ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನಕ್ಕೆ ಹಿಂದೆ] ಮಲ್ಲಿಕಾರ್ಜುನ. 29

    ದರಹಾಸಂ ಸೂಸೆ ಬೆಳ್ದಿoಗಳನಲಘುಕುಚಂ ಮೇಲುದಂ ಸೂಸೆ ಚಾಮೀ || 
    ಕರಕಾಂಚೀಮಂಜುಗುಂಜದ್ಧ್ವನಿ ಕಿವಿಗಮರ್ದo ಸೂಸೆ ತಳ್ಪೋಯ್ವಸುಯ್ಕ |
    ತ್ತುರಿಗಂಪo ಸೂಸೆ ಲಕ್ಷ್ಮೀಪತಿಯ ತನುವಿನೊಳ್ ಸೂಸಿದಳ್
                                     ನೀರನೊರ್ವಳ್ ||
                
                  X11i ಮದ್ಯಪಾನ 
    
    ವರ್ಣನೀಯಾಂಶಗಳು--- 
    ಮದಿರಾಪಾನವಿಕಾರಮಂ ನವವಯಸ್ಸಂಪತಿಯಂ ಬಂದು ನೋ | 
    ಡದಿವೊಲ್ ನೋಡುವ ನಲ್ಲನಿರ್ದಿರವನತ್ಯುತ್ಸಾಹಮಂ ಮಾಡೆ ಚಿ ||
    ತ್ತದೊಳಾಗಲ್ ತನುಮಧ್ಯೆಗಾಯ್ತೆನಸುಮಾನತ್ಯಂ ಚತುರ್ಭಂಗಿಭೇ |
    ದದ ಲೀಲಾನಯನಪ್ರಧಾನವಿಧಿಯಿ೦ ಕಾದಂಬರೀಗೋಷ್ಠಿಯೊಳ್ ||
                   
                    --------
   
    ಇರೆ ನವಪದ್ಮರಾಗಚಷಕಂ ನಿಜಹಸ್ತತಳಾಗ್ರದೊಳ್ ಮನೋ | 
    ಹರೆ ತಳಿದೊ೦೯ಗಲಂ ತಳೆದ ಕೋಮಲವಲ್ಲರಿಯಂತೆ ರಕ್ತಪಂ || 
    ಕರುಹಮನಾಂತ ಪಂಕಜಿನಿಯಂತೆ ಸಮೋದಿತಚಂದ್ರಬಿಂಬಮಂ | 
    ಧರಿಯಿಸಿದಿಂದ್ರದಿಗ್ವನಿತೆಯಂತೆಸೆದಳ್ ಮಧುಪಾನಗೋಷ್ಠಿಯೊಳ್ ||.
    ಅಲರ್ಗಣ್ ಕೆಂಪಡರಲ್ಕೆ ಪೊಂಗಿದಧರಂ ಬೆಳ್ಳೇರೆ ರೋಮೋದ್ಗಮಂ |
    ತಲೆದೋರಲ್ ಬೆವರುಣ್ಮೆ ಲಜ್ಜೆ ತೊಲಗಲ್ ನಿತ್ರಾಣವಾಗಲ್ ಮದಂ ||
    ಬಲಯಲ್ ಕಣ್ ಮುಗಿಯುತ್ತೆ ಮೂರ್ಛೆ ಮಿಗೆ ತೋರಲ್ಕಂದು ಚೆಲ್ವಾದುದ|
    ಗ್ಗಳಮೆಂಬಂತಿರಲಿನ್ನ ದೇವೊಗವ್ವನೋ ಕಾದಂಬರೀಸಂಗಮಂ ||
    
                  XIV ಸುರತಕ್ರೀಡೆ 
   
    ವರ್ಣನೀಯಾಂಶಗಳು---
    ಪರಿರಂಭಂ ಚುಂಬನಂ ಸೀತ್ಕೃತಗಳರುತಿ ದಂತಚ್ಛದಂ ರೇಖೆವೊಯ್ಯಲ್ | 
    ಕರಣಂಗಳ್ ಪಲ್ಲಟಂ ನಚ್ಚಿನ ಮುಖರತೆ ಸುಯ್ ಕಂಪನಸ್ವೇದಮಂಗಾಂ ||
    ತರಪೂರಂ ರೋಮಹಷ೯೦ ನಯನಮುಕುಳನಂ ಮಂಚಚಂಚತ್ಸಕುಂತಿ |
    ಸ್ವರಮೊಪ್ಪಲ್ಕೊಪ್ಪುವನ್ನಂ ಮೆಳೆಗೆ ಕವಿತೆಯೊಳ್ ನೋಡೆ ಸಂಭೋಗ 
                                         ವರ್ಣo ||