ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

316 ಕರ್ಣಾಟಕ ಕವಿಚರಿತೆ [16 ನೆಯ ಸೋಮೇಶ್ವರಲಿಂಗ, ಹುಲಿಗೆರೆಯಸೋಮೇಶ್ವರ, ಉಳಿಯುಮೇಶ್ವರ, ಶಂಭುಜಕ್ಕೇ ಶ್ವರ, ಶಾಂತಮಲ್ಲಿಕಾರ್ಜುನಯ್ಯ, ಕಾಮಭೀಮಜೀವದನದೊಡೆಯ, ಗುರುಸಿದ್ದ ಮಲ್ಲ, ನಾರಾಯಣಪ್ರಿಯರಾಮನಾಧ, ಮಾರೇಶ್ವರ, ಕಾಮಧೂಮಧೂಳೇಶ್ವರ, ಪುಣ್ಯಾರಣ್ಯದಹನಭೀಮೇಶ್ವರಲಿಂಗನಿರಂಗಸಂಗ, ಅರ್ಕೇಶ್ವರಲಿಂಗ, ಅಲೆಕನಾಧ, ಚಂ ಡೇಶ್ವರಲಿಂಗ, ಸೌರಾಷ್ಟ್ರ ಸೋಮೇಶ್ವರ, ಗಜೇಶ್ವರ, ಮಧುಕೇಶ್ವರ, ಚೆನ್ನಬಸವ "ಪ್ರಿಯ ಭೋಗಮಲ್ಲಿಕಾರ್ಜುನ, ಈಶಾನ್ಯ ಮೂರ್ತಿ ಮಲ್ಲಿಕಾರ್ಜುನಲಿಂಗ, ನಂದ ಗೋಪಿಯಕಂದಪ್ರಿಯ ನಿಸ್ಸಂಗಲಿಂಗರಾಮನಾಧ, ನಿಜಗುರುಶಾಂತೇಶ್ವರ, ಎಣಾಂಕ ಧರಸೋಮೇಶ್ವರಲಿಂಗ, ಭೌಂಭೇಶ್ವರ, ನಾಸ್ತಿನಾದ, ಸದ್ಯೋಜಾತಲಿಂಗ ಸಂಗಮೇ ಶ್ವರಲಿಂಗ, ಗೋಪತಿನಾಧವಿಶ್ವೇಶ್ವರ, ಅಭಿನವಮಲ್ಲಿಕಾರ್ಜುನ, ಶಂಭುಸೋಮನಾಥ ಲಿಂಗ, ಸಿದ್ದ ಸೋಮೇಶ, ಪರದಮಲ್ಲಯ್ಯ, ಸದುರುಶಂಭುಸೋಮೇಶ್ವರ, ಸಂಗ ಪ್ರಭು, ಹಂಪೆಯವಿರುಪಯ್ಯ, ಹುಲಿಗೆರೆಯವರದಸೋಮೇಶ, ರೇಕನಾಧಯ್ಯ, ಘನ ಗುರುಪ್ರಿಯಸೋಮನಾಧ. ಇವುಗಳಲ್ಲಿ ಆವ ಅಂಕಿತವನ್ನು ಆವ ವಚನಕಾರನು ಉಪಯೋಗಿಸಿ ರುವನೋ ತಿಳಿಯದು, ಆದರೂ ಅಂಕಿತಗಳನ್ನೇ ಹೇಳಿ ಕೆಲವು ವಚನಗ ಳನ್ನು ಇಲ್ಲಿ ಉದಾಹರಿಸುವುದು ಯುಕ್ತವೆಂದು ತೋರುತ್ತದೆ. ಗ್ರಂಧಾಂ ತರಗಳಿಂದ ಮುಂದೆ ಈ ಅಂಕಿತಗಳನ್ನು ಉಪಯೋಗಿಸಿರುವ ಕವಿಗಳ ಹಸರುಗಳು ಗೊತ್ತಾದರೂ ಆಗಬಹುದು ಈ ಕವಿಗಳಲ್ಲಿ ಕೆಲವರು ಬಸ ವನ ಸಮಕಾಲದವರೂ ಆಗಿರಬಹುದು, ಏವಂತ ಇವರೆಲ್ಲರೂ 1475ಕ್ಕೆ ಹಿಂದೆ ಇದ್ದವರು. ವಚನಗಳು 23 ಮಹಾಲಿಂಗಕಲ್ಲೇಶ್ವರ (1) ಹಗಲು ಹಸಿವಿಗೆ ಕುದಿದು ಇರುಳು ನಿದ್ರೆಗೆ ಮಲಗಿ ಉದಾದ ಹೊತ್ತೆಲ್ಲ ವಿಷಯದಲ್ಲಿ ಬೆಂದು ನಾ ನಿಮ್ಮ ದೆಸೆಯಯದ ಪಾಪಿ ನೋಡಯ್ಯಾ, ನಾ ನಿಮ್ಮ ದೆಸೆಯ ರಿಯದ ಕರ್ಮಿ ನೋಡಯ್ಯಾ, ಮಹಾಲಿಂಗಕಲ್ಲೇಶ್ವರ! ಅಸಗ ನೀರಡಸಿ ಸಾವತೆಅನಂತೆ ಎನ್ನ ಯುಕ್ತಿ, (2) ಒಲಿದು ಒಲಿಸಿಕೊಳ್ಳಬೇಕು. ಒಲಿದಲ್ಲದೆ ಇಲ್ಲ, ಹಲವು ಕೊಂಬೆಗೆ ಹಾಕದಿರು ಮರುಳೆ, ಅಟ್ಟಿ ನೋಡುವ; ಮುಟ್ಟಿ ನೋಡುವ; ತಟ್ಟಿ ನೋಡುವ; ಒತ್ತಿ