ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತೆ. - [16 ನೆಯ ಯಮನಿಯಮಧ್ಯಾನಯುತಂ 1 ಸಮಚಿತ್ತಂ ತತ್ತ್ವವೇದಿ ವೈರಾಗ್ಯಯುತಂ | ಶಮಿತಕಪಾಯಂ ನಿಸ್ಪೃಹ | ನಮಲಂ ಭವ್ಯಂ ಸರಸ್ವತೀಮುಖತಿಲಕಂ || ಎಂಬ ಪದ್ಯಗಳಲ್ಲಿ ಕವಿ ತನ್ನ ಗುಣಾದಿಗಳನ್ನು ಹೇಳಿಕೊಂಡಿರು ವಂತೆ ತೋರುತ್ತದೆ, ಅಲ್ಲದೆ ಆತನಿಗೆ ಸರಸ್ವತೀಮುಖತಿಲಕ್ ಎಂಬ ಬಿರು ದು ಇದ್ದಂತೆಯೂ ತಿಳಿಯುತ್ತದೆ. ಒಂದೆರಡುಪದ್ಯಗಳು ಕವಿಜನಮಿತ್ರ ಎಂದು ಮುಗಿಯುತ್ತವೆ. ಇದೂ ಕವಿಯ ಬಿರುದಾಗಿದ್ದರೂ ಇರಬಹುದು. ಕವಿಯ ಕಾಲವನ್ನು ನಿರ್ಧರಿಸಲು ಆವ ಆಧಾರವೂ ಇಲ್ಲ ; ಸುಮಾರು 1400ರಲ್ಲಿ ಇದ್ದಿರಬಹುದೆಂದು ತೋರುತ್ತದೆ. ಇವನ ಗ್ರಂಧ ವರಮಾಗಮಸಾರ - ಇದು ಕಂದವೃತ್ತಗಳಲ್ಲಿ ಬರೆದಿದೆ , ಪದ್ಯಗಳು 132. ಇದರಲ್ಲಿ ಆತ್ಮಸ್ವರೂಪ, ವೈರಾಗ್ಯ ಮುಂತಾದ ವಿಷಯಗಳು ನಿರೂಪಿತವಾಗಿವೆ. ಇದಕ್ಕೆ ಈ ಹೆಸರು ಬರಲು ಕಾರಣವನ್ನು ಕವಿ ಈ ಪದ್ಯದಲ್ಲಿ ಹೇಳು ತಾನೆ-- ಪರಮಜಿನೇಶ್ವರಮತದೊಳ್ | ಪರಿಕಿಸಿ ಸಾರಾಯನಪ್ಪುನಂ ಕೊಂಡು ಕರಂ | ವಿರಚಿಸಿತಪ್ಪದಕಂದಂ | ಪರಮಾಗಮಸಾರವಾದುದೀಕೃತಿಯಂದಂ | - ಗ್ರಂಥಾವತಾರದಲ್ಲಿ ಪುರುದೇವಸ್ತುತಿ ಇದೆ. ಈ ಗ್ರಂಥದಿಂದ ಕೆಲ ವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಎನ್ನ ಧನವೆನ್ನ ಪುತ್ರ | ದೆನ್ನ ಯ ಗೃಹಮೆನ್ನ ವಸ್ತುವಾಹನಮೆನುತುಂ | ತನ್ನ ನಿಜಾತ್ಮನನರಿಯದೆ | ಮನ್ನಿಸುಗುಂ ಮೂಢಮತಿಯೊಳೊಂದಿದ ಜೀವಂ || ಧ್ಯಾನಂ ಕಿಚ್ಚಾಗೆ ಲಸಬ್ | ಜ್ಞಾನಂ ತಿದಿಯಾಗೆ ನೃತ್ಯ ಮೌಷಧವಾಗಲ್ | ಜ್ಞಾನಿ ಸುಡುಗಾತ್ಮಲೋಹಮ | ನೇನುಂ ಮಳಮೊಂದು ನಿಲ್ಲದಂತಿರೆ ಮುದದಿಂ || ನೀರೊಳಗೆ ಪುಟ್ಟ ಪದ್ಮಂ | ನೀರೊಳ ತಾಂ ಮುಟ್ಟಿ ದಂತೆ ನಿಜಶುದ್ಧಾತ್ಮಂ || ಸಾರಮಣಮಲ್ಲದೀ ಸಂ | ಸಾರದೊಳೊ೦ದಿರ್ದುಮೊಂದನಮಳನಮೂರ್ತo | ಆನಿಡಘವಿಹೀನಂ | ತಾನಪ್ರೊಡೆ ಕರ್ಮ ಜನಿತಾಯೊಡಲೇನುತುಂ | ಜ್ಞಾನಿಯದಲ್ಲಿ ಮೋಹಮನೇನುಂ ಪೊದಿಸದೆ ನೆಗಟ್ಟು ಮಾತ್ರೋನ್ನತಿಯೊಳ್ | ತನು ತನಗಂಬ ತನ್ವಿ ತನಗೆಂಬ ಧನಂ ತನಗೆಂಬ ರಾಜ್ಯರಂ | ಜನೆ ತನಗೆಂಬ ದರ್ಪಮನದಿಪಿ೯ಯೆ ತನ್ನೊಳೆ ತಾನೆ ಭಾವಿಸಲ್ | ||