ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ]

                   ತೋಂಟದಸಿದ್ದೇಶ್ವರ.
                    ಗಂಗಾಧರಾಚಾರ್, ಸು 1470 
    ಈತನು ಆರಾಧ್ಯಚಾರಿತ್ರವನ್ನು ಬರೆದ ನೀಲಕಂಠಾಚಾರ್ಯನ (ಸು, 1485) ಗುರು, ಇವನನ್ನು ನೀಲಕಂಠಾಚಾರ್ಯನು ತನ್ನ ಗ್ರಂಥದಲ್ಲಿ ಕರ್ಣಾ ಟಸಂಸ್ಕೃತಭಾಷಾ ಪ್ರವೀಣನೆಂದೂ ಶಿವಾಗಮಬೋಧಕನೆಂದೂ ಈ ಪದ್ಯದಲ್ಲಿ ಸ್ತುತಿಸಿದ್ದಾನೆ..
        ಮಿನುಸ ಕರ್ಣಾಟಸಂಸ್ಕೃತಶಬ್ದಶಾಸ್ತ್ರದಿಂ |
        ಕನದಮಲಮಾದ ಸವಿನುಡಿಪಸರದೆಸಕದಿಂ | 
        ಜನವಿತಾನದ ಕಿವಿಗೆ ಮಾಣಿಕ್ಯ ಖಚಿತನೂತ್ನಾಭರಣಮಂ ರಚಿಸುತೆ || 
        ಮನಸಿಜಾಂತಕನಾಗಮಂಗಳಂ ಭಕ್ತರ್ಗೆ | 
        ಮನವೊಸದು ಬೋಧಿಸುತ್ತೆನಗೆಸದ್ವಿದ್ಯೆಯಂ |
        ವಿನಯದಿಂದಿತ್ತ ಗಂಗಾಧರಾಚಾರಂಗೆ ವಂದಿಪೆಂ ಭಕ್ತಿಯಿಂದೆ || 
   ಈತನು ಕವಿ ಎಂಬುದರಲ್ಲಿ ಸಂದೇಹವಿಲ್ಲ. ಅವ ಗ್ರಂಥಗಳನ್ನು ಬರೆದಿದ್ದಾನೆಯೋ ತಿಳಿಯದು.
                    ತೋಂಟದಸಿದ್ದೇಶ್ವರ ಸು. 1470 
    ಈತನು ಷಟ್ಟಲಜ್ಞಾನಸಾರಾಮೃತವನ್ನು ಬರೆದಿದ್ದಾನೆ. ಇವನು ವೀರಶೈವಕವಿ. ಇವನಿಗೆ ತೋಂಟದಸಿದ್ದಲಿಂಗಯತಿ ಎಂಬ ಹೆಸರೂ ಉಂಟು. ಇವನು ಹರದನಹಳ್ಳಿ ಗೋಸಲಚನ್ನಬಸವೇಶ್ವರನ ಶಿಷ್ಯನು. ಕಗ್ಗೆರೆಯ ಸಮೀಪದಲ್ಲಿರುವ ನಾಗಿಣೀನದಿಯ ತೀರದಲ್ಲಿ ತೋಂಟದೊಳಗೆ ಬಹಳಕಾಲ ಶಿವಯೋಗದಲ್ಲಿ ಇದ್ದುದರಿಂದ ಈತನಿಗೆ “ತೋಂಟದ” ಎಂಬ ವಿಶೇಷಣವು ರೂಢಿಯಾಗಿ ಬಂದಿದೆ. ಇವನು ಕುಣಿಗಲಿಗೆ ಸವಿಾಪದಲ್ಲಿರುವ ಎಡೆಯೂರಲ್ಲಿ ಸಮಾಧಿಯನ್ನು ಹೊಂದಿದನು. ಆ ಊರಲ್ಲಿ ಈತನ ಜ್ಞಾಪ ಕಾರ್ಥವಾಗಿ ಕಟ್ಟಿಸಿದ ಸಿದ್ದಲಿಂಗೇಶ್ವರನೆಂಬ ಒಂದು ದೇವಸ್ಥಾನವು ಈಗಲೂ ಇದೆ. ಈತನು ವೀರಶೈವರಲ್ಲಿ ಬಹಳ ಪ್ರಸಿದ್ಧನಾದ ಗುರು. ಇತನ ಚರಿತೆಯನ್ನು ಕುರಿತು ಹಲವು ಗ್ರಂಥಗಳು ಹುಟ್ಟಿವೆ. ಇವುಗಳಲ್ಲಿ ಈತನು “ನಿರಂಜನಗಣೇಶ್ವರನ ಅಪರಾವತಾರ” ವೆಂದು ಹೇಳಿದೆ, ಮೇಲೆ ಹೇಳಿದ ಸಿದ್ಧಲಿಂಗೇಶ್ವರದೇವಸ್ಥಾನದ ಪ್ರಾಕಾರದಲ್ಲಿ ಸುಮಾರು 150೦ ರಲ್ಲಿ ಬರೆದ

13