ಈ ಪುಟವನ್ನು ಪರಿಶೀಲಿಸಲಾಗಿದೆ
80 ಕರ್ಣಾಟಕ ಕವಿಚರಿತೆ. [15 ನೆಯ
ಅವುಮಯವೆಗಳೆರಡ | ರಕ್ತದಿಂ ಹುಸಿದಿಟಗ | ಳಿರಿಬಿಸಿ೦ ನಾನು ನೀನೆಂಬುಭಯದ || | ಸಂ'ಕಿಂ ಮನವೆಂಬು | ದಿ ಕುವರ ನೀ ಜಾಗ್ರ | ದುಮಿಸುಮಧ್ಯದೊಳ್ ಕನಸಿನಂತೆ || ----------------------- ಬತ್ತಲೇಶ್ವರ ಸು, 1430 ಈತನು ಒಂದು ರಾಮಾಯಣವನ್ನು ಬರೆದಿರುವಂತೆ ತೋರುತ್ತದೆ. ಈ ಗ್ರಂಥದಲ್ಲಿ ಕೆಲವುಕಡೆ ಹರಿಕಥೆಗೆ ಸರಿ ಹುಟ್ಟದಿದನಾ | ದಗಿಸಿದವರಿಹಸರವ ಗೆಲುವರು | ಧರೆಗೆ ಸಯನಿತ್ತ ವರಕವಿ ಬತ್ತಲೇಶ್ವರನು || ಬಂದನೋಲಗದೊಳಗೆ ವಾನರ | ವೃಂದ ನಲಿನಲಿದಾಡುತಿರಲಾ | ನಂದದಲಿ ವರವಿತ್ತ ರಘುಪತಿ ಬತ್ತಲೇಶ್ವರಗೆ ||
ಎಂದು ದೊರೆಯುತ್ತದೆ, ಇನ್ನು ಕೆಲವುಕಡೆ ನಿರ್ವಾಣನಾಯಕ, ನಿರ್ವಾಣಲಿಂಗ ಎಂಬ ಅಂಕಿತಗಳು ಇವೆ. ಇವು ಬತ್ತಲೇಶ್ವರ ಎಂಬುದಕ್ಕೆ ಪರ್ಯಾಯಾಯಶಬ್ದಗಳಾಗಿರಬಹುದು. ಮುದ್ರಿತವಾಗಿರುವ ನೀತಿಸಾರ ವೆಂಬ ಗ್ರಂಥದಲ್ಲಿಯ
ವರರುಚಿ ಕಾಳಿದಾಸ ಸುಕುಮಾರಕುಮಾರಕವ್ಯಾಸ ಬಾಣನುಂ | ಹರಿಹರಸಾರ್ವಭೌಮಕವಿ ರನ್ನ ನು ತೇಚುಗ ದುರ್ಗಸಿಂಹನುಂ || ವರಕವಿಬಲೇಶ್ವರನು ರಾಘವನಗ್ಗಳ ರುದ್ರಭಟ್ಟನುಂ | ತುರಗ ಮಯೂರ ಹಂಪುಗನು ಕುಂಚವುಂಡಿಯರೇ ಕವೀಂದ್ರರು || ಎಂಬ ಪದ್ಯದಲ್ಲಿ ಈ ಕವಿಯ ಹೆಸರು ಹೇಳಿದೆ, ಇವನು ವೀರ ಶೈವಕವಿ. ಗುರುರಾಜಚಾರಿತ್ರದಲ್ಲಿ (ಸು, 1656) ದೇವರಾಯನ (1419-1446) ಆಳಿಕೆಯಲ್ಲಿ ಪಂಪಾಪುರದಲ್ಲಿದ್ದ ಕರಸ್ಥಲದ ನಾಗಲಿಂಗ, ವೀರ ಸ್ಟೋಡೆಯ ಮುಂತಾದ 101 ವಿರಕ್ತರ ಗೋಷ್ಟಿಯಲ್ಲಿ ಈತನನ್ನೂ ಸೇರಿಸಿರುವುದರಿಂದ ಇವನ ಕಾಲವು ಸುಮಾರು 1430 ಆಗಬಹುದು. ಪ್ರಹ್ಲಾದ ಚರಿತ್ರೆಯನ್ನು ಬರೆದ ಚೆನ್ನಿಗನು (ಸು. 1700) ಈತನನ್ನು ಸ್ತುತಿಸಿದ್ದಾನೆ.