ಈ ಪುಟವನ್ನು ಪರಿಶೀಲಿಸಲಾಗಿಲ್ಲ.
82
ಕರ್ಣಾಟಕ ಕವಿಚರಿತೆ. 15 ನೆಯ ಗ್ರಂಥಾವತಾರದಲ್ಲಿ ಪಂಪೆಯ ವಿರೂಪಾಕ್ಷನ ಸ್ತುತಿಯಿದೆ. ಬಳಿಕ ಕವಿ ಗಣೇಶ, ತಿಟ್ಟಮಾದೇವಿ ಇವರುಗಳನ್ನು ಹೋಗಳಿದ್ದಾನೆ.
ಇವನ ಬಂಧವು ಪ್ರೌಢವಾಗಿಯೂ ಮನೋಹರವಾಗಿಯೂ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ--
ಪುಷ್ಪವಾಟ ಋತುಗಳ ಸೆಜ್ಜೆ ತುಂಬಿಗಳ ಜೇವಣಶಾಲೆ ಮನೋಜನಸ್ತ್ರಸಂ | ತತಿಯ ಸಮುದ್ಭವಸ್ಥಳಿ ಕುಮಾರಸವಿಾರಕನಾಡುವಂಗಳಂ || ರತಿಲತಿಕಾಗೃಹಂ ನೆಗಳ್ಧ ಕಂಪಿನದೊ೦ದು ಕರಂಡಮೆನ್ನದಿ || ನ್ನತಿಶಯಮಾಗಿ ಬಣ್ಣಿಸುವನೆಲ್ಲಿಯನಲ್ಲಿಯ ಪುಷ್ಪವಾಟಿಯಂ |! ಸಂಗೀತ ತಿಂಗಳ ಬಿಂಬಮಂ ಹಿಡಿದು ಹಿಂಡೆ ಪಳಚ್ಚನೆ ಸೋರ್ವ ಸೋನೆಯಂ || ತಿಂಗಡಲಿಂ ಪೊದಳ್ಧ ಮರ್ದನೆತ್ತಿ ದೊಡೊಯ್ಯನೆ ಸೋರ್ವ ಸೋನೆಯಂ || ತಂಗಜನಿಕ್ಷು ಕಾರ್ಮುಕವನೇಳುಸೆ ಜುಮ್ಮನೆ ಸೋರ್ವ ಸೋನೆಯಂ || ತೇಂ ಗಡ ಸೀಯನುಣ್ಮಿದುದೊ ಗೇಯದ ಮೆಲ್ಲುಲಿ ಜಾಣಗಾಣನ | ಕೊಳಲು ಮದನನ ಕರ್ವುವಿಲ್ಗೆ ತಿರುವಾದೆಳದುಂಬಿಯ ಝಂಕೃತಸ್ವನಂ || ಮದನನ ಬೀರಮಂ ಬೆಳಪ ಮೋಹನಬಾಣದ ಭೀಂಕೃತಾರವಂ ||
ಮದನನ ಮುಂದೆ ಬರ್ಪ ರತಿದೇವಿಯ ನೂಪುರಶಿಂಜಿತಂ ದಿಟ |
ಕ್ಕಿದಾ ಸೆರತಲ್ಲೆ ನಿಪ್ಪ ತೆಳಿದಿಂ ಪೊರಪೊಣ್ಮಿತು ವಾಸದಿಂಚರಂ || 2 ಗುರುಮೂರ್ತಿಶಂಕರಶತಕ ಇದು ವೃತ್ತದಲ್ಲಿ ಬರೆದಿದೆ; ಪ್ರತಿವೃತ್ತವೂ ಗುರುಮೂರ್ತಿಶಂಕರಾ ಎಂದು ಮುಗಿಯುತ್ತದೆ. ಈ ಗ್ರಂಥವನ್ನು “ಭಕ್ತಿಗೆ ವಿರಕ್ತಿಗೆ ಮುಕ್ತಿಗೆ ಬೀಜಮಾಗೆ ಪೇರ್ವುದು” ಎಂದು ಗುರುರಾಯಮಹಾಸಚಿವೇಂದ್ರನು ಆಜ್ಞಾ ಪಿಸಲು ಬರೆದಂತೆ ಕವಿ ಹೇಳುತ್ತಾನೆ. ಆರಂಭದಲ್ಲಿ ಶಿವಸ್ತುತಿ ಇಗೆ.ಈ ಗ್ರನ್ಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ--
ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ