ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ಹೆಸರುಗೊತ್ತಿಲ್ಲದ ವಚನಕಾರರು. 113 (2) ಅಡಗ ತಿಂಬರು ಕಣಕದಡಿಗೆಯಿರಿ ; ಸುರೆಯ ಕುಡಿವರು ಹಾಲಿರಿ ; ಮುಕ್ಕುವರು ಬಂಗಿಯ ಸಕ್ಕರೆಯಿರಿ ; ಸ್ವಸೀಯಿದ್ದಂತೆ ಪರಸ್ತ್ರೀಯರಿಗೆ ಅಟಿಪುವರು ; ಸತ್ತ ನಾಯ ಭಕ್ಷಿಸುವ ಹಡಿಕಿಗರನೇನೆಂಬೆನಯ್ಯಾ ರಾಮನಾಧ. (3) ಮರದೊಳಗೆ ಮಂದಾಗ್ನಿ ಯನುರಿಯದಂತಿರಿಸಿದೆ ; ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ ; ಶರೀರದೊಳಗಾತ್ಮನನಾರುಂ ಕಾಣದಂತಿರಿಸಿದೆ , ನೀ ಬೆರಸಿಹ ಭೇದಕ್ಕೆ ಬೆರಗಾದೆನಯ್ಯ ರಾಮನಾಧ. (4) ಹರ ತನ್ನ ಭಕ್ತರ ತನ್ನಂತೆ ಮಾಡುವ, ಒರೆದು ನೋಡುವ ಸುವರ್ಣದ ಚಿನ್ನದಂತೆ : ಅರೆದು ನೋಡುವ ಚಂದನದಂತೆ ; ಆರಿದು ನೋಡುವ ಕಬ್ಬಿನ ಕೋಲಿ ನಂತೆ ; ಬೆದದೆ ಬೆಚ್ಚದೆ ಇದ್ದಡೆ ಕರವಿಡಿದೆತ್ತಿಕೊಂಬ ನಮ್ಮ ರಾಮನಾಧನು 22, ಸಂಗಯ್ಯ, ಕೆಲವು ವಚನಗಳಲ್ಲಿ ಸಂಗಯ್ಯಪ್ರಿಯಬಂಕೇಶ್ವರ ಎಂಬ ಅಂಕಿತ ವಿದೆ, ಪಾಲ್ಕುರಿಕೆ ಸೋಮನಿಗೆ (ಸು, 1195) ಸಂಗಯ್ಯನೆಂಬ ಒಬ್ಬ ಶಿಷ್ಯನಿದ್ದಂತೆ ತಿಳಿಯುತ್ತದೆ. ಈ ವಚನಗಳನ್ನು ಇವನು ರಚಿಸಿರಬಹುದೋ ಏನೋ ತಿಳಿಯದು. ವಚನ ಅಡಿಗಡಿಗೆ ಬಂದು ಅಡರುತ್ತಿದ್ದೆ ಕಡುಚಲ ನಿನಗೆ ಬೇಡ ಕಂಡೆಯ ಮೃಡನೆ ಎನ್ನೊಡನೆ ತೊಡರಿ ನೀನು ಸಸಿನೆ ಹೋಗಲರಿಯೆ, ಅದು ಹೇಗೆಂದಡೆ ನಾನು ನಿನಗಂಜುವನಲ್ಲ, ಗಾಸಿಯಾಗಬೇಡ ಕಂಡೆಯಾ, ಹರಹರಾ ಶಂಕರಾ! ಎನ್ನ ನೇಮಕ್ಕೆ ಅಡ್ಡಬಾರದಿರು, ಒಡವೆ ಸವೆದಡೆ ಒಡಲನೊಡು ವೆ, ಕಡಗಿ ನೋಡಬವಡೊಮ್ಮೆ ಹಟಿಚು, ಬಂದು ಬಡವನಕೈಯ ಕಡುಹ ನೋಡೆನ್ನೊಡೆಯ ಸಂಗಯ್ಯಪ್ರಿಯ ಬಂಕೇಶ್ವರ. ಇದುವರೆಗೂ ಹೇಳಿದ ಕವಿಗಳು ಬಸವನ ಸಮಕಾಲದವರೂ ಅವ ನಿಗಿಂತ ಸ್ವಲ್ಪ ಈಚೆಯವರೂ ಆಗಿದ್ದಾರೆ. ಹೆಸರುಗೊತ್ತಿಲ್ಲದ ವಚನಕಾರರು ಇನ್ನು ಕೆಲವು ವಚನಗಳಲ್ಲಿ ಈ ಅಂಕಿತಗಳು ದೊರೆಯುತ್ತವೆ-- ಮಹಾಲಿಂಗಕಲ್ಲೇಶ್ವರ, ಮಹಾಲಿಂಗಗಜೇಶ್ವರ, ಮಹಾಲಿಂಗಪುರಾಂತಕ ದೇವ, ಮಹಾಲಿಂಗಚೆನ್ನ ರಾಮ, ರಾಮೇಶ್ವರಲಿಂಗ, ಸದಾಶಿವಮೂರ್ತಿಲಿಂಗ, ಸಿದ್ದ [, Vol. 1, 229