ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನಕ್ಕೆ ಹಿಂದೆ] ಕವಿಮಲ್ಲ, ತನು ತನಗಲ್ಲ ತನ್ವಿ ತನಗಲ್ಲ ಧನಂ ತನಗಲ್ಲ ರಾಜ್ಯರಂ || ಜನ ತನಗಲ್ಲವೆಂದುರಿದು ನಿಂದುದೆ ಯೋಗಿಗೆ ಯೋಗಿಲಕ್ಷಣಂ || ಕವಿಮಲ್ಲಿ ಸು 1400 ಈತನು ಮನ್ಮಥವಿಜಯವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣ ಕವಿ; ಕವಿಪುಟ್ಟ ಣಾಂಕಪಂಡಿತನಿಂದ 1 ವಿದ್ಯೆಯನ್ನು ಕಲಿತಂತೆ ಹೇಳುತ್ತಾ ನೆ.ಇವನಿಗೆ ಅಕ್ಷಣಕವಿ ಎಂಬ ಬಿರುದಿದ್ದಂತೆ ತಿಳಿಯುತ್ತದೆ. ಸಂಸ್ಕೃತ ಕವಿಗಳಲ್ಲಿ ಕಾಳಿದಾಸಬಾಣಮಯೂರರನ್ನು ಸ್ಮರಿಸಿ ಕನ್ನಡಕವಿಗಳಲ್ಲಿ ಅಗ್ಗಳ ಮುಂತಾದವರನ್ನು ಈ ಪದ್ಯಗಳಲ್ಲಿ ಸ್ತುತಿಸುತ್ತಾನೆ ಇಳೆಯೊಳ್ ಕರ್ಣಾಟಭಾವಾವಿದರೆನಲೆಸೆವೊಳ ಬೃಗರ್ ತಾವೆನಿಪ್ಪ | ಗ್ಗಳದೇವಂ ನೇಮಿಚಂದ್ರಂ ಮನಸಿಜ ಸುಜನೋತ್ತಂಸ ರುದ್ರಾಂಕ ಪೊನ್ನಂ || ಕಳೆಯಾಣ್ಮಂ ನಾಗವರ್ಮಾದ್ಯನುಪಮಗುಣಿಗಲ್ ನೂತನಬ್ರಹ್ಮರೆಮ್ಮೊಳ್ || ವಿಳಸದ್ಯಾಗೃತಿಯಂ ಕಾಳ್ಳುರಮೆಸಗುವಿನಂ ವಾ s ಕಾರುಣ್ಯದಿಂದಂ || ನಿರತಂ ಕರ್ಣಾಟಕದೊಳ್ | ಪರಿಕಿಸೆ ಶಬ್ದಜ್ಞನಾವನೊರ್ವನೆ ಲೋಕ | ಕರಿದ ಭಾವ ಕವಿಕುಂ |ಜರಕೇಶವರಾಜ ಗೋಚರಿಸು ಮನ್ಮನದೊಳ್ || ಇವನ ಗ್ರಂಥ ಮಧವಿಜಯ ಇದು ಚಂಪೂರೂಪವಾಗಿದೆ. ಗ್ರಂಧಾವತಾರದಲ್ಲಿ ಕವಿ ಕಾಮನನ್ನು ಸ್ತುತಿಸಿದ್ದಾನೆ; ಬಳಿಕ ಈಶ್ವರ, ವಿಷ್ಣು, ಬ್ರಹ್ಮ, ಆದಿಶಕ್ತಿ,ಗಣೇಶ, ಸರ ಸ್ವತಿ ಇವರುಗಳನ್ನು ಪರಿವಿಡಿಯಿಂದ ಹೊಗಳಿದ್ದಾನೆ. ತನ್ನ ಗ್ರಂಧದ ಹೆಸರು ಮುಂತಾದುದನ್ನು ಈ ಪದ್ಯದಲ್ಲಿ ಹೇಳಿದ್ದಾನೆ ಸ್ಮರವಿಜಯಂ ಕೃತಿವೆಸರಾ ( ದರಿಸರ ಶೃಂಗಾರಸಾರ ಕೋವಿದರೊಲವಿಂ | ವಿರಚಿಸಿದ೦ ಲಕ್ಷಣಕವಿ | ವರನೆಂದೆನೆ ಮೆಚ್ಚಿ ಕೂರ್ತು ಪೊಗಳಿದರೊಳರೇ || ಗ್ರಂಥಾಂತ್ಯದಲ್ಲಿ ಈ ಗದ್ಯವಿದೆ ಇದು ವಿದಿತಮದನಮುದ್ರಾಂಕಿತವಿದೂರಜನನಿಬಂಧನಕಾರಾಗಾರಮಭಿನವನಾ ಯಕನಾಯಿಕಾಶೃಂಗಾರಸಾರೋದ್ಧಾರಮುಂ ಸಕಲವಿಬುಧಸೇವ್ಯಮಾನಮುಂ ಲಕ್ಷಣಕ ವೀಂದ್ರವಿರಚಿತಮಪ್ಪ ಮನ್ಮಧವಿಜಯದೊಳ [, 36ನೆಯ ಪುಟವನ್ನು ನೋಡಿ

  • • - -
  • +1