ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೬ ವೈಜ್ಞಾನಿಕ ಸಮಾಜವಾದ ಕಾರ್ಮಿಕವರ್ಗದ ವಿಮೋಚನೆ ಕಾರ್ಮಿಕವರ್ಗದಿಂದ ಮಾತ್ರ ಸಾಧ್ಯ ಎಂಬುದನ್ನು ಈಗ ನಡೆದಿರುವ ಕ್ರಾಂತಿಗಳು ಶೃ ತಪಡಿಸಿವೆ ಎಂದು ತಿಳಿಸಿ ದರು, ಎಲ್ಲ ವರ್ಗಗಳಿಗಿಂತಲೂ ಅತಿ ಕ್ರಾಂತಿಕಾರಕ ವರ್ಗವೆಂದರೆ ಕಾರ್ಮಿಕವರ್ಗವೆಂದೂ, ಮಿಕ್ಕ ವರ್ಗಗಳೆಲ್ಲವೂ ಪ್ರತಿಗಾಮಿವರ್ಗಗಳಾ ಗುವುವೆಂದೂ, ಆರ್ಥಿಕ ಪ್ರಶ್ನೆ ಬಂದಾಗ ಕಾರ್ಮಿಕವರ್ಗ ಮಾತ್ರ ಬಂಡ ವಾಳಶಾಹಿ ವ್ಯವಸ್ಥೆಯ ನಿರ್ಮೂಲಕ್ಕೂ ಮತ್ತು ಸ್ವಾಮ್ಯದ ಚ್ಯುತಿಗೂ ದೃಢವಾಗಿ ನಿಲ್ಲುತ್ತದೆಂದೂ ತಿಳಿಸಿದರು.

  • ಎರಡನೆಯದಾಗಿ, ಸ್ವಾಮ್ಯದ ಚ್ಯುತಿಗಾಗಿ ಕ್ರಾಂತಿಯನ್ನು ಆರಂಭಿ ಸಿರುವಾಗ ಮೊದಲಿನಲ್ಲಿ ಲಭಿಸುವ ಜಯದಲ್ಲೇ ಕಾರ್ಮಿಕವರ್ಗ ತೃಪ್ತ ರಾಗಕೂಡದು; ಕಾರ್ಮಿಕವರ್ಗ ಗಳಿಸುವ ವಿಜಯವನ್ನು ಪೂರ್ಣ ಗೊಳಿಸಲೂ, ಕ್ರಾಂತಿಯ ಫಲಗಳನ್ನು ಭದ್ರಪಡಿಸಲೂ, ಸ್ವಾಮ್ಯ ವರ್ಗ ದವರಿಂದ ಬರುವ ಪ್ರತಿಭಟನೆಯನ್ನು ದಮನಮಾಡಲೂ “ಕಾರ್ಮಿಕವರ್ಗದ ಏಕೈಕ ಪ್ರಭುತ್ವ” (Dictatorship of the roletariat) ಅತ್ಯ ಗತ್ಯವೆಂದರು. ಪ್ರಥಮದಲ್ಲಿ ಲಭಿಸುವ ವಿಜಯದಿಂದಲೇ ಎಲ್ಲವೂ ಸರಿ ಹೋಗುವುದೆಂದು ಆಶಿಸಿ ಕಾರ್ಮಿಕವರ್ಗ ಸುಮ್ಮನಾಗುವುದು ಉಗ್ರವಾದ ತಪ್ಪಾಗುತ್ತದೆಂದರು. ಏಕೆಂದರೆ, ಸ್ವಾಮ್ಯವರ್ಗ ಸಮಯಕಾದು ಮತ್ತೆ ತಿರುಗಿ ಬೀಳುತ್ತದೆ. ಕಾರ್ಮಿಕವರ್ಗ ಸಿದ್ಧರಿಲ್ಲದಿದ್ದರೆ ಕ್ರಾಂತಿಯನ್ನು ಸ್ವಾಮ್ಯವರ್ಗ ದಮನಮಾಡುತ್ತದೆ, ಮತ್ತು ಸ್ವಾಮ್ಯವರ್ಗ ತನ್ನ ಪ್ರಭುತ್ವ ವನ್ನು ಮತ್ತೆ ಘೋಷಿಸುತ್ತದೆ. ಹೀಗಾಗಿ, ಕಾರ್ಮಿಕವರ್ಗಕ್ಕೆ ದಾಸ್ಯವೂ ಶೋಷಣೆಯೂ ಪುನಃ ಪ್ರಾಪ್ತಿಯಾಗುತ್ತದೆ.

ಮೂರನೆಯದಾಗಿ, ಕಾರ್ಮಿಕವರ್ಗದ ಏಕೈಕ ಪ್ರಭುತ್ವದ ಕಾಲದಲ್ಲಿ ರಾಜ್ಯಶಕ್ತಿಯ (The State) ಉಪಯೋಗ ಅತ್ಯಗತ್ಯ ಎಂದರು. ಏಕೆಂದರೆ, ಸ್ವಾಮ್ಯ ವರ್ಗದ ಅಧಿಕಾರದ ಅವಧಿಯಲ್ಲಿ ಶೋಷಿತವರ್ಗ ಸ್ವಾಮ್ಯ ವ್ಯವಸ್ಥೆಯನ್ನು ಪ್ರಶ್ನಿಸದ ಹಾಗೂ ಮೂಲೋತ್ಪಾಟನೆ ಮಾಡದ ಹಾಗೂ ರಾಜ್ಯ ಶಕ್ತಿಯು ಉಪಯೋಗಿಸಲ್ಪಟ್ಟಿದೆ; ಆದುದರಿಂದ ಈಗ ಸಮಾಜವಾದೀ ವ್ಯವಸ್ಥೆಯ ಸ್ಥಾಪನೆಯ ಕಾಲದಲ್ಲಿ ಆರ್ಥಿಕ ಬದಲಾವಣೆ ಗಳನ್ನು ತರುವುದಕ್ಕೂ, ಸ್ವಾಮ್ಯವರ್ಗವನ್ನು ಮುಟ್ಟುಗೋಲು ಹಾಕ ಲಿಕ್ಕೂ, ಬರುವ ಪ್ರತಿಭಟನೆಯನ್ನು ದಮನಮಾಡಲಿಕ್ಕೂ ರಾಜ್ಯ ಶಕ್ತಿಯನ್ನು ಕಾರ್ಮಿಕವರ್ಗ ಪಪಯೋಗಿಸಿಕೊಳ್ಳುವುದು ಅಗತ್ಯವಾಗಿದೆಯೆಂದರು,