ಈ ಪುಟವನ್ನು ಪರಿಶೀಲಿಸಲಾಗಿಲ್ಲ.
86 ಕರ್ಣಾಟಕ ಕವಿಚರಿತೆ. [16 ನೆಯ
ಅಲಸದೆ ನಾಲ್ಕುಂ ಗತಿಯೊಳ್ | ಬಳಲಿಸಿದೆನ್ನೊಂದು ಚಿತ್ತವೃತ್ತಿಯ ಪರಿಯಂ | ತೊಲಗಿಸಿ ತನ್ನೊಳ್ ನಿಲಿಸುವ | ಸುಲಭತೆಯಂ ಬಿಡದೆ ನೆನೆವುದೆನಗೆಂದಹುದೋ || ಒಂದಿದ ವಿಷಯಕಷಾಯದ | ದಂದುಗಮಂ ಕಿಡಿಸಲಾರ್ಪ ಪರಮಾನಂದಂ| ಬಂದು ನೆಲೆಗೊಳಿಸುವಂದದ | ಛಂದಂಗಳ ಬಿಡದೆ ನೆನೆವುದೆನಗೆಂದಹುದೋ || 5 ತತ್ವಭೇದಾಷ್ಟಕ ಇದರಲ್ಲಿ 9 ಪದ್ಯಗಳಿವೆ. ಒಂದು ಪದ್ಯವನ್ನು ಉದ್ಧರಿಸಿ ಬರೆ ಯುತ್ತೇವೆ___ ಕೂಡೆ ಬಾರದ ಪೂತಿಗಂಧದ ದೇಹದಂದವ ನೋಡು ನೀ। ಗಾಡು ಬೇಗದಿ ಸಂಗಸಂಗವ ಬಿಟ್ಟು ತೊಟ್ಟನೆ ರಾಗದಿಂ || ದಾಡುವಲ್ಲಿಯು ಪಾಡುವಲ್ಲಿಯು ನೋಡುವಲ್ಲಿಯು ನಿನ್ನನೇ | ನೋಡಿ ನಿನ್ನೊಳು ಭಾವಿಸಾತ್ಮನ ಚಾರುತತ್ವದ ಭೇದಮಂ || _________
ಜಿನದೇವಣ್ಣ 1444 ಈತನು ಶ್ರೇಣಿಕಚರಿತ್ರೆಯನ್ನು ಬರೆದಿದ್ದಾನೆ. ಇವನು ಜೈನಕವಿ. ಈ ಗ್ರಂಥವನ್ನು ಶಕ 1366 ರಲ್ಲಿ, ಎಂದರೆ 1444ರಲ್ಲಿ, ಬರೆದಂತೆ ಹೇಳುತ್ತಾನೆ ಎಂದು ಮೆ|| ರೈಸ್ ಬರೆದಿದ್ದಾರೆ.
ಇವನ ಗ್ರಂಧ
ಶ್ರೇಣೀಕಚರಿತ್ರೆ ಇದರಲ್ಲಿ ಶ್ರೇಣಿಕರಾಜನ ಕಥೆ ಹೇಳಿರುವಂತೆ ತೋರುತ್ತದೆ. __________ ವಿಜಯಣ್ಣ. 1448 ಈತನು ದ್ವಾದಶಾನುಪ್ರೇಕ್ಷೆಯನ್ನು ಬರೆದಿದ್ದಾನೆ. ಇವನು ಜೈನ ಕವಿ, ಕುಂತಳದೇಶದ ಬೆಳುವಲನಾಡೊಳಗಣ ವಮ್ಮನಭಾವಿಯ ಶಾಂತಿ ನಾಥಬಸದಿಯಲ್ಲಿ ಆ ಊರ ಪ್ರಭು ಹೊನ್ನಬಂದಿಯ ದೇವರಾಜನ ಆಜ್ಞಾನುಸಾರವಾಗಿ ಈ ಗ್ರಂಥವನ್ನು ಶಕ 1369ನೆಯ ವಿಭವಸಂವತ್ಸರದಲ್ಲಿ (1448) ಬರದಂತೆ ಕವಿ ಹೇಳುತ್ತಾನೆ. ಈತನ ಸ್ಥಳ ವೆಮ್ಮನಭಾವಿಯಾಗಿರಬಹುದು. ಈತನ ಗುರು ಪಾರ್ಶ್ವಕೀರ್ತಿ ಎಂದು ತೋರುತ್ತದೆ. ದೇವ