ಪುಟ:ಕಮ್ಯೂನಿಸಂ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ೨ ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ - ೮೫ (Industrial Protetariat) ಅಷ್ಟು ಬೆಳದಿರಲಿಲ್ಲ. ಮೇಲಾಗಿ, ನಿರಂಕುಶಪ್ರಭುತ್ವ ತಾಂಡವವಾಡುತ್ತಿತ್ತು. ಶೋಷಿತವರ್ಗದ ಜೊತೆಗೆ ಸ್ವಾಮ್ಯವರ್ಗವೂ ಸಹ ದಬ್ಬಾಳಿಕೆಯನ್ನು ಅನುಭವಿಸುತ್ತಲಿತ್ತು. ಆದುದ ರಿಂದ ಶೋಷಿತವರ್ಗದ ಚಳವಳಿಗಳು ಸ್ವಾಮ್ಯ ವರ್ಗದೊಡಗೂಡಿ ನಿರಂಕುಶ ಪ್ರಭುತ್ವದ ನಿರ್ನಾಮಕ್ಕೆ ಮೊದಲು ಶ್ರಮಿಸಬೇಕಾಗಿತ್ತು. ಆದರೂ ಸಹ, ಕಾರ್ಮಿಕರ ಚಳವಳಿ ಸ್ವಾಮ್ಯವರ್ಗದೊಡಗೂಡಿ ಬಹಳಕಾಲ ಮುಂದು ವರಿಯಲು ಸಾಧ್ಯವಿರಲಿಲ್ಲ. ಪ್ರಜಾಪ್ರಭುತ್ವದ ಬೇಡಿಕೆಯ ಜೊತೆಗೆ ಆರ್ಥಿಕ ಸಮಾನತೆಯ ಪ್ರಶ್ನೆಯನ್ನೂ ಸಹ ಶೋಷಿತವರ್ಗ ಮುಂದಿಟ್ಟಿದ್ದು ಸ್ವಾಮ್ಯವರ್ಗ ಬೆದರಿ ಅಡ್ಡದಾರಿ ಹಿಡಿಯುವಂತೆ ಆಯಿತು. ನಿರಂಕುಶ ಪ್ರಭುತ್ವದ ನಾಶಕ್ಕಿಂತ ಮಿಗಿಲಾಗಿ ಶೋಷಿತವರ್ಗದ ಚಳವಳಿಯನ್ನು ತಡೆಗಟ್ಟುವುದೇ ಸ್ವಾಮ್ಯ ವರ್ಗದ ಪ್ರಥಮ ಕರ್ತವ್ಯವಾಯಿತು. ಇದಕ್ಕಾಗಿ ನಿರಂಕುಶಪ್ರಭುತ್ವದ ಜೊತೆಯಲ್ಲಿ ಸ್ವಾಮ್ಯ ವರ್ಗ ರಾಜಿಮಾಡಿಕೊಂಡಿತು. ಶೋಷಿತವರ್ಗದ ಚಳವಳಿಯನ್ನು ತುಳಿಯಲು ಪ್ರಜಾಪ್ರಭುತ್ವದ ಬೇಡಿ ಕೆಗೂ ಸಹ ಸ್ವಾಮ್ಯ ವರ್ಗ ತಿಲಾಂಜಲಿ ಇತ್ತಿತು, ಸಾಂಕುಶ ಪ್ರಭುತ್ವದ ಸ್ಥಾಪನೆಯ ಹೋರಾಟಕ್ಕೂ ಸಹ ಸ್ವಾಮ್ಯ ವರ್ಗ ಹಿಂದುಮುಂದು ನೋಡಿತು. ಬಂಡವಾಳ ಆರ್ಥಿಕ ವ್ಯವಸ್ಥೆ ವಿನಾಶಕ್ಕಾಗಿ ಪ್ರಾನ್ಸ್ ಮತ್ತು ಹಲವು ದೇಶಗಳಲ್ಲಿ ನಡೆಸಿದ ಕಾರ್ಮಿಕರ ಚಳವಳಿ ಮತ್ತು ಕ್ರಾಂತಿಗಳು ವಿಫಲವಾದರೂ ಈ ಚಳವಳಿ ಮತ್ತು ಕ್ರಾಂತಿಗಳಿಂದ ಶೋಷಿತವರ್ಗ ಅನೇಕ ಪಾಠಗಳನ್ನು ಕಲಿಯಿತು. ಈ ಚಳವಳಿ ಮತ್ತು ಕ್ರಾಂತಿಗಳನ್ನು ಮಾರ್ಕ್ಸ್-ಏಂಗೆಲ್ಸರು ವಿಮರ್ಶೆಗೆ ಒಳಪಡಿಸಿದರು. ಈ ವಿಮರ್ಶೆಯ ಆಧಾರದಮೇಲೆ ಕ್ರಾಂತಿಯನ್ನು ನಡೆಸುವುದರ ಬಗ್ಗೆ, ಕ್ರಾಂತಿಯ ಕಾಲದಲ್ಲಿ ಶೋಷಿತವರ್ಗ, ಅದರಲ್ಲೂ ಮುಖ್ಯವಾಗಿ ಕಾರ್ಮಿಕವರ್ಗ, ಮಾಡಬಹು ದಾದ ತಪ್ಪುಗಳ ಬಗ್ಗೆ, ಸ್ವಾಮ್ಯವರ್ಗದ ವರ್ತನೆಯ ಬಗ್ಗೆ, ಅಂತಹ ಕಾಲಗಳಲ್ಲಿ ಕಾರ್ಮಿಕವರ್ಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಮೂಲ್ಯ ಸಲಹೆಗಳನ್ನೂ ಮತ್ತು ಕಾರ್ಮಿಕವರ್ಗದ ಕರ್ತವ್ಯಗಳ ಬಗ್ಗೆ ಎಚ್ಚರಿಕೆ ಯನ್ನೂ ಮಾರ್ಕ್ಸ್-ಏಂಗೆಲ್ಸ ಕೊಟ್ಟಿದ್ದಾರೆ. ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯದ ನಾಶ ಮತ್ತು ತತ್ಪರಿಣಾಮವಾಗಿ ಶೋಷಣೆಯಿಂದ