ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಚಂದ್ರಕವಿ. 83

                                                     ದೇವರಾಯನ ಸ್ತುತಿ
ಜಲನಿಧಿ ಸೀಮೆ ರಾಜ್ಯ ವಿಭವಕ್ಕೆ ದಿಟಂ ಗಜವೇಂಟೆ ಸೀಮೆ ಮಾ |
ರ್ಬಲಕರುವತ್ತು ನಾಲ್ಕು ಕಳೆ ಸೀಮೆಯಭಿಜ್ಞತೆಗಬ್ಜಜಾಂಡದು ||
ಜ್ವಲವೃತಿ ಸೀಮೆ ಕೀರ್ತಿಗೆನೆ ಸೋಮಕುಲಕ್ಷಿತಿಪಾಲರಲ್ಲಿ ವೆ |
ಗ್ಗಳಿಸಿಹನೇರ್ಗಯಿಂ ವಿಜಯರಾಯತನೂಭವದೇವಭೂವರಂ ||
ಜನಪತಿಮಾತ್ರಮೇ ಗುಣದೊಳೀಕ್ಷಿಪೊಡಯ್ದನೆಯಂಬುರಾಶಿಯಾ | 

ಅನೆಯ ಸುಪರ್ವಭೂಮಿರುಹಮೇಟನೆಯಗ್ಗದ ಚಕ್ರವರ್ತಿಯೆಂ | ಟನೆಯ ಕುಲಾದ್ರಿಯೊಂಬತನೆಯೊರ್ವ ದಿಶಾಪತಿ ಸೇ ರಿಲೇನೊ ಪ |

ತ್ತನೆಯ ವಿರಿಂಚಿಯೆಂಬುದು ಜಗಜ್ಜನಿತಂ ಗಜವೇಂಟೆಕಾರಿನಾ ||
                                                              ನೀತಿ

ಒಡಲ ಪೊಡರ್ಪು ತುಟ್ಟಿ ಸದಮುನ್ನ ನಿಜೇಂದ್ರಿಯವರ್ಗದೇವಿ ಯೊ |

ರ್ಗುಡಿಸದಮುನ್ನ ಮುಪ್ಪು ಮುರಿದೊತ್ತದಮುನ್ನ ಲಲಾಟದಕ್ಕರಂ || 

ತೊಡೆಯದಮುನ್ನ ನಿಮ್ಮ ಪದಮಂ ನೆವ ಪೂಜಿಸವೇಟ್ಟಮೈದೆ ನೀ |

ರಡಸೆ ಬಲಿಕ್ಕೆ ಬಾವಿಯನಗಟ್ಟಿ ಪರೇ ಗುರುಮೂರ್ತಿ ಶಂಕರಾ | 

ಬಯ್ದೊಡೆ ಮೇಳವಾಡಿದನೆನುತ್ತ ಪರಾಧಮಸಿಟ್ಟು ಸಾವವೋಲ್ |

ಪೊಯ್ದೊಡೆ ಬುದ್ಧಿನೇರ್ದಿ ನೆನುತರ್ಧಮನೊಯ್ದೊಡೆ ತಾನೆ ಕೊಟ್ಟು, ತಾ ||
ನೊಯ್ದನೆನುತ್ತೆ ನೂಂಕಿದೊಡೆ ಬಾಗಿಲೊಳಿರ್ಪೆನೆನುತ್ತುಮಾಳ್ದನಿ |
ತ್ತಯ್ದು ಪಣಕ್ಕೆ ಮಾರಿ ತನುವಂ ಪೊರೆದೇಂ ಗುರುಮೂರ್ತಿ ಶಂಕರಾ |
ತುಡುಗುಣಿಯಂತೆ ಬೆಂದ ಮನಮೆಲ್ಲೆಡೆಗೆಯ್ದು ವುದೆಯ್ದ ದೊರ್ಮೆ ನಿಂ |
ದೊಡೆ ಭವದಿಂ ಭಯಂ ಬಿಡದು ಬಿಟ್ಟೂಡೆ ಬಲ್ಲರ ಗೊಟ್ಟಿಗೊಲ್ಲದೊ ||
ಲ್ದೊಡೆ ಚಪಲತ್ವಮಂ ಬಿಡದು ಬಿಟ್ಟೂಡೆ ಭಕ್ತಿಯೊಳಿರ್ಪೆನೆನ್ನದೆಂ |
ದೊಡೆ ನೆಲೆಗೊಳ್ಳದಿನ್ನಿ ದಕೆ ಸೇರಿ ಗತಿಯಂ ಗುರುಮೂರ್ತಿಶಂಕರಾ 11 

ಮುನಿನವನಾದೊಡಂ ಪರರ್ಗೆ ನೋವನೊಡರ್ಚದೆ ರಂಭೆಯಾದೊಡಂ |

ವನಿತೆಗೆ ಮೆಚ್ಚಿ ಸಿಲ್ಕದೆ ದರಿದ್ರತೆಯಾದೊಡಮರ್ಧಿಗೇನುಮಿ ||
ಲೈನಿಸದೆ ಹಾನಿಯಾದೊಡಮಸತ್ಯವ ಪೇಳದೆ ಬಾವ್ವ ಮರ್ತ್ಯನೇ || ಮುನಿವರನಾತನಾಚರಣೆಯುಗ್ರತಪಂ ಗುರುಮೂರ್ತಿಶಂಕರಾ ||

|| ||