18 ಕರ್ಣಾಟಕ ಕವಿಚರಿತೆ. 15 ನೆಯ
ವೀರಣಂದಿ, 1153 ಈತನು ಸ್ವಕೃತವಾದ ಆಚಾರಸಾರಕ್ಕೆ ಕನ್ನಡವ್ಯಾಖ್ಯಾನವನ್ನು
ಬರೆದಿದ್ದಾನೆ. ಇವನು ಜೈನಕವಿ; ಇವನ ಗುರು ಮೇಘಚಂದ್ರ. ಶಕ 1076 ಶ್ರೀಮುಖದಲ್ಲಿ--ಎಂದರೆ 1153ರಲ್ಲಿ ಈ ವ್ಯಾಖ್ಯಾನವನ್ನು ಬರೆ ದಂತೆ ಅದರಲ್ಲಿರುವ
ಸ್ವಸ್ತಿ ಶ್ರೀಮನ್ಮೇಘಚಂದ್ರತ್ರೈ ವಿದ್ಯದೇವರ ಶ್ರೀಪಾದಪ್ರಸಾದಾಸಾದಿತಾತ್ಮಪ್ರ
ಭಾವ ಸಮಸ್ತ ವಿದ್ಯಾ ಪ್ರಭಾವ ಸಕಲದಿಗ್ವತಿ೯ ಕೀರ್ತಿ ಶ್ರೀಮದ್ವೀರಣಂದಿಸಿದ್ದಾಂತಚಕ್ರ ವರ್ತಿಗಳ್ ಶಕವರ್ಷಂ 1076 ಶ್ರೀಮುಖನಾಮಸಂವತ್ಸರದ ಜ್ಯೇಷ್ಠ ಶುಕ್ಲ 1 ಸೋಮ ವಾರದಂದು ತಾವು ಮಾಡಿದಾಚಾರಸಾರಕ್ಕೆ ಕರ್ಣಾಟಕ ವೃತ್ತಿಯಂ ಮಾಡಿದಪರ್1 ಎಂಬ ಗದ್ಯದಿಂದ ತಿಳಿಯುತ್ತದೆ. ಇದರಿಂದ ಮಾದರಿಗಾಗಿ ಒಂದು ಶ್ಲೋ ಕದ ವ್ಯಾಖ್ಯಾನವನ್ನು ತೆಗೆದು ಬರೆಯುತ್ತೇವೆ:---
ಪರಿವ್ರಾಡ್ ಬ್ರಹ್ಮ ಕಲ್ಪಾಂತಂ ಯಾತ್ಯಗ್ರಾಚಾರವಾಸಿ | ಆಜೀವಕಃ ಸಹಸ್ರಾರಕಲ್ಪಾಂತಂ ದರ್ಶನೋಜ್ಝಿತಃ || ಪರಿವ್ರಾಟ್, ಪರಿವ್ರಾಜಕಂ, ಬ್ರಹ್ಮಕಲ್ಪಾಂತಂ, ಬ್ರಹ್ಮಕಲ್ಪಂಬರಂ, ಅತ್ಯು ಗ್ರಾಚಾರವಾನಸಿ, ಬೆಟ್ಟತ್ತಪ್ಪ ನೆಗರ್ತೆಯನುಳ್ಳನಾದೊಡಂ, ಆಜೀವಕಃ, ಬೌದ್ಧ
ಭೇದಮಪ್ಪ ಕಾಂಜಿಭಿಕ್ಷು. ಸಹಸ್ರಾರಕಲ್ಪಾಂತಂ, ಸಹಸ್ರಾರಕಲ್ಪಂಬರಂ, ದರ್ಶ ನೋಜ್ಝಿತಃ, ಸಂಯಕ್ತ್ವ ಮಿಲ್ಲದಂ ಯಾತಿ, ಪೋಕುc2.
_____ ______ ಬಸವ 3 ನು 1160 ಈತನು ಶಿಖಾರತ್ನವಚನವನ್ನೂ ಬರೆದಿದ್ದಾನೆ. ಇದರಲ್ಲಿ 34 ವಚ
ನಗಳಿವೆ. ಇವನ ವಚನಗ್ರಂಧಗಳಲ್ಲೆಲ್ಲಾ " ಕೂಡಲಸಂಗಮದೇವ ” ಎಂಬ ಅಂಕಿತವು ದೊರೆಯುತ್ತದೆ. "ಕೂಡಲ ಚೆನ್ನಸಂಗಮದೇವ" ಎಂಬ ಅಂಕಿತವು ಚೆನ್ನಬಸವನ ಗ್ರಂಧಗಳಿಗೆ ಗುರುತು.ಶಿಖಾರತ್ನವಚ ನದಿಂದ ಒಂದೆರಡು ವಚನಗಳನ್ನು ಉದಾಹರಿಸುತ್ತೇವೆ---
ಶ್ರೋತ್ರ ನೇತ್ರ ತ್ವಕ್ಕು ಫ್ರಾಣ ಜಿಹ್ವೆ ಎಂಬ ಜ್ಞಾನೇಂದ್ರಿಯಂಗಳು ತಾನಿ
ರ್ದಲ್ಲಿ ; ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಂಚವಿಷಯಂಗಳು ತಾನಿರ್ದಲ್ಲಿ ; ________________________________________________________________________________________ | Indian Antiguw v 1 fo1 I912, 88 2 Ibtd , 89 3 Vol I, 142.