ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ಗುರುಬಸವ.
ಇದು ಶ್ರುತಿಸ್ಮತಿಯ ಸೌ | ಖ್ಯದ ಸುಖಂ ವೇದಾಂತ | ದೊದವು ನಿಜಶೈವಸಿದ್ಧಾಂತಮತದ || ಹೃದಯವಾದ್ಯರ ಕರುಣ | ದುದಯದನುಭವಸಿದ್ಧ | ವಿದನರವರೀಸುವಿಧದರವರವರು || ಗ್ರಂಥಾವತಾರದಲ್ಲಿ ಬಸವಸ್ತುತಿ ಇದೆ. ಬಳಿಕ ಕವಿ ಅಲ್ಲಮ, ಚೆನ್ನಬಸವ, ಮಡಿವಾಳ, ಸಿದ್ದರಾಮ, ಇವರುಗಳನ್ನೂ ನೂತನಪುರಾ ತನರನ್ನೂ ಸ್ತುತಿಸಿದ್ದಾನೆ. ಗ್ರಂಥಾತ್ಯದಲ್ಲಿ ಈ ಗದ್ಯವಿದೆ---- ಶ್ರೀಮತ್ಪರಮಪರಮಾನಂದನಿತ್ಯ ನಿರ್ಮಲನಿರಘನಿರ್ಗುಣನಿರಾವರಣಸಕಲಜಗದ್ರ ರಿತಭಕ್ತಜನಮನೋ.........ವಯೋಗಿಜನಸೇವಿತಚರಣಾರವಿಂದ ಷಟ್ಥ್ಸಲಜ್ಞಾನಪ್ರ ಭಾಪುಂಜರಂಜಿತಾ೦ತರಂಗ ವೀರಶೈವಮತಸ್ಥಾಪನಾಚಾರನಪ್ಪ ಶ್ರೀಮದ್ಗರುಬಸ ವೇಶ್ವರಂ ಸಕಲಭಕ್ತಜನಹಿತಾರ್ಥವಾಗಿ ಸುಜ್ಞಾನಿಗಳಿಗಾನಂದಮಪ್ಪ...ಸ್ತ..ಶಿವಯೋ ಗೀಶ್ವರರದಾಡುಸಲೆಂದು ವೇದಾಗಮೋಪನಿಷತ್ಸಮ್ಮತಿಯಿಂ ನಿರೂಪಿಸಿದ ಮನೋ ವಿಜಯವೆಂಬ ಪ್ರಕರಣಂ ಪರಿಸಮಾಪ್ತಂ. ಈ ಗ್ರಂಧದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ----- ಹಿಸುಣತೆಗೆ ಹಿಗ್ಗಿ ಎಗೆ | ಕಿಸುಕುಳದೊಳೊಗ್ಗಿ ಸಂ | ತಸವಟ್ಟು ಕಳವುಹಾದರಹಿಂಸೆಗೆ || ಬೆಸಗೆಯ್ದು ನಿಂದೆತಾ | ಮಸಕುಟಿಲಕುಹಕದೊಳ | ಗೆಸೆದು ಮನವಿನಿಸಳ್ ಬೆಸೆದಿರ್ಪುದು || ಚಿಪ್ಪಿನೊಡಕಂ ಬೆಳ್ಳಿ | ಯಪ್ಪುದೆಂದದ ಪಿಡಿಯ | ಲಭ್ಯದೇ ಭ್ರಾಂತಿಯಾಪತ್ತಿನೆಡೆಯೊಳ್ || ಇರ್ಪ ಸರವಿಯೆ ಸರ್ಪ | ನಪ್ಪದೆಂದಂಜೆಯಿಂ | ತಿರ್ಪುದೇ ಸಂಶಯವಿದೆಂದುವುದು || ನಳಿನಮಿತ್ರನ ಕಿರಣ | ತಳಿಗೆಯೊಳ್ ಬೆಳಗಲದು | ತೋಳಗರೇ ಶತಗುಣೋತ್ತರಮದಾಗಿ || ಹಯವುಂಟೆ ರವಿಗ ಸಂ | ಚಳ ತಳಿಗೆಯಿಂದೈಸೆ | ತಿಳಿವುದಾಪರಿಯ ಪರಮಾತ್ಮನಿರವಂ ||