ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಶತಮಾನ]          ಕಲ್ಯಾಣಕೀರ್ತಿ.                  85
                   ನಂದನವನ 

ಗಳಪುವ ಗಿಳಿಗಳ ಮೊರೆವಳಿನಿವಹದ | ನಲಿದುಲಿದಾಡುವ ಪಿಕನಿಕರಂಗಳ | ಸುಳೆಸುಳೆದಳಸಾವ ಪುರುಳಿಗಳೋಳಿಯ ಸಲೆ ಪೆಣ್ದುಂಬಿಗಳ || ಸುಲಲಿತಕಳಕಳಕೋಲಾಹಲದಿಂ | ವಿಲಸಿತಕಿನ್ನ ರಜನದಂಪತಿಗಳ | ಕಳಕಳನಿನದಂ ಮಸುಳಿಸುತಿಹುದಾ ನಂದನವನದಲ್ಲಿ ||

                2. ಕಾಮನಕಥೆ 

ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 4, ಪದ್ಯ 331. ಅಲ್ಲಲ್ಲಿ ಕಂದ ಪಟ್ಪದಿವಚನಗಳೂ ಇವೆ. ಇದರಲ್ಲಿ ಜೈನಮತಾನುಸಾರವಾಗಿ ಕಾಮನ ಕಥೆ ಹೇಳಿದೆ. ಗ್ರಂಧಾವತಾರದಲ್ಲಿ ನೇಮಿಜಿನನನ್ನೂ ಬಳಿಕ ಸರಸ್ವತಿ, ಜಿನಮುನಿಗಳು, ಸ್ವಗುರು ಲಲಿತಕೀರ್ತಿ, ಇವರುಗಳನ್ನೂ ಕವಿ ಹೊಗಳಿದಾ ನೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ_

     ಮಗುವನ್ನು ರಾಕ್ಷಸನು ಒಯ್ಯಲು ರುಕ್ಮಿಣಿಯ ಪ್ರಲಾವ
ಪಕ್ಕವಿಲ್ಲದ ಪಕ್ಕಿಯಂದದಿ ನನ್ನನು | ದೊಕ್ಕನೆ ಮಾಡಿದೆ ಮಗನೆ| ದಿಕ್ಕಾವುದು ಪೇಳೆನಗಿನ್ನು ನಂದನ |ಅಕ್ಕಟ ತಾಯನು ತೊಳೆದೈ|| ಹಾ ಸಜ್ಜನಜನಶೃಂಗಾರಹಾರನೆ | ಹಾ ಸರ್ವಕಳೆಗಳ ನಿಧಿಯೆ | ಹಾ ಸುತ ಸವತಿಯ ಕಣ್ಗೆ ನೀ ಕಸವಾದೆ|ಹಾ ಸರಸೀರುಹನಯನ||
                3. ಅನುಪ್ರೇಕ್ಷೆ 
ಇದರಲ್ಲಿ 74 ಪದ್ಯಗಳಿವೆ. ಕೊಂಡಕುಂದಾಚಾರ್‍ಯನ ಗಾಹೆಯ ಅರ್ಥವನ್ನು ಭಾವಿಸಿ ಈ ಗ್ರಂಥವನ್ನು ಬರೆದಂತೆ ಕವಿ ಹೇಳುತ್ತಾನೆ. ಇದರಿಂದ ಒಂದೆರಡು ಪದ್ಯಗಳನ್ನು ಉದಾಹರಿಸುತ್ತೇವೆ_
  ವಿಲಸದಿಂದ್ರಿಯಪಾಟವಂ | ನೆಲಸಿದಂಗದ ಸೌಷ್ಠವಂ | ತೊಳಪ ಮಿಂಚಿನ ರೀತಿಯಿಂ | ತೊಲಗಿ ಹೋಹುದು ಜೀವನೇ || ನೆನೆದು ಸಂಸೃತಿಜಲಧಿಯೊ | ಳನುದಿನಂ ನೆಳೆ ಮುಳುಗಿದಾ | ನಿನಗೆ ನೀನೆಲೆ ಶೋಕಿಸೈ | ಕನಲಿ ದುಃಖವನುಣದಿರು ||
                 4. ಜಿನಸ್ತುತಿ 

ಇದರಲ್ಲಿ 27 ಕಂದಗಳಿವೆ. ಇದರಿಂದ ಒಂದೆರಡು ಪದ್ಯಗಳನ್ನು ತೆಗದು ಬರೆಯುತ್ತೇವೆ__