ಪುಟ:ಕಮ್ಯೂನಿಸಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಜ್ಞಾನಿಕ ಸಮಾಜವಾದ ಎರಡನೆಯದಾಗಿ, ಪೈಪೋಟಿಯು ತಂದೊಡ್ಡಿರುವ ವೈಪರೀತ್ಯವನ್ನು ತಡೆಗಟ್ಟಲು, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸುಗಮವನ್ನು ತರಲು, ಟ್ರಸ್ಟ್ ಕಂಬೈನ್ಸ್ ಒಪ್ಪಂದಗಳು, ರಚಿತವಾಗುತ್ತವೆ. ಇವುಗಳ ಉದ್ದೇಶ ವೆಂದರೆ ಲಾಭಕ್ಕೆ ಧಕ್ಕೆ ಬರದಹಾಗೆ ಅನುಚಿತ ಪೈಪೋಟಿ ಇಲ್ಲದಂತೆ ಮಾಡು ವುದು ಮತ್ತು ಪ್ರತಿಯೊಬ್ಬ ಬಂಡವಾಳಗಾರನಿಗೂ ಕನಿಷ್ಠ ಲಾಭ ದೊರಕುವ ಹಾಗೆ ನಿಯಮಿತ ಬೆಲೆಯನ್ನು ಗೊತ್ತುಪಡಿಸುವುದು. ಇದರ ಅಂಗವಾಗಿ ಅನೇಕ ಬಂಡವಾಳ ಉದ್ಯಮಗಳ ಮೇಲು ಉಸ್ತುವಾರಿ ನೋಡಿ ಕೊಳ್ಳುವ ಒಕ್ಕೂಟಗಳ (Combines) ರಚನೆಹೊಂದಿ, ಬಂಡ ವಾಳು ಉದ್ಯಮಗಳು ಉತ್ಪಾದನೆ ಮಾಡುವ ಸರಕುಗಳ ಪ್ರಮಾಣ, ಬೆಲೆ ಮತ್ತು ಲಾಭವನ್ನು ನಿರ್ಧರಿಸುತ್ತವೆ. ಇಷ್ಟು ಸಾಲದೇ ಸಾಧ್ಯವಿದ್ದೆಡೆ ಗಳೆಲ್ಲೆಲ್ಲಾ ಪ್ರತಿ ಬಂಡವಾಳಶಾಹಿ ರಾಷ್ಟ್ರ ಭದ್ರತಾ ಕ್ರಮಗಳನ್ನು ಜಾರಿಗೆ ತರುತ್ತದೆ. ಒಂದು ಬಂಡವಾಳಶಾಹಿ ರಾಷ್ಟ್ರಕ್ಕೆ ಸೇರಿರುವ ಮಾರುಕಟ್ಟೆಯಲ್ಲಿ ಇತರ ಬಂಡವಾಳಶಾಹಿ ರಾಷ್ಟ್ರಗಳು ಪ್ರವೇಶಿಸಿ ಧಾಂದಲೆ ಮಾಡದಹಾಗೆ ನಿಗದಿಯಾದ ಪ್ರಮಾಣದಲ್ಲಿ ಇತರರು ಮಾರುವಂತೆಯೂ (quota), ಹಲವು ವಸ್ತುಗಳನ್ನು ಇತರರು ಆ ಮಾರುಕಟ್ಟೆಯಲ್ಲಿ ಮಾರದಂತೆಯೂ (protection), ಹಲವು ಪದಾರ್ಥಗಳ ವ್ಯಾಪಾರದಲ್ಲಿ ವಸಾಹತಿನ ಯಜಮಾನ ರಾಷ್ಟ್ರಕ್ಕೆ ಮಾತ್ರ ರಹದಾರಿ ಇರುವಂತೆಯೂ (preference)ವಿಧಿಸಲಾಗು ತದೆ. ಒಟ್ಟಿನ ಪರಿಣಾಮವೆಂದರೆ ಬಂಡವಾಳಶಾಹಿವ್ಯವಸ್ಥೆ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ನಿರೂಪಿಸಿರುವಂತೆ ಸುಗಮ ವ್ಯವಸ್ಥೆಯಾಗಿರದೆ ವಿರಸಗಳ ತೌರುಮನೆಯಾಗುತ್ತದೆ, ಬಂಡವಾಳ ಅರ್ಥಿಕವ್ಯವಸ್ಥೆಯಲ್ಲಿ ವಿರಸಗಳು ಮೂಡಲು ಕಾರಣ ಈಗ ಬಯಲಾಗಿದೆ. ನಾಯಿ ತನ್ನ ಬಾಲವನ್ನೇ ಬೇಟೆಯಾಡಿದಂತೆ ಬಂಡ ವಾಳ ಆರ್ಥಿಕವ್ಯವಸ್ಥೆ ವಿರಸಗಳಿಂದ ಪಾರಾಗಲು ಅಶಕ್ತವಾಗಿದೆ, ಸಾಲುಸಾಲಾಗಿ ಸಂಭವಿಸುತ್ತಿರುವ ಆರ್ಥಿಕ ಅವ್ಯವಸ್ಥೆ, ನಿರುದ್ಯೋಗ, ಮತ್ತು ಆರ್ಥಿಕಮುಗ್ಗಟ್ಟು ಜನಸಮುದಾಯಕ್ಕೆ ಬಂಡವಾಳಶಾಹಿ ವ್ಯವ ಸ್ಥೆಯು ನೀಡಿರುವ ವರಪ್ರಸಾದಗಳಾಗಿವೆ. ಇವುಗಳನ್ನು ತೊಡೆಯಲು ಬಂಡವಾಳ ಆರ್ಥಿಕವ್ಯವಸ್ಥೆಯಿಂದ ಸಾಧ್ಯವೇ ಇಲ್ಲ. ಈ ವ್ಯವಸ್ಥೆಯ ಬೆನ್ನಿಗೇ ಅಂಟಿದ ಬೇತಾಳನಂತೆ ಅವು ಜನಸಮುದಾಯವನ್ನು ಕಾಡು ಇವೆ. ಈ ವೈಪರೀತ್ಯಗಳಿಗೂ, ವಿರಸಗಳಿಗೂ ಬಂಡವಾಳಶಾಹಿ ವ್ಯವಸ್ಥೆಯ