ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100 ಕರ್ಣಾಟಕ ಕವಿಚರಿತೆ. [16 ನೆಯ ಅವನ ವಿಷಯವಾಗಿ ವಿರಕ್ತತೋಂಟದಾಲ್ಯನ ಸಿದ್ದೇಶ್ವರಪುರಾಣ, ಶಾಂ ತೇಶನ (1561) ತೋಂಟದನಿದ್ದೆಶ್ವರಪುರಾಣ ಮೊದಲಾದ ಗ್ರಂಥಗಳು ಹುಟ್ಟಿವೆ, ಪ್ರಾಯಿಕವಾಗಿ ಈತನ ಕಾಲಕ್ಕೆ ಈಚೆಯ ವೀರಶೈವಕವಿಗಳ ಲ್ಲಾ ಈತನನ್ನು ತಮ್ಮ ಗ್ರಂಥಗಳಲ್ಲಿ ಸ್ತುತಿಸಿದ್ದಾರೆ. ಇವನ ಗ್ರಂಥ ಷಟ್ಟಲಜ್ಞಾನಸಾರಾಮೃತ. ಇದು ವಚನರೂಪವಾಗಿದೆ; ವಚನ 701, ವೃತ್ತ 7, ಪ್ರತಿವಚನವೂ (ಮಹಾಲಿಂಗಗುರುಶಿವಸಿದ್ದೇ ಶ್ವರಪ್ರಭುವೆ' ಎಂದು ಮುಗಿಯುತ್ತದೆ. ಇದ ರಲ್ಲಿ ಪಟ್ಟಲದ ವಿಚಾರವು ವಿಸ್ತಾರವಾಗಿ ನಿರೂಪಿಸಲ್ಪಟ್ಟಿದೆ. ಇದರಿಂದ ಕೆಲವು ವಚನಗಳನ್ನು ಉದ್ಧರಿಸಿ ಬರೆಯುತ್ತೇವೆ-- (1) ಉದಯಕಾಲದೊಳೆದ್ದು ಹೂಪತ್ರೆಗಳ ಕೊಯ್ಕೆಂದು ಹೊಡಿ ಉಪಚಾರ ಮಾಡುವುದೆಲ್ಲ ಬಡಿ'ಯ ಭಾವದ ಬವಿಲಿಕೆ ನೋಡಾ, ಅಬಿಲದೆ ಬಲದೆ ಆಯಾ ಸಬಡದೆ ಒಳಗಣ ಜ್ಯೋತಿಯ ಬೆಳಗಿನ ಕಳೆಯ ಕಮಲವ ಪೂಜಿಸಬಲ್ಲ ಶರಣಂಗೆ ಬೆಳ ಗಾಗಿ ಎದ್ದು ಪೂಜಿಸಿಹೆನೆಂಬ ಕಳವಳವೇನು ಹೇಮಾ ಮಹಾಲಿಂಗಗುರುಶಿವಸಿದ್ದೇಶ್ವರ ಪ್ರಭುವೇ (2) ನಿತ್ಯತೃಪ್ತಂಗೆ ಹಸಿವಿನ ಭಯವುಂಟೆ? ಸತ್ಯಜ್ಞಾನಿಗೆ ಅಜ್ಞಾನದ ಭಯ ವುಂಟೆ ? ವಾತಪಿತ್ತಶ್ಲೇಷ್ಮೆ ನಷ್ಟವಾದಾತಂಗೆ ತಾಪತ್ರಯಾದಿಗಳ ಭಯವುಂಟೆ ? ಸ್ವ ಯಂಜ್ಯೋತಿಪ್ರಕಾಶವುಳ್ಳಾತನು ಚಂದ್ರಸೂಕ್ಯಾದಿಗಳನಾಶ್ರಯಿಸುವನೆ ? ನಿಜದಿಂದ ತನ್ನ ತಾನ®ದು ತಾನೇ ತಾನಾದಾತನು ಮಾಯೆಯ ಗಜಬಜೆಯ ಹುಸಿಗೆ ಬೆದಕು ವನೆ ಮಹಾಶರಣನು ? ಮಹಾಲಿಂಗಗುರುಶಿವಸಿದ್ದೇಶ್ವರಪ್ರಭುವೇ (3) ತಾನೊಬ್ಬನು ಕೊಲುವರು ಹಲಬರು, ಹಲವು ದಿಕ್ಕಿನ ಕಿಚ್ಚೆದ್ದು ಸುಡುವಲ್ಲಿ ನೆಲನ ಮನೆಹೊಗಲು ಜಲಮಯವಾಯಿತ್ತು ನೋಡಾ, ಜಲದೊಳಗಾ ಅವನ ಜಲಂಧರರಕ್ಕಸ ಭಕ್ಷಿಸುತ್ತಿರಲು ಅಕಟಕಟಾ ಶಿವನೆ ಎನಲು ಮುಕ್ಕಣ್ಣ ತೆವ ದನು; ರಕ್ಕಸನ ಸೊಕ್ಕು ಮುoಯಿತ್ತು, ಕೊಲುವರು ಹಲಬರು ನೆಲನ ಬಿಟ್ರೋ ಡಿದರು, ಹಲವು ದಿಕ್ಕಿನ ಕಿಚ್ಚು ಕೆಟ್ಟಿತ್ತು, ನೆಲ ಕರಗಿತ್ತು, ಜಲವಂತಿತ್ತು, ಜಲ ಧಿಯ ಸಾಗರವ ದಾಂಟಿ ಅಮೃತಸಾಗರವ ಬೆರಸಿ ಅನುಪಮಸುಖಿಯಾನಯ್ಯ ಮಹಾ ಲಿಂಗಗುರುಶಿವಸಿದ್ಧೇಶ್ವರಪ್ರಭುವೇ, .