ಈ ಪುಟವನ್ನು ಪರಿಶೀಲಿಸಲಾಗಿಲ್ಲ.
20 ಕರ್ಣಾಟಕ ಕವಿಚರಿತೆ. [15 ನೆಯ
ಚೆನ್ನೆ ಯರ ಬಲೆಯಲ್ಲಿ ಎನ್ನನಿರಿಸಿದೆ ಪ್ರಭುವೆ|ಇನ್ನಿ ದಕೆ ಭಾವಜನು ಬೇಂಟೆಗಾರ |
ಕುನ್ನಿಗಳು ತಾವೈದು ಎನ್ನ ಗ್ರಹಿಸದಮುನ್ನ | ಚಿನ್ಮಯಪ್ರಭು ಸಲಹೊ
ಯೋಗಿನಾಧ || ಅಷ್ಟಾವರಣನ್ತೋತ್ರದತ್ರಿವಿಧಿ1
ಇದರ ಒಂದು ಪ್ರತಿಯಲ್ಲಿ 144 ಪದ್ಯಗಳಿವೆ.
ಶಿವಭಕ್ತಿ ಶರಧಿಯಲಿ ನೆಲೆಗೊಳಿಸಿದಾತ ಗುರು | ಪರಿಕಿಸಿಯೆ ಭವವ ಹರಿದಾತ
ಗುರುವೈ |
ಶ್ರೀಗುರುವೆ ಎಂಬ ನಾಮಾಕ್ಷರತ್ರಯದಲ್ಲಿ| ಆನು ಪ್ರಜ್ವಲಿತನೈ ಯೋಗಿನಾಧ 2,1
_____ _____
ಹರೀಶ್ವರ ೩ ನು. 1165
ಇವನ ಮುಡಿಗೆಯಅಷ್ಟಕದಿಂದ ಪ್ರಥಮಸಂಪುಟದಲ್ಲಿ4 ಪದ್ಯಗಳನ್ನು
ಉದಾಹರಿಸಿಲ್ಲ ಇದರಲ್ಲಿ 8 ವೃತ್ತಗಳಿವೆ; ಎಲ್ಲವೂ ಕ್ಷಕಾರಪ್ರಾಸದಲ್ಲಿವೆ, ಒಂದೊಂದೂ ಮುಡಿಗಿಕ್ಕಿದೆನಿಕ್ಕಿದೆನಾವನೆತ್ತುವಂ ಎಂದು ಮುಗಿಯುತ್ತದೆ. ಇದರಿಂದ ಎರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ--
ಕುಕ್ಷಿಯೊಳಿಟ್ಟು ಭಕ್ತಕುಲಮಂ ಪರಿರಕ್ಷಿಪ ದೇವದೇವನ |
ಬ್ಜಾಕ್ಷವಿರಿಂಚಿಗಳ ತುದಿಮೊದಲ್ವರೆಗಾಣದ ದೇವದೇವನಾ |
ವಕ್ಷದೊಳಾಲ್ದು ಬೊಬ್ಬಿರಿವ ದೇವಕರೋಟಿಯ ದೇವನೀವಿರೂ |
ಪಾಕ್ಷನೆ ದೇವನೆಂದು ಮುಡಿಗಿಕ್ಕಿದೆನಿಕ್ಕಿದೆನಾವನೆತ್ತು ವಂ ||
ತ್ರ್ಯಕ್ಷನೆ ದೇವನಕ್ಷಿ ಶಿಖಿಗಂಗಜನಾಹುತಿಯಾಗೆ ಬೇಳ್ದ ಭಾ |
ಳಾಕ್ಷನೆ ದೇವನಬ್ಬ ಜನ ನೆತ್ತಿಯ ಪಾತ್ರೆಯನೆತ್ತಿದಾಮಹಾ |
ಭಿಕ್ಷುವೆ ದೇವನಂತಕನನೀಡಿರಿದೆತ್ತಿ ಪೂರಳ್ವಿದಾವಿರೂ |
ಪಾಕ್ಷನೆ ದೇವನೆಂದು ಮುಡಿಗಿಕ್ಕಿ ದೆನಿಕ್ಕಿದೆನಾವನೆತ್ತುವಂ ||
_____ ______
ರಾಘವಾಂಕ, 5 ನು 1165
ಇವನ ಸೋಮನಾಥಚರಿತೆಯಲ್ಲಿ6 5 ಆಶ್ವಾಸಗಳೂ 500 ಪದ್ಯ
ಗಳೂ ಇವೆ. _______________________________________________________________________________________
I Vol 1, I52 2 ಇವನ ಗ್ರಂಧಗಳಲ್ಲಿಯ ಯೋಗಿನಾಧ ಎಂಬ ಶಬ್ದ ವು ಚೆನ್ನಬಸವ
ನನ್ನು ಸಂಬೋಧಿಸುತ್ತದೆ. 3 Vol, I, 170 4 lbid , 179 5 lbid , 180. 6. Ibid , 185