ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ] ವಿಜಯಣ್ಣ.
ಚಂದ್ರನ ರಾಜಾವಳೀಕಥೆಯಲ್ಲಿ(1838)ವಿಜಯಣ್ಣನು ರತ್ನಾಕರವರ್ಣಿಯ
(1557)1 ಸಮಕಾಲದವೆನೆoದು ಹೇಳಿರುವುದು ಭ್ರಾಂತಿಮೂಲವೆಂದು
ತೋರುತ್ತದೆ.
ಇವನ ಗ್ರಂಥ
ದ್ವಾದಶಾನುಪ್ರೇಕ್ಷೆ
ಇದು ಸಾಂಗತ್ಯದಲ್ಲಿ ಬರೆದಿದೆ ; ಪರಿಚ್ಛೇದ 12, ಪದ್ಯ 1448.
ಅಲ್ಲಲ್ಲಿ ಕೆಲವು ವೃತ್ತಗಳೂ ಕಂದಗಳೂ ಇವೆ. ಇದರಲ್ಲಿ ಅಧ್ರುವಾನ
ಪ್ರೇಕ್ಷೆ, ಶರಣಾನುಪ್ರೇಕ್ಷೆ, ಏಕತ್ವಾನುಪ್ರೇಕ್ಷೆ, ಅನ್ಯತ್ಯಾನುಪ್ರೇಕ್ಷೆ, ಸಂಸಾ
ರಾನುಪ್ರೇಕ್ಷೆ , ಲೋಕಾನುಪ್ರೇಕ್ಷೆ , ಅಶುಚಿತ್ವಾನುಪೇಕ್ಷೆ , ಆಸವಾನು
ಪ್ರೇಕ್ಷೆ, ಸಂವರಾನುಪ್ರೇಕ್ಷೆ, ನಿರ್ಜರಾನುಪ್ರೇಕ್ಷೆ, ಧರ್ಮಾನುಪ್ರೇಕ್ಷೆ, ಬೋ
ಧಿದುರ್ಲಭಾನುಪ್ರೇಕ್ಷೆ ಎಂಬ 12 ಅನುಪ್ರೇಕ್ಷೆಗಳು ಅಥವಾ ಚಿಂತನೆಗಳು
ನಿರೂಪಿಸಲ್ಪಟ್ಟಿವೆ. ಗ್ರಂಥಾವತಾರದಲ್ಲಿ ವೃಷಭಜಿನನ ಸ್ತುತಿ ಇದೆ. ಬಳಿಕ
ಕವಿ ಸಿದ್ಧಾದಿಗಳು , ಸರಸ್ವತಿ , ವೃಷಭಸೇನಾದಿಗೌತಮಗಣಧರರು,
ವಿಜಯಕೀರ್ತಿ, ಅವನ ಶಿಷ್ಯ ಪಾರ್ಶ್ವಕೀರ್ತಿ ಇವರುಗಳನ್ನು ಹೊಗಳಿದ್ದಾನೆ.
ಪರಿಚ್ಛೇದಗಳ ಕೊನೆಯಲ್ಲಿ ಈ ಗದ್ಯವಿದೆ --
ಇತಿ ಶ್ರೀಮದ್ದೇವೇಂದ್ರವೃಂದಮಣಿಮಕುಟಕಿರಣರಂಜಿತಪಾದಾರವಿಂದದ್ವಂದ್ವ
ಭಗವದರ್ಹತ್ಪರಮೇಶ್ವರ ಮುಖಕಮಲವಿನಿರ್ಗತ ದ್ವಾದಶಾನುಪ್ರೇಕ್ಷೆಯೊಳ್.
ಈ ಗ್ರಂಧದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ --
ಧರ್ಮವನೊಲ್ಲದೆ ಭೋಗಕ್ಕೆ ಹರಿವಾತ | ಕರ್ಮವಶದೊಳಮೃತವನು |
ನಿರ್ಮಲಸೌಖ್ಯ ಕಾರಣವೆಂದರಿಯದೆ | ದುರ್ಮತಿ ಕಾಲ್ಗೊಳೆವಂತೆ ||
ಬಾಲಕನೆಂದು ಕೃಪೆಯ ಮಾಡಿ ಬಿಡನವ | ಮೇಲೆನಿಸುವ ಹಿರಿಯರನು |
ಪಾಲಿಸಬೇಕೆಂಬವನಲ್ಲ ಮನದಲ್ಲಿ | ಕಾಲನೆಂಬವ ಪಾತಕನು ||
ನಿನ್ನ ನಚ್ಚಿದ ದೇಹ ಹೆಂಡಿರು ಮಕ್ಕಳು | ನಿನ್ನ ಧನವ ತಿನ್ನು ವರು |
ನಿನ್ನ ನಂತಕ ಬಂದೆಯದೊಯ್ದ ವೇಳೆಯೊಳ್ | ನುಣ್ಣನೆ ಕೆಲಕೆ ಸಾರುವರು |
ಜೀವನು ಪೋಗೆ ತಮ್ಮಣದಲ್ಲಿ ಹೆಣನೆಂದು | ಓವದೆ ಸುಡುವರು ಬೇಗ |
ತೀವಿದ ಗುಣವಿಲ್ಲದಿರೆ ನಡೆವೆಣನೆಂಬ | ರೀವಿಧ ನೋಡಿರೆ ದೇಹ ||
ಇವನ ಚರಿತೆಯನ್ನು ನೋಡಿ.