ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನಕ್ಕೆ ಹಿಂದೆ] ವಾಗ್ವಲ್ಲಕೀವೈಣಿಕ 17

ಬಿದ್ದ ನಾಲಿಗೆಗೆ

ಪಲಕಾಲದ ಪುಣಿಸೆಯ | ಣ್ಣ ಲೇಹ್ಯಮಂ ಮಾಡೆ ಸನ್ನಿ ಪಾತಜ್ವರದಿಂ |

ಸಲೆ ಪೊರಳದಿರ್ದ ನಾಲಗೆ | ಗೆ ಲೇಸನೀಗುಂ ಜ್ವರಂಗಳಂ ಪಿಂಗಿಸುಗುಂ ||

ಪಿತ್ತಾತಿಸಾರಕ್ಕೆ

ಪರಿವತಿಸಾರಂ ಪಿರಿದಾ | ಗಿರೆ ಹೂಲಿಯಬೇರ ತಿಗುಡನೆರ್ಮ್ಮೆಯಮೊಸರೊಳ್ |

ಬೆರಸಿಟ್ಟು ಸೈಂಧವಂ ಕೂ | ಡಿರೆ ಮೆಲ್ವುದು ದಿವ್ಯಯೋಗಮಿದು ಪರಿಹರಿಕುಂ||

ರಕ್ತಪಿತ್ತಕ್ಕೆ

ಬರಸುವುದುವ ಘೃತಮಂ ಶ | ರ್ಕರೆಯಂ ನೆಲ್ಲಿಯುಮನಮರ್ದುವಳ್ಳಿಯ

ಪುಡಿಯಂ |

ಪಿರಿದೆನಿಪ ರಕ್ತಪಿತ್ತದ | ಭರಮಂ ಪರಿಹರಿಕುಮುಗಿದ ತಾಮಳಕಂ ||


                ವಾಗ್ವಲ್ಲ ಕೀವೈಣಿಕ. ಸು. 1150 

ಈತನು ಚಂದ್ರಪ್ರಭಸ್ತುತಿಯನ್ನು ಬರೆದಿದ್ದಾನೆ. ಇವನು ಜೈನ

ಕವಿ, ತನ್ನ ಹೆಸರನ್ನು ಹೇಳಿಕೊಂಡಿಲ್ಲ, ಈ ಬಿರುದನ್ನು ಮಾತ್ರ ಹೇಳಿ

ದ್ದಾನೆ. ಇವನ ಕಾಲವು ಸುಮಾರು 1150 ಆಗಿರಬಹುದೆಂದು ಊಹಿ

ಸುತ್ತೇವೆ---

ಇವನ ಗ್ರಂಧ

                             ಚಂದ್ರಪ್ರಭಸ್ತುತಿ 

ಇದರಲ್ಲಿ 14 ಕಂದಗಳಿವೆ, ಬಂಧವು ಮನೋಹರವಾಗಿದೆ. ಕೆಲವು

ಕಂದಗಳನ್ನು ಉದ್ಧರಿಸಿ ಬರೆಯುತ್ತೇವೆ---

ತನುರುಚಿರರುಚಿಗಳಂ ಪಾ | ಲ್ವೊನಲೆಂದಾಸೆಯೊಳೆ ಸಾರ್ದ ಹಂಸಾವಳಿಯೆಂ।

ಬಿನಮೆಸೆದುಪೊಳೆಯುತಿರ್ದುವು|ಜಿನಪತಿಯಿರ್ಕೆಲದೊಳಮಳಚಾಮರಯುಗ್ಮಂ||

ಪಳಿಕಿನರುಚಿಯೊಳ್ ಮಿಂದವೊ|ಲೆಳಮುತ್ತಿನ ಕಾಂತಿಯಿಂದ ನುಣ್ಣಿಕ್ಕಿದವೋಲ್ |

ಮಳಯಜದೊಳ್ ಮುಬುಗಿದವೋಲ್ | ತೊಳತೊಳತೊಳಗಿದುದು ಮೂರ್ತಿ

                                                                                       ಚಂದ್ರಪ್ರಭನಾ ||

ಪವಳದಕುಡಿವೆರಸಿ ಸುಧಾ | ರ್ಣವದಿಂ ಪೊಲಿಮಡುವ ಚಂದ್ರನಂತಿರೆ ತೀವಿ|

ರ್ದವಯವಮರೀಚಿಯೊಳ್ ಪ|ಲ್ಲವಾಧರಂ ತೊಳಗಿದತ್ತು ಜಿನಮುಖಚಂದ್ರಂ||