ಪುಟ:ಕಮ್ಯೂನಿಸಂ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಜ್ಞಾನಿಕ ಸಮಾಜವಾದ ಈ ಪ್ರಶ್ನೆಯೇ ಆಧುನಿಕ ಸಮಾಜವಾದದ ಮೂಲವಾಗಿದೆ, ಉತ್ಪಾ ದನಾ ಸಾಧನಗಳನ್ನು ಖಾಸಗಿಯಾಗಿ ಹೊಂದಿ ಲಾಭವನ್ನು ಅಪಹರಣ ಮಾಡುತ್ತಿರುವ ಬಂಡವಾಳವರ್ಗದಮೇಲೆ ಹೋರಾಟ ಉಂಟಾಗಿದೆ. ಸಾಮೂಹಿಕ ದುಡಿಮೆಯಿಂದ ಆಗುತ್ತಿರುವ ಉತ್ಪಾದನೆಯ ಫಲವೂ ಸಹ ಕಾರ್ಮಿಕರಿಗೆ ಸೇರಬೇಕೆಂಬ ಚಳವಳಿ ಹುಟ್ಟಿದೆ. ಉತ್ಪಾದನಾ ಸಾಧನಗಳ ಮೇಲಿರುವ ಖಾಸಗೀ ಸ್ವಾಮ್ಯವನ್ನು ನಾಶಪಡಿಸಿದ ಹೊರತೂ ಕಾರ್ಮಿಕ ವರ್ಗದ ವಿಮೋಚನೆ ಅಸಾಧ್ಯವೆಂಬ ಅರಿವೂ ಉಂಟಾಗಿದೆ. ಒಂದು ಮಾತಿನಲ್ಲಿ ಹೇಳುವುದಾದರೆ ಅಪಹರಣವನ್ನೂ, ಶೋಷಣೆ ಯನ್ನೂ ನಾಶಮಾಡುವುದೇ ಚಳವಳಿಯ ಉದ್ದೇಶವಾಗಿದೆ. ಸಮಾಜವಾದ ಈ ಚಳವಳಿಯ ಪ್ರತಿಬಿಂಬವಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಜನ್ಮಕೊಟ್ಟ ಶಕ್ತಿಯೇ-ಕಾರ್ಮಿಕವರ್ಗ-ಬಂಡವಾಳಶಾಹಿ ವ್ಯವಸ್ಥೆ ಯನ್ನು ಚ್ಯುತಿಗೊಳಿಸಲು ಹೊರಟಿದೆ. ಮಾರ್ಕ್ಸ್-ಏಂಗೆಲ್ಪರ ವೈಜ್ಞಾನಿಕ ಸಮಾಜವಾದ ತತ್ರ್ಯ ಇವೇ ಆಗಿದೆ. ಮಾರ್ಕ್ಸ್-ಎಂಗೆಲ್ಲರು ಬಂಡವಾಳಶಾಹಿ ವ್ಯವಸ್ಥೆಯ ಚಲನೆವಲನೆ ಗಳನ್ನು ಪರೀಕ್ಷಿಸುವುದರ ಮೂಲಕ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ಕರಣವನ್ನು ಆಗಲೆ: ಬಂಡವಾಳ ಶಾಹಿ ವ್ಯವಸ್ಥೆಯು ತಂದಿದೆ ಮತ್ತು ಪ್ರತಿನಿತ್ಯ ತರುತ್ತಿದೆ, ಸಮಾಜವಾದಿಗಳು ಉತ್ಪಾದನಾ ಸಾಧನಗಳನ್ನು ಸಮಾಜೀಕರಣ ಮಾಡ ಬೇಕೆನ್ನುವುದರ ಅಥ ಇಷ್ಟೇ ಆಗಿದೆ. ಉತ್ಪಾದನ ಸಾಧನಗಳ ಮೇಲಿರುವ ಖಾಸಗಿ ಸ್ವಾಮ್ಯವನ್ನು ನಾಶಪಡಿಸುವುದಾಗಿದೆ, ಸಮಾಜೀಕರಣವಾಗಿರುವ ಮತ್ತು ಆಗುತ್ತಿರುವ ಉತ್ಪಾದನೆಯನ್ನು ಸಾಮೂಹಿಕ ಅಥವ ಸಮಾಜದ ಸ್ವಾಮ್ಯಕ್ಕೆ ಒಳಪಡಿಸುವುದಾಗಿದೆ, ಮತ್ತು ಉತ್ಪಾದನೆಯಲ್ಲಿ ಬಂಡವಾಳ ಉತ್ಪಾದನಾ ಕ್ರಮ ತಂದಿರುವ ವ್ಯಯವನ್ನು ನಾಶಪಡಿಸುವುದಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಬೆಳೆದು ಬಂದ ಜಾಗೆಲ್ಲಾ ಕೈಗಾರಿಕಾ ರಂಗದಲ್ಲಿ ಮತ್ತು ಬೇಸಾಯ ರಂಗದಲ್ಲಿ ಸಾಮೂಹಿಕ ಉತ್ಪಾದನೆಯನ್ನು ತಂದಿದೆ. ಲಾಭ ದಾಹ ಹೆಚ್ಚು ಹೆಚ್ಚು ಸಾಮೂಹಿಕ ಉತ್ಪಾದನೆಗೂ ತಾಂತ್ರಿಕ ಅಂದೋಳನಕ್ಕೂ ಎಡೆಕೊಟ್ಟಿದೆ. ಹಾಗೆಯೇ ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವ ದ್ವಯ ಶೋಷಣೆ ಯನ್ನು ಅಧಿಕಗೊಳಿಸಿದೆ, ಆದರೆ ಪ್ರತಿ ದೇಶದಲ್ಲೂ ಈ ಬಂಡವಾಳ ಉತ್ಪಾದನಾ ಕ್ರಮ ತಂದಿರುವ ಬದಲಾವಣೆಗಳನ್ನು ಒಟ್ಟಿನಲ್ಲೂ ಮತ್ತು ಪ್ರತ್ಯೇಕವಾಗಿಯೂ ಏಮರ್ಶಿಸಬೇಕು.