ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನಕ್ಕೆ ಹಿಂದೆ] ಮಲ್ಲಿಕಾರ್ಜುನ 27
ಗಳಿಸುವ ಕೋವು ಶಂಖಮರುಣಚ್ಛವಿ ಕೆಂಪಿನ ಮಂಡಲಂ ರತ ಕ್ಕೆಳಸುವ ಕೋಕಮಬ್ಬ ವಿಕಸಂ ಸಲೆ ಸೂರ್ಯನ ವರ್ಣನಕ್ರಮಂ || --------- ಜನಿಸಿದ ತಾಣಮೇಂ ಕಿವುದೆ ವಾರ್ಧಿ ಸಹೋದರಿಯೇಂ ದರಿದ್ರೆಯೇ | ಘನತರಭಾಗ್ಯಲಕ್ಷ್ಮಿಯೊಡಹುಟ್ಟಿದನೇಂ ಲಘುವೇ ಹಿಮಾಂಶು ಭಾ || ವನೆನಿಪನೇನೊ ಜಾವಳನೆ ಕೃಷ್ಣನುಮೆಂಬುದುಕೇಳ್ದು ಮರ್ತ್ಯರೆ | ನ್ನನೆ ಮಿಗೆ ಕರ್ಚಿ ಕೊಲ್ವರೆನುತೂಳ್ವಾವೊಲಾರ್ದುದು ಶಂಖನಿಸ್ವನಂ || ಮೂಡಣಸಂಜೆ ಕೆಂದಳಿರ ಕಾವಣದಂತಿರೆ ಚಂದ್ರಮಂಡಲಂ | ಬಾಡಿದ ಮಾಧವೀಮಧುರಮಂಜರಿಯಂತಿರೆ ತಾರಕಾಳಿ ನೀ || ರೋಡಿ ಕಳಿಲ್ದು ಬಿಳ್ದಿ ಕುವೂಗೆಣೆಯಾಗಿರೆ ತಣ್ಣನಪ್ಪೆಲರ್ | ತೀಡೆ ತಪೋವನಂಬೊಲತಿಪಾವನಮಾಯ್ತು ನಭಂ ಪ್ರಭಾತದೊಳ್ || \ ಋತು ವರ್ಣನೀಯಾಂಶಗಳು--- ತರುಮೃಗಪಕ್ಷಿ ಮೇಘಒಳವಾಯುದಿಶಾಜವಕಾಯಭೋಗಭಾ | ಸ್ಕರವಿಧುರಾತ್ರಿವಾಸರಸುರಾಲಯ? ಪರ್ಬಿರತೋಪಚಾರಸಿಂ || ಧುರಮದಜನ್ಮ ಯಾನಮದನೋದಯಸಸ್ಯವಿಶೇಷಭಾವದೊಳ್ | ಪರಿಣತನಪ್ಪವಂಗೆ ಋತುವರ್ಣನವಿಸ್ತರಮೊಪ್ಪಿ ತೋರಿಗುಂ || -----=- ಮದನನ ದಂಡು ಮಲ್ಲಿಗೆಯ ಬಂಡು ಪಿಕಾಳಿಯ ತೊಂಡು ಪೂತ ಚೂ | ತದ ತನಿಗೊರ್ಬು ಮಾಧವಿಯ ಪರ್ಬು ತಮಾಲದ ಮರ್ಬು ರಾಜಕೀ || ರದ ತನಿಸೊರ್ಕು ಕಾಮಿಜನದುರ್ಕು ವಿಯೋಗಿಯ ಸೆರ್ಕು ಕೂಡೆ ಬಂ | ದುದು ಮಧುವಾಸರಂ ವಿವಿಧಕೇಸರಮುದ್ಧತಧೂಳಿಧೂಸರಂ || ಪಿಂಗಳಮಾದ ನೆಲ್ಲ ತೆನೆಯಂ ನಲಿಗರ್ಚೀದ ರಕ್ತಚಂಚು ಪ | ಕ್ಪoಗಳ ಶಾಡ್ವಲಚ್ಛವಿ ಮನಂಗೊಳೆ ಪಾರುವ ಕೀರಮಾಲೆ ರೋ || ದೋಂಗಣಮೆಂಬ ಪಟ್ಟಣದೊಳೊಪ್ಪುವ ಬೆಳ್ಮುಗಿಲೆಂಬ ಬಳ್ಳಿಮಾ | ಡಂಗಳ ಪೊನ್ನ ಮಾಣಿಕದ ಪಚ್ಚೆಯ ತೋರಣದಂತೆ ರಂಜಿಕುಂ || x1 ವನಕ್ರೀಡೆ ವರ್ಣನೀಯಾಂಶಗಳು--- ವನಪಾಲರ್ ಪೇಳ್ವಿ ಭೂಪರ್ ತರುಣಿಯರೊಡನಾ ನಂದನಕ್ಕೆಯ್ದೆ ಪೋಪಾ|