಥೆ ತನ್ನ ಗರ್ಭದಲ್ಲಿ ಅಡಗಿದ್ದ ವಿರಸವನ್ನು ಹೊರಸೂಸುತ್ತದೆ. ಬಂಡವಾಳಶಾಹಿ ವ್ಯವಸ್ಥೆ ತಾನು ಜನ್ಮವಿತ್ತಿರುವ ನಿರುದ್ಯೋಗ, ಆರ್ಥಿಕ ದುಃಸ್ಥಿತಿ ಮತ್ತು ಆರ್ಥಿಕ ವೈಪರೀತ್ಯಗಳಿಂದ ಪಾರಾಗಲು ಹವಣಿಸುತ್ತದೆ, ಹೇರಳವಾಗಿ ಉತ್ಪನ್ನವಾಗುತ್ತಿರುವ ಸರಕುಗಳಿಗೆ ಒಳದೇಶದ ಮಾರುಕಟ್ಟೆ ಗಳಲ್ಲಿ ಗಿರಾಕಿಗಳು ಇಲ್ಲವಾದರೆ ವಿದೇಶೀ ಮಾರುಕಟ್ಟೆಯಲ್ಲಿ ಸರಕು ಗಳನ್ನು ವಿಕ್ರಯಿಸಲು ಯತ್ನಿಸುತ್ತದೆ, ಆದರೆ ವಿದೇಶದ ಬಂಡವಾಳಗಾರರು ಬಹುಕಾಲ ಸುಮ್ಮನಿರಲು ಸಾಧ್ಯವಿಲ್ಲ, ಅವರುಗಳು ಲಾಭಕ್ಕೆ ಒದಗಿರುವ ಚ್ಯುತಿಯಿಂದ ಪಾರಾಗಲು ಯತ್ನಿಸುತ್ತಾರೆ. ಇದಕ್ಕೆ ಪರಿಹಾರಾರ್ಥವಾಗಿ ಆರ್ಥಿಕ ಪೈಪೋಟ ಹುಟ್ಟುತ್ತದೆ. ಯಾವ ಬಂಡವಾಳಶಾಹಿ ರಾಷ್ಟ್ರ ಅತಿ ಸುಲಭವಾಗಿ ಕಡಿಮೆ ದರದಲ್ಲಿ ಮಾಲನ್ನು ವಿಕ್ರಯಿಸಲು ಸಿದ್ಧವಿರುವುದೋ ಅದಕ್ಕೆ ಸ್ಥಳ, ಪ್ರಬಲ ಬಂಡವಾಳಶಾಹಿ ರಾಷ್ಟಬಲಹೀನ ಬಂಡವಾಳಸ್ತ ದೇಶಗಳನ್ನು ಆರ್ಥಿಕ ಪೈಪೋಟಿಯಿಂದ ಹೊರಗೆ ನೂಕಿ ಸ್ಥಳವನ್ನು ಆಕ್ರಮಿಸುತ್ತದೆ ಆರ್ಥಿಕವಾಗಿ ಹಿಂದುಳಿದ ದೇಶಗಳನ್ನು ತನ್ನ ವಸಾಹತು ಅಥವ ಮಾರುಕಟ್ಟೆಯಾಗಿ ನಿರ್ಮಿಸಿಕೊಳ್ಳಲು ಹವಣಿಸುತ್ತದೆ, ಮಿಕ್ಕ ಬಂಡವಾಳಶಾಹಿ ರಾಷ್ಟ್ರಗಳಿಗೆ ವಸಾಹತು ಮತ್ತು ಮಾರುಕಟ್ಟೆಗಳು ಇಲ್ಲವಾಗುವುದು. ವಸಾಹತು ಮತ್ತು ಮಾರುಕಟ್ಟೆ ಗಳಿಗಾಗಿ ದಾಹ ಬಿಕ್ಕಟ್ಟನ್ನು ತರುತ್ತದೆ. ಬಂಡವಾಳಶಾಹಿ ರಾಷ್ಟ್ರಗಳಲ್ಲೇ ಯುದ್ಧ ಅನಿವಾರ್ಯವಾಗುತ್ತದೆ.