ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ? ದೇಸರಾಜ, ಸರೋವರ ಅಳಿಯಿಕ್ಕೆಯುಂಟೆಯಾಡುಂಬೊಲ ಪೊಣರ್ವಕ್ಕಿ | ಗಳ ನೆಲೆ ನೀರ್ವೂಗಳ ಗೊತ್ತು| ಮೆಲುಗಾಳಿಯ ಚಾವಡಿ ಮೀನ್ಗಳ ಬಾಬಿ | ಕುಳಿರ್ಗೆಡೆಯೆನಿಪ ಕೋಳನ ಕಂಡ || ಸುಮನೋಮಕರಂದಸಂದೋಹ ಕಾಸಾರ | ಸುಮನೋಮಕರಂದಸಂದೋಹ | ಕಮಲಕುವಲಯವಿರಾಜಿತ ಕಣ್ಣಿದು | ಕಮಲಕುವಲಯವಿರಾಜಿತ || ಕುಮುದಕುಮುದಕುಮುದೇಶಜನನವಾರ್ಧಿ | ಕಮಲಕಮಲಕಮಲಾಲಯ | ವಿಮದವಿಮದವಿಮದಾಶ್ರಯಮಿಂತಿದು | ಹಿಮಹಿಮಹಿಮರೋಚಿರಸಸಾರ | ಪಿಶುನರು ಬೆತ್ತರ ಹಗೆಮಾಕ್ಷಿರು ಕಿಚ್ಚಿಲ್ಲದೆ | ಪೊತ್ತಿಕ್ಕಿ ಪೊಗಸಲೆಣಿಸುವರು || ಬಿತ್ತುವರ್‌ ಕಿವಿಯೊಳು ಬೆಳಸುವರೆರ್ದೆಯೊಳು |ಚಿತ್ತರವೆಂತೊ ಪಿಸುಣವಿದ್ಯೆ | 2 ಅಮರುಕ ಇದು ಸಂಸ್ಕೃತದಲ್ಲಿರುವ ಅಮರುಕಕತಕದ ಭಾಷಾಂತರವು; ಪರಿವರ್ಧಿನೀ ಪಟ್ಟದಿಯಲ್ಲಿ ಬರೆದಿದೆ. ಇದರ ಉತ್ಮ ಸ್ಮತೆಯನ್ನು ಕವಿ ಕೆಳಗಣ ಪದ್ಯದಲ್ಲಿ ಹೇಳಿದ್ದಾನೆ ಸ್ಮರರಾಜ್ಯದ ಮೈಸಿರಿ ಶೃಂಗಾರದ | ಶರನಿಧಿ ರತನಾಟ್ಯದ ರಂಗಸ್ಥಳ | ವಿರಹದ ನೆಲೆವೀಡೋಪರ ಕರಾಟದ ಕೊಸರಿನ ಗೊತ್ತು | ಸರಸರ ಸಂತವಣೆಯ ಮನೆ ಸುಗ್ಗಿ ಯ | ಪೊರೆವಾಗರ ಭಾವಾಲಯವಪ್ಪ | ತಿರೆ ಪೇದನಮರುಕವನು ದೇಸಮಹೀಪತಿ ಕನ್ನಡಿಸಿ || ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ಗಣೇ ಶ, ಸರಸ್ವತಿ ಇವರುಗಳನ್ನು ಹೊಗಳಿದ್ದಾನೆ. ಈ ಗ್ರಂಧದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಇರುಳೋಪರ ಮೃದುತಳ್ಳದೊಳೊಲಿದು | ಚ್ಚರಿಸುವ ಕಾಮಕಲಾಲಾಪವ ಮನೆ | ಯರಗಿಳಿ ಕೇಳದನಿರದೆ ಸಿರಿಯರೊಳಗುದಯದೊಳುಸಿರುತಿರೆ | ದರಹಸಿತಾನನೆ ಲಬ್ಬಿಸಿ ಕರ್ಣಾ | ಭರಣದ ಮಾಣಿಕ್ಯವ ದಾಳಿಂಬದ | ಪರಳೆಂದೀವ ನೆವದಿ ನಿಲಿಸಿದಳಾ ಕೀರನ ಬರವ ||. .ಯುಡುಗಿಹ ಕಟಕಾಮುಖಕರಬಾ | ಹೈದಲುಣ್ಣುವ ನಖರದ್ಯುತಿಯಿಂ ಪುದಿ | ದೊದಗಿದ ಕಿವಿಯೆಳದಳಿರಿನ ತೊಂಬೆಯೆಲಿ೦ಕೆಗೆ ಮುಅಮುರಿದು ||