ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

96

                       ಕರ್ಣಾಟಕ ಕವಿಚರಿತೆ.      [15 ನೆಯ
                ವಿದ್ಯಾನಂದ. 1455  
   ಈತನು ಪ್ರಾಯಶ್ಚಿತ್ತವೆಂಬ ಸ್ವರಚಿತಸಂಸ್ಕೃತಗ್ರಂಥಕ್ಕೆ ಕನ್ನಡ ಟೀಕೆಯನ್ನು ಬರೆದಿದ್ದಾನೆ. ಇವನು ಜೈನಕವಿ: ಬ್ರಹ್ಮಸೂರಿಯ ಅಥವಾ ಬೊಮ್ಮರಸೋಪಾಧ್ಯಾಯನ ಮಗನು. ಅಕಲಂಕ, ಚಂದ್ರಪ್ರಭ, ವಿದ್ಯಾ ನಂದ ಇವರುಗಳನ್ನು ತನಗೆ ವ್ರತಗುರುವಿದ್ಯಾಗುರುತ್ರೆಯ ಎಂದು ಹೇಳಿದ್ದಾನೆ. ಅಲ್ಲದೆ ವಿಜಯಕೀರ್ತಿ ಎಂಬ ಗುರು ಬಾಲ್ಯದಿಂದ ಉಪದೇಶ ಮಾಡಿ ಪಾಲಿಸಿದನು ಎನ್ನುತ್ತಾನೆ. ಮೂಲದ ಆರಂಭದಲ್ಲಿ ವಿಜಯಜಿನಸ್ತು ತಿಯಿದೆ. ಈ ವಿಜಯಜಿನನು ಕನಕಗಿರಿಯೆಂಬ ನಾಮಾಂತರವುಳ್ಳ ಮಲೆ ಯೂರ ದೇವರು. ಕವಿ ಆಪ್ರಾಂತದವನಾಗಿರಬಹುದು. ಯುವಸಂವತ್ಸರದಲ್ಲಿ ಗ್ರಂಥವನ್ನು ಬರೆದಂತೆ ಹೇಳಿದೆ. ಇದು ಕ್ರಿಸ್ತ 1455 ಆಗಿರಬಹುದೆಂದು ತೋರುತ್ತದೆ. ಇವನ ವ್ಯಾಖ್ಯಾನವು ಪ್ರೌಢವಾಗಿ ಹಳಗನ್ನಡದಲ್ಲಿ ಬರೆಯಲ್ಪಟ್ಟಿದೆ. ಅಲ್ಲಲ್ಲಿ ಕಂದಗಳೂ ವೃತ್ತಗಳೂ ಉದಾಹೃತವಾ ಗಿವೆ. ಇವುಗಳನ್ನು ಗ್ರ೦ಧಾಂತರದಿಂದ ಅನುವಾದಮಾಡಿದಂತೆ ತೋರುವುದಿಲ್ಲ; ಇವು ಕವಿಕೃತವೆಂದೇ ತೋರುತ್ತದೆ. ಈ ಪದ್ಯಗಳಲ್ಲಿ ಕೆಲವನ್ನು ಕೆಳಗೆ ಬರೆಯುತ್ತೇವೆ_
                             
                       ಸತ್ಪುರುಷರು

ಎನಿತೆನಿತು ದೋಷತತಿಯೊಳ | ವನಿತಂ ಪ್ರಕಟಿಸದೆ ಸುಗುಣವೊಂದನೆ ಕೊಳ್ವಾ | ಮನುಜನೆ ಧಾರ್ಮಿಕನುತ್ತಮ | ನನೂನಗುಣಮಣಿಕರಂಡಹೃದಯಂ ಸದಯಂ | ಇನಿತೆಲ್ಲಂ ಪುಣ್ಯದ ಫಲ | ಮನಿತಂ ಸತ್ಪಾತ್ರತತಿಗೆ ದಣಿಯಿಸಿ ತನಗೊಂ | ದಿನಿಸನೆ ಸೇವಿಪ ಮನುಜನ | ಘನಪುಣ್ಯವ್ರಜದ ಬೆಳೆಯ ಕಡೆಗಾಣ್ಬವರಾರ್ ||

                         ಕರ್ಮ 

ಸಿರಿವಂತರಡಿಯೊಳಿರಿಸುವ | ಪಿರಿದುಂ ದುರ್ದೀನಹೀನಮಂ ನುಡಿಯಿಸುವಾ | ದರಿಸದೆ ನಿರ್ದಾಟಿಸಿ ಪ | ಲ್ಗಿರಿಯಿಸುವಾ ಕರ್ಮದಲ್ಲಿ ಕೋಪಿಸು ಜೀವಾ ||

                     ಗುರುದಕ್ಷಿಣೆ 

ಮಕ್ಕಳನೋದಲಿಟ್ಟು ಬಿಡದೋದಿಸುವರ್ಗೆ ಮನೀಷಿತಾರ್ಧಮಂ | ದೊಕ್ಕನೆ ಕೊಟ್ಟು ಮನ್ನಿಸದೆ ಬೇಡಿದೊಡೀಯದೆ ವಂಚನೋಕ್ತಿಯಿಂ || ಕಕ್ಕಸಮಾಗಿ ಕಾಲಮನೆ ನೂಂಕಿ ಕುಡಲ್ ಮನವಿಲ್ಲದಿರ್ದರಾ | ಮಕ್ಕಳ ಬುದ್ಧಿ ಕೆಟ್ಟು ಜಡರಪ್ಪರವಗ್ಗ೯ಳುಮುತ್ತರೋತ್ತರಂ ||